Viral Video: ಪ್ರವಾಹದಲ್ಲಿ ಸಿಲುಕಿದ್ದ ಕಾರು ತಳ್ಳಲು ಈ ನಾಯಿ ಏನು ಮಾಡಿದೆ ನೋಡಿ..!

ಮಳೆನೀರಿನಲ್ಲಿ ಸಿಲುಕಿದ್ದ ಕಾರನ್ನು ಮುಂದಕ್ಕೆ ತಳ್ಳಲು ಮಾಲೀಕರಿಗೆ ಶ್ವಾನ ಸಹಾಯ ಮಾಡಿದೆ.

Written by - Puttaraj K Alur | Last Updated : Aug 14, 2021, 05:12 PM IST
  • ಮಳೆನೀರಿನಲ್ಲಿ ಸಿಲುಕಿದ್ದ ಕಾರನ್ನು ಮುಂದಕ್ಕೆ ತಳ್ಳುತ್ತಿದ್ದ ಮಾಲೀಕರಿಗೆ ನೆರವಾದ ಶ್ವಾನ
  • ಕಷ್ಟಪಡುತ್ತಿದ್ದ ಯಜಮಾನಿಯ ಜೊತೆಗೆ ತನ್ನ ಮುಂಭಾಗದ ಕಾಲುಗಳಿಂದ ಕಾರು ತಳ್ಳಲು ಪ್ರಯತ್ನಿಸಿದ ನಾಯಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ವಿಡಿಯೋ, ಶ್ವಾನದ ಕಾರ್ಯಕ್ಕೆ ನೆಟಿಜನ್ ಗಳಿಂದ ಮೆಚ್ಚುಗೆ
Viral Video: ಪ್ರವಾಹದಲ್ಲಿ ಸಿಲುಕಿದ್ದ ಕಾರು ತಳ್ಳಲು ಈ ನಾಯಿ ಏನು ಮಾಡಿದೆ ನೋಡಿ..!  title=
ಮಾಲೀಕರಿಗೆ ನೆರವಾದ ಮುದ್ದು ಶ್ವಾನ

ನವದೆಹಲಿ: ನಿಯತ್ತಿಗೆ ಮತ್ತೊಂದು ಹೆಸರೆ ನಾಯಿ(Dog)… ಅಂತಾ ಎಲ್ಲರೂ ಹೇಳುತ್ತಾರೆ. ಅದಕ್ಕೆ ತಕ್ಕಂತೆಯೇ ಶ್ವಾನಗಳು ಮನುಷ್ಯರ ಜೊತೆಗೆ ಆತ್ಮೀಯತೆಯಿಂದ ಇರುತ್ತವೆ. ಒಂದು ಹೊತ್ತು ಊಟ ಹಾಕಿದರೆ ಸಾಕು ಅದು ಸಾವನ್ನಪ್ಪುವವರೆಗೂ ಮಾಲೀಕನ ಮನೆ ಕಾವಲಾಗಿರುತ್ತದೆ. ಮನುಷ್ಯರಂತೆ ಪ್ರಾಣಿಗಳೂ ಭಾವನೆಗಳನ್ನು ವ್ಯಕ್ತಪಡಿಸಲು ಸಮರ್ಥವಾಗಿವೆ. ಅದಕ್ಕೆ ನಿದರ್ಶನದಂತಿದೆ ಪ್ರವಾಹದಲ್ಲಿ ಸಿಲುಕಿರುವ ಕಾರನ್ನು ತಳ್ಳಲು ಮಾಲೀಕರಿಗೆ ನೆರವಾಗಿರುವ ನಾಯಿಯ ಈ ವಿಡಿಯೋ.  

