ಚುನಾವಣಾ ಆಯೋಗದ ಹೊಸ ಮಾರ್ಗಸೂಚಿ: ಅಪರಾಧ ಪ್ರಕರಣಗಳನ್ನು ಪತ್ರಿಕೆಗಳಲ್ಲಿ 3 ಬಾರಿ ಮುದ್ರಿಸುವುದು ಕಡ್ಡಾಯ

ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ನಾಮನಿರ್ದೇಶನ ಅಭ್ಯರ್ಥಿಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. 

Last Updated : Sep 12, 2020, 09:46 AM IST
  • ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿತು
  • ಕ್ರಿಮಿನಲ್ ಹಿನ್ನೆಲೆಯ ಮಾಹಿತಿಯನ್ನು ನ್ಯೂಸ್ ಪೇಪರ್ ಮತ್ತು ಟಿವಿಯಲ್ಲಿ ಮೂರು ಬಾರಿ ನೀಡಬೇಕಾಗಿದೆ.
  • ಈ ಬದಲಾವಣೆಯೊಂದಿಗೆ ಮತದಾರರು ಅಭ್ಯರ್ಥಿಯ ಬಗ್ಗೆ ತಿಳಿದುಕೊಳ್ಳುತ್ತಾರೆ.
ಚುನಾವಣಾ ಆಯೋಗದ ಹೊಸ ಮಾರ್ಗಸೂಚಿ: ಅಪರಾಧ ಪ್ರಕರಣಗಳನ್ನು ಪತ್ರಿಕೆಗಳಲ್ಲಿ 3 ಬಾರಿ ಮುದ್ರಿಸುವುದು ಕಡ್ಡಾಯ title=

ನವದೆಹಲಿ: ರಾಜಕೀಯ ಪಕ್ಷಗಳು ಮತ್ತು ನಾಮನಿರ್ದೇಶನ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ (Election Commission) ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಅಪರಾಧ ದಾಖಲೆಗಳನ್ನು ಪ್ರಚಾರ ಮಾಡುವ ವಿಷಯದಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಪ್ರಕಾರ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳು ಮತ್ತು ಸ್ವತಂತ್ರರಿಗೆ ತಮ್ಮ ಅಪರಾಧ ಹಿನ್ನೆಲೆ ಬಗ್ಗೆ ಮೂರು ಬಾರಿ ಸುದ್ದಿ ಪತ್ರಿಕೆ ಮತ್ತು ದೂರದರ್ಶನದಲ್ಲಿ ತಿಳಿಸಬೇಕಾಗುತ್ತದೆ ಎಂಬ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ.

ಈ ರೀತಿಯಾ ಮಾಹಿತಿಯನ್ನು 3 ಬಾರಿ ನೀಡಬೇಕಾಗಿದೆ :- 

  • ಮೊದಲ ಪ್ರಚಾರ: ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕದ ಮೊದಲ 4 ದಿನಗಳಲ್ಲಿ ಮಾಹಿತಿಯನ್ನು ನೀಡಬೇಕಾಗಿದೆ.
  • ಎರಡನೇ ಪ್ರಚಾರ: ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕದಂದು ಉಳಿದ 5 ರಿಂದ 8 ದಿನಗಳಲ್ಲಿ ಮಾಹಿತಿಯನ್ನು ನೀಡಬೇಕಾಗುತ್ತದೆ.
  • ಮೂರನೇ ಪ್ರಚಾರ: ಚುನಾವಣಾ ಪ್ರಚಾರದಲ್ಲಿ 9 ದಿನಗಳು ಬಾಕಿ ಇರುವಾಗ ಚುನಾವಣಾ ಪ್ರಚಾರ ಮುಗಿಯುವ ಮೊದಲು ಈ ಮಾಹಿತಿಯನ್ನು ನೀಡಬೇಕಾಗುತ್ತದೆ. ಗಮನಾರ್ಹವಾಗಿ ಮತದಾನದ ಎರಡು ದಿನಗಳ ಮೊದಲು ಚುನಾವಣಾ ಪ್ರಚಾರ ಕೊನೆಗೊಳ್ಳುತ್ತದೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಮತ ಚಲಾಯಿಸುವವರಲ್ಲಿ ಜಾಗೃತಿ :- 
ಪಕ್ಷಗಳಿಂದ ಕಣಕ್ಕಿಳಿದ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳು ಅವಿರೋಧವಾಗಿ ಗೆಲ್ಲುತ್ತಿದ್ದರೆ, ಅವರು ಅಪರಾಧ ಹಿನ್ನೆಲೆಯ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ ಎಂದು ಆಯೋಗ ಹೇಳಿದೆ. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ನೀಡಲಾದ ಸ್ವರೂಪಗಳು ಮತ್ತು ಸೂಚನೆಗಳನ್ನು ಸಹ ಪ್ರಕಟಿಸಲಾಗಿದೆ. ಈ ಪ್ರಕ್ರಿಯೆಯು ಮತದಾರರು, ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರೊಂದಿಗೆ ಮತದಾರರು ಹೆಚ್ಚಿನ ಮಾಹಿತಿಯೊಂದಿಗೆ ತಮ್ಮ ಆಯ್ಕೆಯನ್ನು ಆರಿಸಲು ಅವಕಾಶವನ್ನು ಪಡೆಯುತ್ತಾರೆ ಎನ್ನಲಾಗಿದೆ.

ತಕ್ಷಣದಿಂದ ಜಾರಿಗೆ ಬರಲಿವೆ ಆದೇಶಗಳು :-
ಪ್ರಜಾಪ್ರಭುತ್ವದ ಸುಧಾರಣೆಗೆ ಜನರಿಗೆ ಅರಿವು ಮೂಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬುದು ನಮ್ಮ ಆದ್ಯತೆ ಎಂದು ಚುನಾವಣಾ ಆಯೋಗ ತಿಳಿಸಿದೆ.  ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಅದು ಹೇಳಿದೆ.
 

Trending News