ದ್ವೇಷ ಭಾಷಣಗಳು ನಿಮ್ಮ ರಾಜಕೀಯ ಪಕ್ಷಗಳನ್ನು ಹಾಳು ಮಾಡದಿರಲಿ!

ಇಂತಹ ದ್ವೇಷ ಭಾಷಣಗಳ ಪರಿಣಾಮಗಳೇನು? ಮೊದಲನೆಯದಾಗಿ, ಮತದಾರರನ್ನು ಇದು ಪರಕೀಯಗೊಳಿಸಿ, ಅವರು ಪಕ್ಷವನ್ನು ಬೆಂಬಲಿಸದಂತೆ ಮಾಡಬಹುದು. ಎರಡನೆಯದಾಗಿ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಹಿಂಸಾಚಾರ ನಡೆಯುವಂತೆ ಮಾಡಬಹುದು. ಮೂರನೆಯದಾಗಿ, ಇಂತಹ ಮಾತುಗಳ ಪರಿಣಾಮವಾಗಿ ಪಕ್ಷದ ಗೌರವಕ್ಕೆ ಚ್ಯುತಿ ಉಂಟಾಗಿ, ಹೊಸ ಮತದಾರರನ್ನು ಸೆಳೆಯುವುದು ಕಷ್ಟಕರವಾಗಬಹುದು.

Written by - Girish Linganna | Edited by - Manjunath N | Last Updated : May 31, 2023, 12:58 PM IST
  • ಮೊದಲನೆಯದಾಗಿ, ಮತದಾರರನ್ನು ಇದು ಪರಕೀಯಗೊಳಿಸಿ, ಅವರು ಪಕ್ಷವನ್ನು ಬೆಂಬಲಿಸದಂತೆ ಮಾಡಬಹುದು
  • ಎರಡನೆಯದಾಗಿ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಹಿಂಸಾಚಾರ ನಡೆಯುವಂತೆ ಮಾಡಬಹುದು
  • ಮೂರನೆಯದಾಗಿ, ಇಂತಹ ಮಾತುಗಳ ಪರಿಣಾಮವಾಗಿ ಪಕ್ಷದ ಗೌರವಕ್ಕೆ ಚ್ಯುತಿ ಉಂಟಾಗಿ, ಹೊಸ ಮತದಾರರನ್ನು ಸೆಳೆಯುವುದು ಕಷ್ಟಕರವಾಗಬಹುದು.
ದ್ವೇಷ ಭಾಷಣಗಳು ನಿಮ್ಮ ರಾಜಕೀಯ ಪಕ್ಷಗಳನ್ನು ಹಾಳು ಮಾಡದಿರಲಿ! title=
ಸಾಂದರ್ಭಿಕ ಚಿತ್ರ

ದ್ವೇಷ ಭಾಷಣಗಳು ರಾಜಕೀಯ ಪಕ್ಷಗಳ ಮೇಲೆ ಭಿನ್ನವಾದ ಪರಿಣಾಮಗಳನ್ನು ಉಂಟುಮಾಡುತ್ತವೆ.ದ್ವೇಷ ಭಾಷಣ ಅಥವಾ ದ್ವೇಷ ಪೂರಿತ ಮಾತುಗಳೆಂದರೆ ಯಾವುದೇ ವ್ಯಕ್ತಿ ಅಥವಾ ಗುಂಪಿನ ಮೇಲೆ ಅವರ ಜನಾಂಗ, ಧರ್ಮ, ಜನಾಂಗೀಯ ಹಿನ್ನೆಲೆ, ಲಿಂಗ, ರಾಷ್ಟ್ರ, ಅಂಗವೈಕಲ್ಯ, ಲೈಂಗಿಕ ಆಸಕ್ತಿ ಅಥವಾ ಲಿಂಗದ ಆಯ್ಕೆಯ ವಿಚಾರಗಳಲ್ಲಿ ದಾಳಿ ನಡೆಸುವುದು. ಇದನ್ನು ಸಾಮಾನ್ಯವಾಗಿ ಅತಿದೊಡ್ಡ ಗುಂಪೊಂದರ ವಿರುದ್ಧ ಹಿಂಸೆ ಅಥವಾ ತಾರತಮ್ಯ ಉಂಟು ಮಾಡುವ ಉದ್ದೇಶದಿಂದ ನಡೆಸಲಾಗುತ್ತದೆ.

ಇಂತಹ ದ್ವೇಷ ಭಾಷಣಗಳ ಪರಿಣಾಮಗಳೇನು? ಮೊದಲನೆಯದಾಗಿ, ಮತದಾರರನ್ನು ಇದು ಪರಕೀಯಗೊಳಿಸಿ, ಅವರು ಪಕ್ಷವನ್ನು ಬೆಂಬಲಿಸದಂತೆ ಮಾಡಬಹುದು. ಎರಡನೆಯದಾಗಿ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಹಿಂಸಾಚಾರ ನಡೆಯುವಂತೆ ಮಾಡಬಹುದು. ಮೂರನೆಯದಾಗಿ, ಇಂತಹ ಮಾತುಗಳ ಪರಿಣಾಮವಾಗಿ ಪಕ್ಷದ ಗೌರವಕ್ಕೆ ಚ್ಯುತಿ ಉಂಟಾಗಿ, ಹೊಸ ಮತದಾರರನ್ನು ಸೆಳೆಯುವುದು ಕಷ್ಟಕರವಾಗಬಹುದು.

