ನಾಸಿಕ್: ರೈತರಿಂದ ಪ್ರತಿ ಕೆಜಿಗೆ 1.50 ರೂ. ಕೊಟ್ಟು ಕೊಂಡ ಟೊಮ್ಯಾಟೋವನ್ನು ಮುಂಬೈನಲ್ಲಿ ಎಷ್ಟಕ್ಕೆ ಮಾರಾಟ ಆಗ್ತಿದೆ ಗೊತ್ತಾ?

ಕೆಲವು ತಿಂಗಳ ಹಿಂದೆ ಟೊಮ್ಯಾಟೋಗಳನ್ನು ಕೆಜಿಗೆ 100 ರೂಪಾಯಿಗಳಿಗೆ ಮಾರಾಟ ಮಾಡಲಾಯಿತು ಮತ್ತು ನಿಮ್ಮ ಸುತ್ತಲಿನ ಮಾರುಕಟ್ಟೆಯಲ್ಲಿ 30 ರಿಂದ 35 ರೂಪಾಯಿಗಿಂತ ಕಡಿಮೆ ದರದಲ್ಲಿ ಲಭ್ಯವಿಲ್ಲ. ಸಗಟು ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟು ಅಂತಾ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಿ.

Last Updated : Aug 31, 2018, 04:07 PM IST
ನಾಸಿಕ್: ರೈತರಿಂದ ಪ್ರತಿ ಕೆಜಿಗೆ 1.50 ರೂ. ಕೊಟ್ಟು ಕೊಂಡ ಟೊಮ್ಯಾಟೋವನ್ನು ಮುಂಬೈನಲ್ಲಿ ಎಷ್ಟಕ್ಕೆ ಮಾರಾಟ ಆಗ್ತಿದೆ ಗೊತ್ತಾ? title=

ನಾಸಿಕ್: ಕೆಲವು ತಿಂಗಳ ಹಿಂದೆ ಟೊಮ್ಯಾಟೋಗಳನ್ನು ಕೆಜಿಗೆ 100 ರೂಪಾಯಿಗಳಿಗೆ ಮಾರಾಟ ಮಾಡಲಾಯಿತು ಮತ್ತು ನಿಮ್ಮ ಸುತ್ತಲಿನ ಮಾರುಕಟ್ಟೆಯಲ್ಲಿ 30 ರಿಂದ 35 ರೂಪಾಯಿಗಿಂತ ಕಡಿಮೆ ದರದಲ್ಲಿ ಲಭ್ಯವಿಲ್ಲ. ಸಗಟು ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟು ಅಂತಾ ಕೇಳಿದರೆ ನೀವು ನಿಜಕ್ಕೂ ಆಘಾತಕ್ಕೊಳಗಾಗುತ್ತೀರಿ. ರೈತರು ಟೊಮೆಟೊಗಳನ್ನು ಮಾರಾಟ ಮಾಡುವ ಬೆಲೆ ಮತ್ತು ನೀವು ಅದನ್ನು ಖರೀದಿಸುವ ಬೆಲೆ ನಡುವೆ ಸುಮಾರು 20 ಪಟ್ಟು ವ್ಯತ್ಯಾಸವಾಗಿದೆ.

ನಾಸಿಕ್ ನ ಸಗಟು ಮಾರುಕತ್ತಿಯಲ್ಲಿ ಪಾತಾಳದಲ್ಲಿರುವ ಬೆಲೆ ಮುಂಬೈ ಮಾರುಕಟ್ಟೆಯಲ್ಲಿ ಗಗನಕ್ಕೇರಿರುತ್ತವೆ. ನಾಸಿಕ್ ಸಗಟು ಮಾರುಕಟ್ಟೆ ರೈತರಿಂದ ಪ್ರತಿ ಕೆಜಿಗೆ ಒಂದರಿಂದ 01:30 ರೂ. ನಿಂದ 3 ರೂ. ಒಳಗೆ ಕೊಳ್ಳಲಾಗುತ್ತದೆ. ಮುಂಬೈನಲ್ಲಿ ಅದು 30 ರಿಂದ 35 ರೂಪಾಯಿಗಳವರೆಗೆ ಮಾರಾಟವಾಗುತ್ತವೆ.

ರೈತರ ಸಮಸ್ಯೆ:
ನಾಸಿಕ್ ನ ಪಿಂಪಲ್ಗಾವ್ ಮಂಡಿಯಲ್ಲಿ ಟೊಮೇಟೊ ಮಾರಲು ಬಂದ ರೈತರಿಗೆ ಪ್ರತಿ ಕೆಜಿ ಟೊಮೇಟೊಗೆ ಒಂದೂವರೆ ಇಂದ ಮೂರು ರೂ. ವರೆಗೆ ಬೆಲೆ ನೀಡಲಾಯಿತು. ಮಂಡಿಯಲ್ಲಿ ರೈತರ ಶ್ರಮವನ್ನೂ ಪರಿಗಣಿಸದೆ ಇರುವುದನ್ನು ಕಂಡು ಕುಪಿತಗೊಂಡ ರೈತರು ಮಂಡಿಯ ಗೇಟ್ ಮುಂದೆ ಹಾಗೂ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಟೊಮೇಟೊ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಅದೇ ರೀತಿ, ನಾಶಿಕ್ ಮಂಡಿಯಲ್ಲಿ ಕೊತ್ತಂಬರಿ ಮಾರಾಟ ಮಾಡುವ ರೈತರಿಗೆ ಚೀಲಕ್ಕೆ ಎರಡು ರಿಂದ ಮೂರು ರೂಪಾಯಿಗಳ ಬೆಲೆ ನೀಡಲಾಯಿತು. ಈ ಬೆಲೆಗೆ ಮಾರಾಟ ಮಾಡುವುದಕ್ಕಿಂತಲೂ ಅದನ್ನು ಹಾಗೆ ಎಸೆದು ಹೋಗುವುದೇ ಉತ್ತಮ ಎಂದು ರೈತರು ಹೇಳುತ್ತಾರೆ. ಮುಂಬೈನಲ್ಲಿ ಪ್ರತಿ ಕೆಜಿ ಟೊಮೇಟೊವನ್ನು 20-25 ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಒಂದು ದೊಡ್ಡ ಕೊತ್ತಬರಿ ಕಟ್ಟಿನ್ನು 15-20 ರೂ. ಗಳಿಗೆ ಮಾರಲಾಗುತ್ತದೆ.

ಎಪಿಎಂಸಿ ಮಾರುಕಟ್ಟೆಯಿಂದ ಟೊಮೆಟೊ ಕೆಜಿಗೆ 13 ರೂಪಾಯಿಗಳಷ್ಟು ಮೌಲ್ಯದ್ದಾಗಿದೆ ಎಂದು ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ಅಂಗಡಿಯವರು ಹೇಳುತ್ತಾರೆ.

ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಹಣವನ್ನು ನೀಡುತ್ತಿಲ್ಲ ಎಂದು ಅಂಗಡಿಯವರು ನಂಬುತ್ತಾರೆ. ರೈತರಿಗೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವಂತಾಗಬೇಕು. ದಲ್ಲಾಳಿಗಳ ಹಾವಳಿ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ.

Trending News