ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ; 2019ಕ್ಕೂ ಮುನ್ನ ಮೋದಿಗೆ ಸೆಮಿಫೈನಲ್

ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರದಂದು ಪ್ರಕಟಿಸಿದೆ.

Last Updated : Oct 6, 2018, 04:03 PM IST
ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ; 2019ಕ್ಕೂ ಮುನ್ನ ಮೋದಿಗೆ ಸೆಮಿಫೈನಲ್ title=

ನವದೆಹಲಿ:ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರದಂದು ಪ್ರಕಟಿಸಿದೆ.

ಛತ್ತೀಸಘಡ್ ನಲ್ಲಿ  ಚುನಾವಣೆಯು ನವಂಬರ್ ನಲ್ಲಿ 12 ಮತ್ತು 20 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು. ಆದರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಮಾತ್ರ ಒಂದೇ ಹಂತದಲ್ಲಿ ಚುನಾವಣಾ ನಡೆಯಲಿದೆ.ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್ 28 ರಂದು ಮತದಾನ ನಡೆದರೆ, ಡಿಸೆಂಬರ್ 7 ರಂದು ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.

ಡಿ. 11ಕ್ಕೆ ಎಲ್ಲ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ,ಅಲ್ಲದೆ ಚುನಾವಣಾ ನೀತಿ ಸಂಹಿತೆಯು ಈಗಿನಿಂದಲೇ ಜಾರಿಬರಲಿದೆ ಎಂದು ಚುನಾವಣಾ ಆಯುಕ್ತರಾದ ಒ.ಪಿ ರಾವತ್ ತಿಳಿಸಿದರು.

2019 ರ ಲೋಕಸಭೆಗೂ ಮುನ್ನ ಈ ಎಲ್ಲ ಐದು ರಾಜ್ಯಗಳ ಚುನಾವಣೆ ಫಲಿತಾಂಶವು ದಿಕ್ಸೂಚಿಯಾಗಲಿದ್ದು, ಒಂದು ವೇಳೆ ಈ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದೆ ಆದಲ್ಲಿ ಮೋದಿ ಸರ್ಕಾರಕ್ಕೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಭಾರಿ  ಹೊಡೆತ ಬಿಳಲಿದೆ ಎನ್ನಲಾಗುತ್ತಿದೆ.ಆದ್ದರಿಂದ ಪಂಚ ರಾಜ್ಯಗಳ ಚುನಾವಣೆಯನ್ನು 2019 ರ ಲೋಕಸಭೆಗೂ ಮುನ್ನ ಇದು ಮೋದಿಗೆ ಸೆಮಿಫೈನಲ್ ಎಂದೇ ರಾಜಕೀಯ ವಲಯದಲ್ಲಿ ಭಾವಿಸಲಾಗುತ್ತಿದೆ.

 

Trending News