ಮೇ 25 ರಿಂದ ದೇಸೀಯ ನಾಗರಿಕ ವಿಮಾನಯಾನ ಸೇವೆ ಆರಂಭ: ಹರ್ದೀಪ್ ಸಿಂಗ್ ಪುರಿ

ಮೇ 25 ನೇ ತಾರೀಖಿನಿಂದ ಅಂದರೆ ಸೋಮವಾರದಿಂದ ದೇಶಾದ್ಯಂತ ದೇಸೀಯ ನಾಗರಿಕ ವಿಮಾನಯಾನ ಸೇವೆಯನ್ನು ಕ್ರಮೇಣವಾಗಿ ಆರಂಭಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ. 

Last Updated : May 20, 2020, 05:37 PM IST
ಮೇ 25 ರಿಂದ ದೇಸೀಯ ನಾಗರಿಕ ವಿಮಾನಯಾನ ಸೇವೆ ಆರಂಭ: ಹರ್ದೀಪ್ ಸಿಂಗ್ ಪುರಿ title=

ನವದೆಹಲಿ: ಮೇ 25 ನೇ ತಾರೀಖಿನಿಂದ ಅಂದರೆ ಸೋಮವಾರದಿಂದ ದೇಶಾದ್ಯಂತ ದೇಸೀಯ ನಾಗರಿಕ ವಿಮಾನಯಾನ ಸೇವೆಯನ್ನು ಕ್ರಮೇಣವಾಗಿ ಆರಂಭಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ. ಅಷ್ಟೇ ಅಲ್ಲ ಇದಕ್ಕಾಗಿ ದೇಶಾದ್ಯಂತ ಇರುವ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಸಿದ್ಧವಾಗಿರಲೂ ಕೂಡ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ಹರ್ದೀಪ್ ಪುರಿ, ಪ್ರಯಾಣಿಕರ ಸಂಚಾರಕ್ಕಾಗಿ ಮಾರ್ಗಸೂಚಿಗಳನ್ನು (SOP) ಕೂಡ ಪ್ರತ್ಯೇಕವಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಈ ಕುರಿತು ಸಂಕೇತಗಳನ್ನು ನೀಡಿದ್ದ ಹರ್ದೀಪ್ ಸಿಂಗ್ ಪುರಿ ಲಾಕ್ ಡೌನ್ 4.0 ಅಂತ್ಯದ ವೇಳೆಗೆ ದೇಸೀಯ ನಾಯರಿಕ ವಿಮಾನಯಾನ ಸೇವೆ ಆರಂಭಿಸುವ ಸಂಕೇತಗಳನ್ನು ನೀಡಿದ್ದರು. ಆದರೆ, ಇದೆ ವೇಳೆ ದೇಶೀಯ ವಿಮಾನಯಾನ ಸೇವೆ ಆರಂಭಿಸುವ ನಿರ್ಧಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಏಕೆಂದರೆ ಇದಕ್ಕಾಗಿ ರಾಜ್ಯ ಸರ್ಕಾರಗಳ ಅನುಮತಿ ಕೂಡ ಬೇಕಾಗುತ್ತದೆ ಎಂದಿದ್ದರು. 

ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ಜಾರಿಗೆ ಬಂದ ಲಾಕ್ ಡೌನ್ ಮೇ 31ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಮೇ 31ರವರೆಗೆ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ನಾಗರಿಕ ವಿಮಾನಯಾನ ಸಚಿವರು ಸದ್ಯ ಮಾಡಿರುವ ಟ್ವೀಟ್ ಭಾರಿ ಮಹತ್ವಪಡೆದುಕೊಂಡಿದೆ.

Trending News