ಉದಾಹರಣೆಗೆ, ಅಮೆರಿಕಾದಲ್ಲಿ ರಿಪಬ್ಲಿಕನ್ ಪಕ್ಷ ಅಲ್ಪಸಂಖ್ಯಾತರ ಮತವನ್ನು ದೂರ ಮಾಡುವ ಉದ್ದೇಶದಿಂದ ದ್ವೇಷ ಭಾಷಣಗಳನ್ನು ಕೈಗೊಂಡ ಆರೋಪಗಳಿವೆ. ಇದರ ಪರಿಣಾಮವಾಗಿ ರಿಪಬ್ಲಿಕನ್ ಪಕ್ಷಕ್ಕೆ ಅಲ್ಪಸಂಖ್ಯಾತ ಮತದಾರರ ಬೆಂಬಲ ಕಡಿಮೆಯಾಗಿದ್ದು, ಪಕ್ಷ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಕಷ್ಟಕರವಾಗಿದೆ.

ಇನ್ನು ಭಾರತದಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಸ್ಲಿಮರ ವಿರುದ್ಧ ಹಿಂಸೆ ಉಂಟುಮಾಡುವ ಸಲುವಾಗಿ ದ್ಬೇಷ ಭಾಷಣ ನಡೆಸಿದ ಆರೋಪಗಳನ್ನು ಮಾಡಲಾಗಿದೆ. ಇದರ ಬಳಿಕ, ಮುಸ್ಲಿಮರ ಮೇಲೆ ಭಾರತದಲ್ಲಿ ಹಲವಾರು ದಾಳಿಗಳು ನಡೆದಿದ್ದು, ಬಿಜೆಪಿಗೆ ಮುಸ್ಲಿಂ ಮತಗಳನ್ನು ಸೆಳೆಯುವುದು ಕಷ್ಟಕರವಾಗಿದೆ.

ಈ ಎರಡೂ ಪ್ರಕರಣಗಳಲ್ಲಿ, ದ್ವೇಷ ಭಾಷಣಗಳು ಪ್ರಯೋಜನಕಾರಿಯಾಗುವ ಬದಲು ಅದನ್ನು ಕೈಗೊಂಡ ರಾಜಕೀಯ ಪಕ್ಷಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ. ಇದು ಮತದಾರರನ್ನು ಪಕ್ಷದಿಂದ ದೂರ ಮಾಡಿ, ಹಿಂಸೆಗೆ ದಾರಿ ಮಾಡಿಕೊಟ್ಟು, ಪಕ್ಷಗಳ ಗೌರವಕ್ಕೆ ಹಾನಿಯುಂಟು ಮಾಡಿದೆ. ಅದರಲ್ಲೂ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಗೆದ್ದು, ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಕಷ್ಟಕರವಾಗುವಂತೆ ಮಾಡಿದೆ.

ಹಾಗೆಂದು ಇದು ಭಾರತದಲ್ಲಿ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಅದನ್ನು ವಿರೋಧಿಸುವ ಭರದಲ್ಲಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಬೇರೆ ಸಮುದಾಯಗಳನ್ನು ಗುರಿ ಮಾಡಿಕೊಂಡ ಘಟನೆಗಳೂ ನಡೆದಿವೆ. ಅವುಗಳೂ ಸಹ ಇದರ ಗಂಭೀರತೆಯನ್ನು ಅರ್ಥ ಮಾಡಿಕೊಂಡು, ಸರಿಯಾದ ರೀತಿಯಲ್ಲಿ ರಾಜಕಾರಣ ನಡೆಸಬೇಕು.

ಈ ಎಲ್ಲ ಕಾರಣಗಳಿಗಾಗಿ, ದ್ವೇಷ ಭಾಷಣಗಳನ್ನು, ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಎದುರಿಸುವ ಕುರಿತು ಕಾರ್ಯಾಚರಿಸಬೇಕಿದೆ. ದ್ವೇಷ ಭಾಷಣಗಳನ್ನು ಕೇವಲ ವಾಕ್ ಸ್ವಾತಂತ್ರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಂದು ಅಪಾಯವಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕದಡಬಲ್ಲದಾಗಿದೆ.

ರಾಜಕೀಯ ಪಕ್ಷಗಳು ಇಂತಹ ದ್ವೇಷದ ಮಾತುಗಳ ವಿರುದ್ಧ ನಿಲ್ಲಬೇಕಿದೆ. ರಾಜಕೀಯ ಪಕ್ಷಗಳು ಇಂತಹ ದ್ವೇಷದ ಮಾತುಗಳನ್ನು ತಡೆಯುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೆ ತಂದು, ಅವುಗಳನ್ನು ನಡೆಸುವ ಪಕ್ಷದ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪಕ್ಷಗಳು ತಮ್ಮ ಸದಸ್ಯರಿಗೆ ಈ ದ್ವೇಷ ಭಾಷಣಗಳ ಅಪಾಯಗಳ ಕುರಿತು ಜಾಗೃತಿ ಮೂಡಿಸಿ, ಸಹಿಷ್ಣುತೆ ಮತ್ತು ಎಲ್ಲ ಜನರ ಕುರಿತು ಗೌರವ ಹೊಂದುವುದರ ಮಹತ್ವವನ್ನು ತಿಳಿಸಬೇಕು. ಎಲ್ಲ ಪಕ್ಷಗಳೂ ತಮ್ಮ ಕಾರ್ಯಕರ್ತರು ಹಾಗೂ ಸದಸ್ಯರನ್ನು ದ್ವೇಷ ಭಾಷಣದ ವಿರುದ್ಧವಾಗಿರುವಂತೆ ತಿಳಿಹೇಳಬೇಕು.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News