ದೆಹಲಿ-ಎನ್‌ಸಿಆರ್‌ನಲ್ಲಿ ನಡುಗಿದ ಭೂಮಿ, 30 ಸೆಕೆಂಡ್‌ಗೂ ಹೆಚ್ಚು ಕಾಲ ಭೂಕಂಪನದ ಅನುಭವ

ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 30 ಸೆಕೆಂಡುಗಳಿಗೂ ಹೆಚ್ಚು ಕಾಲ ಭೂಮಿ ನಡುಗಿದ ಅನುಭವವಾಗಿದೆ.    

Written by - Ranjitha R K | Last Updated : Jan 24, 2023, 03:14 PM IST
  • ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ
  • 30 ಸೆಕೆಂಡುಗಳಿಗೂ ಹೆಚ್ಚು ಕಾಲ ಭೂಮಿ ನಡುಗಿದ ಅನುಭವ
  • ಭೂಕಂಪಗಳು ಏಕೆ ಸಂಭವಿಸುತ್ತವೆ?
ದೆಹಲಿ-ಎನ್‌ಸಿಆರ್‌ನಲ್ಲಿ ನಡುಗಿದ ಭೂಮಿ, 30 ಸೆಕೆಂಡ್‌ಗೂ ಹೆಚ್ಚು ಕಾಲ ಭೂಕಂಪನದ ಅನುಭವ title=

ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 30 ಸೆಕೆಂಡುಗಳಿಗೂ ಹೆಚ್ಚು ಕಾಲ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ  ಭೂಕಂಪದ ತೀವ್ರತೆ 5.8 ರಷ್ಟು ದಾಖಲಾಗಿದೆ. ನೇಪಾಳದಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ನೇಪಾಳ.  

ಭೂಕಂಪಗಳು ಏಕೆ ಸಂಭವಿಸುತ್ತವೆ? :
ಭೂಮಿಯೊಳಗೆ 7 ಫಲಕಗಳಿವೆ. ಅವು ನಿರಂತರವಾಗಿ ತಿರುಗುತ್ತಲೇ ಇರುತ್ತವೆ. ಈ ಫಲಕಗಳು ಎಲ್ಲಿ ಹೆಚ್ಚು ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು ಫಾಲ್ಟ್ ಲೈನ್ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ ಫಲಕಗಳ ಮೂಲೆಗಳು ತಿರುಚಿಕೊಳ್ಳುತ್ತವೆ. ಒತ್ತಡ ಹೆಚ್ಚಾದಾಗ ಫಲಕಗಳು ಒಡೆಯಲು ಪ್ರಾರಂಭವಾಗಿ ಶಕ್ತಿಯು ಹೊರಬರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಹೀಗೆ ಭೂಕಂಪ ಸಂಭವಿಸುತ್ತದೆ.

ಇದನ್ನೂ ಓದಿ : ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸರ್ಕಾರದ ಮಹತ್ವದ ನಿರ್ಧಾರ!

ಭೂಕಂಪ ಯಾವಾಗ ವಿನಾಶಕಾರಿ : 

ರಿಕ್ಟರ್ ಮಾಪಕ    ಪರಿಣಾಮ
0 ರಿಂದ 1.9   ಇದು ಸಿಸ್ಮೋಗ್ರಾಫ್ ಮೂಲಕ ಮಾತ್ರ ತಿಳಿಯುತ್ತದೆ.
2 ರಿಂದ 2.9   ಬೆಳಕಿನ ಕಂಪನ.
3 ರಿಂದ 3.9     ನಿಮ್ಮ ಬಳಿ ಟ್ರಕ್ ಹಾದು ಹೋದಂಥಹ ಪರಿಣಾಮ.
4 ರಿಂದ 4.9      ಕಿಟಕಿಗಳು ಒಡೆಯಬಹುದು. ವಾಲ್ ಹ್ಯಾಂಗಿಂಗ್ ಗಳು ಬೀಳಬಹುದು.
5 ರಿಂದ 5.9  ಪೀಠೋಪಕರಣಗಳು ಅಲುಗಾಡಬಹುದು.
6 ರಿಂದ 6.9   ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳಿಗೂ ಹಾನಿಯಾಗಬಹುದು.
7 ರಿಂದ 7.9  ಕಟ್ಟಡಗಳು ಬೀಳುತ್ತವೆ. ನೆಲದೊಳಗಿನ ಪೈಪ್‌ಗಳು ಒಡೆಯುತ್ತವೆ. 
8 ರಿಂದ 8.9   ಕಟ್ಟಡಗಳು ಸೇರಿದಂತೆ ದೊಡ್ಡ ಸೇತುವೆಗಳು ಕುಸಿಯುತ್ತವೆ.  ಸುನಾಮಿ ಭೀತಿ ಎದುರಾಗುತ್ತದೆ. 
9 ಮತ್ತು ಹೆಚ್ಚು  ಸಂಪೂರ್ಣ ವಿನಾಶ.  ಮೈದಾನದಲ್ಲಿ ನಿಂತಿದ್ದರೆ ಭೂಮಿ ಮೇಲೆ ಅಲೆಗಳು ಏಳುವಂತೆ ಕಾಣುತ್ತದೆ. ಸಮುದ್ರ ಹತ್ತಿರದಲ್ಲಿದ್ದರೆ ಸುನಾಮಿ.

ಇದನ್ನೂ ಓದಿ : Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News