ಪ್ರಿಯತಮೆಯ ಭೇಟಿಗಾಗಿ ಇಡೀ ಗ್ರಾಮದಲ್ಲಿ ಕರೆಂಟ್ ಕಟ್ ಮಾಡಿದ್ದ ಎಲೆಕ್ಟ್ರಿಷಿಯನ್..!

ಪ್ರೀತಿ ಎಂದರೇನೆ ಹಾಗೇ... ಅದು ಒಮ್ಮೊಮ್ಮೆ ಹುಚ್ಚುತನಕ್ಕೆ ತಿರುಗಿಬಿಡುತ್ತದೆ...ಈಗ ಇಂತಹದದ್ದೇ ಹುಚ್ಚುತನದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.ಕತ್ತಲೆಯ ಸಮಯದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಎಲೆಕ್ಟ್ರಿಷಿಯನ್ ನ್ನು ಈಗ ಗ್ರಾಮಸ್ಥರು ತಳಿಸಿದ್ದಾರೆ.

Written by - Zee Kannada News Desk | Last Updated : May 11, 2022, 06:33 PM IST
  • ಇದಾದ ನಂತರ ಎಲೆಕ್ಟ್ರಿಷಿಯನ್ ರನ್ನು ಮನಬಂದಂತೆ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
  • ತನ್ನ ಗೆಳತಿಯನ್ನು ಭೇಟಿಯಾಗಲು ಇಚ್ಛಿಸಿದಾಗಲೆಲ್ಲ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಆ ವ್ಯಕ್ತಿ ಗ್ರಾಮಸ್ಥರಿಗೆ ಹೇಳಿದ್ದಾನೆ.
  • ಇದಾದ ನಂತರ ಗ್ರಾಮಸ್ಥರು ಇಬ್ಬರಿಗೂ ಮದುವೆ ಮಾಡಿದ್ದಾರೆ.
ಪ್ರಿಯತಮೆಯ ಭೇಟಿಗಾಗಿ ಇಡೀ ಗ್ರಾಮದಲ್ಲಿ ಕರೆಂಟ್ ಕಟ್ ಮಾಡಿದ್ದ ಎಲೆಕ್ಟ್ರಿಷಿಯನ್..! title=

ನವದೆಹಲಿ: ಪ್ರೀತಿ ಎಂದರೇನೆ ಹಾಗೇ... ಅದು ಒಮ್ಮೊಮ್ಮೆ ಹುಚ್ಚುತನಕ್ಕೆ ತಿರುಗಿಬಿಡುತ್ತದೆ...ಈಗ ಇಂತಹದದ್ದೇ ಹುಚ್ಚುತನದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.ಕತ್ತಲೆಯ ಸಮಯದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಎಲೆಕ್ಟ್ರಿಷಿಯನ್ ನ್ನು ಈಗ ಗ್ರಾಮಸ್ಥರು ತಳಿಸಿದ್ದಾರೆ.

ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ'

ಪೂರ್ವ ಬಿಹಾರದ ಪುರ್ನಿಯಾ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ಸಂಜೆಯ ನಿರ್ದಿಷ್ಟ ಸಮಯದಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿತ್ತು,ಈ ಸಂದರ್ಭದಲ್ಲಿ ಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ದ್ವೀಪಗಳು ಉರಿಯುತ್ತಿದ್ದರೆ ತಮ್ಮ ಗ್ರಾಮದಲ್ಲಿ ಮಾತ್ರ ವಿದ್ಯುತ್ ಕಡಿತವಾಗುತ್ತಿರುವುದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಕಾರಣವಾಗಿತ್ತು.ಕೊನೆಗೆ ಇದನ್ನು ತನಿಖೆಗೆ ಒಳಪಡಿಸಲು ಮುಂದಾದಾಗ, ಆ ಗ್ರಾಮದ ಎಲೆಕ್ಟ್ರಿಶಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿ ಮಾಡಲು ಈ ಕೃತ್ಯವನ್ನು ಎಸಗುತ್ತಿದ್ದ ಎನ್ನಲಾಗಿದೆ.ಕೊನೆಗೆ ಇದನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಮುಂದಿನ ಬಾರಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಇಬ್ಬರು ಇರುವುದನ್ನು ಪತ್ತೆ ಹಚ್ಚಿದರು ಎನ್ನಲಾಗಿದೆ.

ಇದನ್ನೂ ಓದಿ: ಆಗಸ್ಟ್ 12ರಂದು "ಗಾಳಿಪಟ 2" ಎಲ್ಲೆಲ್ಲಿ ಹಾರಲಿದೆ ಗೊತ್ತಾ..!?

ಇದಾದ ನಂತರ ಎಲೆಕ್ಟ್ರಿಷಿಯನ್ ರನ್ನು ಮನಬಂದಂತೆ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ತನ್ನ ಗೆಳತಿಯನ್ನು ಭೇಟಿಯಾಗಲು ಇಚ್ಛಿಸಿದಾಗಲೆಲ್ಲ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಆ ವ್ಯಕ್ತಿ ಗ್ರಾಮಸ್ಥರಿಗೆ ಹೇಳಿದ್ದಾನೆ.ಇದಾದ ನಂತರ ಗ್ರಾಮಸ್ಥರು ಇಬ್ಬರಿಗೂ ಮದುವೆ ಮಾಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥ ಮಾರಾರ್ ರಾಮ್ ಮುರ್ಮು "ಸರ್ಪಂಚ್ ಮತ್ತು ಇತರ ಗ್ರಾಮ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ವ್ಯಕ್ತಿ ಹುಡುಗಿಯನ್ನು ಮದುವೆಯಾಗಿದ್ದಾನೆ" ಎಂದು ತಿಳಿಸಿದರು.ಇನ್ನೊಂದೆಡೆಗೆ  ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ವಿಕಾಸ್ ಕುಮಾರ್ ಆಜಾದ್ ಅವರು ಮಾತನಾಡುತ್ತಾ 'ಘಟನೆಯ ಬಗ್ಗೆ ನಮಗೆ ತಿಳಿದು ಬಂದಿದೆ, ಆದರೆ ನಾವು ದೂರು ಸ್ವೀಕರಿಸಿದ ನಂತರ ಕ್ರಮವಹಿಸುತ್ತೇವೆ' ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News