ಜಾಮೀನಿನ ಮೇಲೆ ಫಾರೂಕ್ ಅಬ್ದುಲ್ಲಾ ಸಹೋದರಿ, ಪುತ್ರಿ ಬಿಡುಗಡೆ

ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಮತ್ತು ಮಗಳು ಸಫಿಯಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Last Updated : Oct 17, 2019, 12:37 PM IST
ಜಾಮೀನಿನ ಮೇಲೆ ಫಾರೂಕ್ ಅಬ್ದುಲ್ಲಾ ಸಹೋದರಿ, ಪುತ್ರಿ ಬಿಡುಗಡೆ title=

ನವದೆಹಲಿ: ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ ಕಾರಣದ ಮೇಲೆ ಮಂಗಳವಾರ ಬಂಧಿತರಾಗಿದ್ದ ರಾಷ್ಟ್ರೀಯ ಸಮ್ಮೇಳನ (ಎನ್‌ಸಿ) ಅಧ್ಯಕ್ಷ ಹಾಗೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಮತ್ತು ಮಗಳು ಸಫಿಯಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೈಯಲ್ಲಿ ಕಪ್ಪು ಬಣ್ಣದ ಬಟ್ಟೆ ಮತ್ತು ಕೈಯಲ್ಲಿ ಫಲಕವನ್ನು ಹಿಡಿದು ಮಹಿಳೆಯರ ಗುಂಪು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗುವಂತೆ ಪೊಲೀಸರು ಸೂಚಿಸಿದರೂ, ಇದಕ್ಕೆ ಜಗ್ಗದ ಕಾರಣ, ಪ್ರತಿಭಟನೆಯ ಮುಂದಾಳತ್ವ ವಹಿಸಿದವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು..

ಶ್ರೀನಗರದ ಲಾಲ್ ಚೌಕ್ ಬಳಿಯ ಪ್ರತಾಪ್ ಪಾರ್ಕ್ ನಲ್ಲಿ ಫ್ಲೆಕಾರ್ಡ್ ಹಿಡಿದು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯರನ್ನು ಬಂಧಿಸಲಾಗಿತ್ತು. 

Trending News