ತಮಿಳುನಾಡು : ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ರೈತರು ಇಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ತಮಿಳುನಾಡಿನ ತಿರುಚಿರಾಪಲ್ಲಿಯ ಕಾವೇರಿ ನದಿ ದಂಡೆಯಲ್ಲಿ ಮರಳಿನಲ್ಲಿ ತಮ್ಮನ್ನು ತಾವು ಭಾಗಶಃ ಸಮಾಧಿ ಮಾಡಿಕೊಳ್ಳುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.
#WATCH Tamil Nadu:Farmers in Trichy protest by partially burying themselves in sand on banks of Cauvery river, demand the formation of #CauveryManagementBoard. Farmer Leader Ayyakannu also present pic.twitter.com/5acGOu4OTX
— ANI (@ANI) April 6, 2018
ಆದರೆ, ಕೆಲ ಸಮಯದ ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪೊಲೀಸರು ರೈತರನ್ನು ಮರಳಿನಿಂದ ಹೊರಗೆ ಕರೆತಂದರು.
Tamil Nadu: Farmers in Trichy who were protesting by partially burying themselves in sand on banks of Cauvery river demanding the formation of #CauveryManagementBoard , have been evicted by Police pic.twitter.com/HaZh9MGGnA
— ANI (@ANI) April 6, 2018
ಡಿಎಂಕೆ ಹಾಗೂ ಇತರ ಪಕ್ಷಗಳು ಕರೆ ನೀಡಿದ್ದ ಬಂದ್ನಿಂದಾಗಿ ತಮಿಳುನಾಡಿನಲ್ಲಿ (ಏ.5)ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ, ಮಂಡಳಿ ರಚನೆಗೆ ಒತ್ತಾಯಿಸಿ ಏಪ್ರಿಲ್ 11ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಕಳೆದ ಫೆ.16ರಂದು ಕಾವೇರಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಆರು ವಾರದೊಳಗೆ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಮೂರು ತಿಂಗಳು ಕಳೆದರೂ ಮಂಡಳಿ ರಚನೆಯಾಗದಿರುವುದು ರಾಜಕೀಯ ಮತ್ತು ರೈತ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರದ ವಿರುದ್ಧ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಕೂಡ ದಾಖಲಿಸಿದ್ದು ಏ.9ರಂದು ಪ್ರಕರಣದ ವಿಚಾರಣೆ ನಡೆಯಲಿದೆ.