ಬಿರುಗಾಳಿಯಿಂದ ಕೂಡಿದ ಮಳೆಯ ಬಳಿಕ ದೆಹಲಿ-NCR ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ

ಕಳೆದ ಒಂದು ತಿಂಗಳ ಒಳಗೆ ದೆಹಲಿ ಸೇರಿದಂತೆ NCR ಪ್ರಾಂತ್ಯದಲ್ಲಿ ಮೂರನೇ ಬಾರಿಗೆ ಭೂಕಂಪ ಸಂಭವಿಸಿದೆ.

Last Updated : May 10, 2020, 02:48 PM IST
ಬಿರುಗಾಳಿಯಿಂದ ಕೂಡಿದ ಮಳೆಯ ಬಳಿಕ ದೆಹಲಿ-NCR ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ title=

ನವದೆಹಲಿ: ದೆಹಲಿಯಲ್ಲಿ ಇಂದು ಮಧ್ಯಾಹ್ನ 1: 45 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.5 ರಷ್ಟು ದಾಖಲಾಗಿದೆ. ದೆಹಲಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಇದಕ್ಕೂ ಮೊದಲು ಏಪ್ರಿಲ್ 12-13ರಂದು ಭೂಮಿ ಕಂಪಿಸಿದ ಅನುಭವವಾಯಿತು. ಹವಾಮಾನ ಇಲಾಖೆಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ನವದೆಹಲಿಯ 21 ದೂರದ ಪೂರ್ವ, ಪೂರ್ವ-ಉತ್ತರ ಭಾಗವಾಗಿತ್ತು ಎನ್ನಲಾಗಿದೆ.

ಇದಕ್ಕೂ ಮುನ್ನ ಏಪ್ರಿಲ್ 12 ರಂದು (ಭಾನುವಾರ) ಸಂಜೆ 5: 45 ಕ್ಕೆ ಭೂಕಂಪ ಸಂಭವಿಸಿತ್ತು. ಈ ಕಂಪನ ಎಷ್ಟು ತೀವ್ರವಾಗಿತ್ತೆಂದರೆ ಅದರ ಪರಿಣಾಮ ಮನೆಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ಅನೇಕ ಮನೆಗಳಲ್ಲಿ, ಫ್ಯಾನ್ ಗಳು ಅಲುಗಾಡುತ್ತಿರುವುದನ್ನು ಗಮನಿಸಲಾಗಿತ್ತು. ರಿಕ್ಟರ್ ಸ್ಕೇಲ್ನಲ್ಲಿ ಆದರೆ ತೀವ್ರತೆ 3.5 ರಷ್ಟು ಇತ್ತು ಎಂದು ಅಂದಾಜಿಸಲಾಗಿದೆ. ನೋಯ್ಡಾ, ದೆಹಲಿ, ಗಾಜಿಯಾಬಾದ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲೂ ಕೂಡ ಜನರು ಭೂಮಿ ಕಂಪಿಸಿದ್ದನ್ನು ಅನುಭವಿಸಿದ್ದಾರೆ. 24 ಗಂಟೆಗಳ ನಂತರ ಎರಡನೇ ಬಾರಿಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೆ ನಡುಕ ಉಂಟಾಗಿತ್ತು. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.7 ರಷ್ಟು ಅಳೆಯಲಾಗಿತ್ತು.

ಇದಕ್ಕೂ ಮೊದಲು ಕಳೆದ ವರ್ಷ ಸೆಪ್ಟೆಂಬರ್ 25 ರಂದು ಸಂಜೆ 4: 30 ರ ಸುಮಾರಿಗೆ ಈ ಪ್ರದೇಶಗಳಲ್ಲಿ ಭೂಕಂಪದ ಅನುಭವ ಉಂಟಾಗಿತ್ತು. ಆ ವೇಳೆ ಭೂಕಂಪದ ಕೇಂದ್ರ ಬಿಂದು ಇಂಡೋ-ಪಾಕಿಸ್ತಾನ ಗಡಿಯಲ್ಲಿದೆ ಎಂದು ವರದಿಯಾಗಿತ್ತು ಮತ್ತು ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟು ಅಳೆಯಲಾಗಿತ್ತು.  ಭೂಕಂಪದ ಕೇಂದ್ರವು ಲಾಹೋರ್‌ನಿಂದ 173 ಕಿಲೋಮೀಟರ್ ದೂರದಲ್ಲಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಭೂಕಂಪದ ಗರಿಷ್ಟ ಪ್ರಭಾವ ಕಂಡುಬಂದಿತ್ತು.

Trending News