ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗಂಭೀರ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಅನೇಕ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಇದ್ದಾರೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನವೇ ಭಯೋತ್ಪಾದಕರ ಉಪಸ್ಥಿತಿಯನ್ನು ಒಪ್ಪಿಕೊಂಡಿದೆ. ಎಲ್ಲರೂ ಭಯೋತ್ಪಾದನೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ ಮತ್ತು ಅವರಿಗೆ ತರಬೇತಿ ನೀಡಿ ಭಾರತಕ್ಕೆ ಕಳುಹಿಸುತ್ತದೆ. "ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನ ಗಂಭೀರವಾಗಿಲ್ಲ. ಭಯೋತ್ಪಾದಕ ಸಂಘಟನೆಗಳು, ಮೋಸ್ಟ್ ವಾಂಟೆಡ್ ವ್ಯಕ್ತಿಗಳ ವಿರುದ್ಧ ಪಾಕಿಸ್ತಾನ ಯಾವುದೇ ವಿಶ್ವಾಸಾರ್ಹ ಅಥವಾ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ" ಎಂದು ಅವರು ಹೇಳಿದ್ದಾರೆ.
ನಮ್ಮ ಸಹಯೋಗಿ ವೆಬ್ಸೈಟ್ ZEE NEWSನ WORLD EXCLISIVE ನೀಡಿರುವ ಸ್ಫೋಟಕ ಮಾಹಿತಿಯ ಬಳಿಕ ಪಾಕಿಸ್ತಾನದಲ್ಲಿ ಪ್ರಭಾವ ಕಂಡುಬರುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ , ದಾವೂದ್ ನನ್ನು ರಕ್ಷಿಸಲು ISI ಆತನಿಗೆ ಮನೆಯಿಂದ ಹೊರಬೀಳದಂತೆ ಕಡಕ್ ವಾರ್ನಿಂಗ್ ಮಾಡಿದೆ. ಅಷ್ಟೇ ಅಲ್ಲ ಆತನ ಕರಾಚಿ ಮನೆಯ ಭದ್ರತೆಯಲ್ಲಿಯೂ ಕೂಡ ISI ಏರಿಕೆ ಮಾಡಿದೆ. ಪಾಕ್ ನಲ್ಲಿರುವ ಎಲ್ಲ ಏಜೆನ್ಸಿಗಳ ಬಳಿ ತನಗೆ ಬಿಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾನೆ.
ದಾವೂದ್ ಇಬ್ರಾಹಿಂ ಕುರಿತು ಝೀ ನ್ಯೂಸ್ ನಲ್ಲಿ ವರ್ಲ್ಡ್ ಎಕ್ಸ್‌ಕ್ಲೂಸಿವ್ ಪ್ರಕಟಗೊಂಡ ಬಳಿಕ ಪಾಕಿಸ್ತಾನದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ ಮಹ್ವೀಶ್ ಅವರೊಂದಿಗಿನ ತನ್ನ ಸಂಬಂಧದ ವಿಷಯ ಹೇಗೆ ಬಹಿರಂಗಗೊಂಡಿದೆ ಎಂಬ ಕುರಿತು ದಾವೂದ್ ಇಬ್ರಾಹಿಂ ಕೂಡ ದಿಗ್ಭ್ರಮೆಗೊಂಡಿದ್ದಾನೆ. ದಾವೂದ್ ಈ ಕುರಿತು ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾವೂದ್ ಗೆಳತಿ ಮಹ್ವೀಶ್ ಹಯಾತ್, ಕಾಶ್ಮೀರ ಕುರಿತು ಹೇಳಿಕೆ ನೀಡಲು ನನ್ನನ್ನುತಡೆಯಲು ಸಾಧ್ಯವಿಲ್ಲ ಎಂದಿದ್ದಾಳೆ. ಆರೋಪಗಳಿಗೆ ಮಹ್ವೀಶ್ ಹಯಾತ್ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿರುವ ಮಹ್ವೀಶ್ - ನನ್ನ ವಿರುದ್ಧ ಮಾಡಲಾಗುತ್ತಿರುವ ಹೇಳಿಕೆಗಳಿಗೆ ನಾನು ಪ್ರಾಮುಖ್ಯತೆ ನೀಡಲು ಬಯಸುವುದಿಲ್ಲ ಎಂದಿದ್ದಾಳೆ
ವರ್ಷ 2010ರಲ್ಲಿ ಐಟಂ ಸಾಂಗ್ ಮೂಲಕ ಬೆಳ್ಳಿ ಪರೆಡೆಗೆ ಲಗ್ಗೆ ಇಟ್ಟ ಮಹ್ವೀಶ್, ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ನೆರವು ಪಡೆದು, ಪಾಕಿಸ್ತಾನದ ತಮಗಾ-ಎ- ಇಮ್ತಿಯಾಜ್ ಆಗಿದ್ದಾಳೆ. ಭಾರತದ ವಿರುದ್ಧ ಇಮ್ರಾನ್ ಖಾನ್ ಹಾಗೂ ದಾವೂದ್ ಇಬ್ರಾಹಿಂ ಬಳಸುವ ಭಾಷೆಯನ್ನೇ ಮಹ್ವೀಶ್ ಬಳಸುತ್ತಾಳೆ.