ಹೌದು, ಭಾರೀ ಪ್ರವಾಹದಿಂದ ಮಳೆ ನಡುಮಟ್ಟದ ಮಳೆ ನೀರಿನಲ್ಲಿ ಸಿಲುಕಿದ್ದ ಕಾರನ್ನು ಮುಂದಕ್ಕೆ ತಳ್ಳಲು ತನ್ನ ಮಾಲೀಕರಿಗೆ ಈ ಮುದ್ದಾದ ಶ್ವಾನ ನೆರವಾಗಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸಖತ್ ವೈರಲ್(Viral Video) ಆಗುತ್ತಿದ್ದು, ನೆಟಿಜನ್ ಗಳ ಗಮನ ಸೆಳೆದಿದೆ. ಈ ಘಟನೆ ಸ್ಕಾಟ್ಲೆಂಡ್ ನಲ್ಲಿ ನಡೆದಿದ್ದು, ಶ್ವಾನದ ಬುದ್ಧಿವಂತಿಕೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Independence Day 2021: ಈ ಸ್ವಾತಂತ್ರ್ಯ ದಿನದಂದು, ಪ್ಲಾಸ್ಟಿಕ್ ಧ್ವಜಕ್ಕೆ ಹೇಳಿ 'NO'

ಸ್ಕಾಟ್ಲೆಂಟ್(Scotland)ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ ಕಾರಿನಲ್ಲಿ ಬಂದ ಮಹಿಳೆಯೊಬ್ಬರು ನಡುಮಟ್ಟದ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ತಂದ ಕಾರು ಹಿಂದಕ್ಕೂ ಚಲಿಸದೆ, ಮುಂದಕ್ಕೂ ಚಲಿಸದೆ ಮಳೆನೀರಿನಲ್ಲಿ ಸಿಲುಕಿಕೊಂಡುಬಿಟ್ಟಿದೆ. ಕಾರು ಚಾಲನೆ ಮಾಡಲು ಸಾಧ್ಯವಾಗದೆ ಪರಿಣಾಮ ಮಾಲೀಕರಿಗೆ ಚಿಂತೆ ಶುರುವಾಗಿದೆ. ಯಾರನ್ನಾದರೂ ಸಹಾಯಕ್ಕೆ ಕರೆಯೋಣ ಎಂದರೆ ಸ್ಥಳದಲ್ಲಿ ಯಾರೊಬ್ಬರೂ ಇರಲಿಲ್ಲ. ಏನು ಮಾಡೋದು ಅಂತಾ ತಲೆಕೆಡಿಸಿಕೊಂಡ ಅವರು ಕೆಳಗಿಳಿದು ಕಾರನ್ನು ಮುಂದಕ್ಕೆ ತಳ್ಳಲು ಪ್ರಯತ್ನಿಸಿದ್ದಾರೆ.

ಈ ವೇಳೆ ಅವರ ಜೊತೆಗೆ ಬಂದಿದ್ದ ಅವರ ಸಾಕು ನಾಯಿ(Dog) ಕೂಡ ಕಾರು(Car) ತಳ್ಳಲು ಕಷ್ಟಪಡುತ್ತಿದ್ದ ತನ್ನ ಮಾಲೀಕರಿಗೆ ನೆರವಾಗಿದೆ. ಮಹಿಳೆ ಕಾರು ತಳ್ಳಲು ಕಷ್ಟಪಡುತ್ತಿದ್ದಾಗ ನಾಯಿಯೂ ಸಹ ತನ್ನ ಮುಂಭಾಗದ ಕಾಲುಗಳಿಂದ ಕಾರನ್ನು ಮುಂದಕ್ಕೆ ತಳ್ಳಲು ಪ್ರಯತ್ನಿಸಿದೆ. ಮಳೆ ನೀರಿನಲ್ಲಿ ಸಿಲುಕಿರುವ ಕಾರನ್ನು ಮುಂದಕ್ಕೆ ತಳ್ಳಲು ತನ್ನ ಯಜಮಾನಿ ಪ್ರಯತ್ನಿಸುತ್ತಿದ್ದಾಳೆ ಎಂದರಿತ ನಾಯಿ ಸಹಾಯ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಸ್ಮಾರ್ಟ್ ಫೋನ್ ಡಿಸ್ಪ್ಲೇ ಹೋದರೆ ಉಚಿತವಾಗಿ ಬದಲಿಸಲಿದೆ ಕಂಪನಿ, ಜೊತೆಗೆ ಸಿಗಲಿದೆ 10 ಸಾವಿರ ರೂ.ಗಳ ಲಾಭ

ಇದಕ್ಕೂ ಮುನ್ನ ಕಾರಿನೊಳಗಡೆ ಕುಳಿತಿದ್ದ ನಾಯಿಗೆ ಹೊರಗೆ ಏನಾಗಿದೆ ಎಂಬುದೇ ಗೊತ್ತಿರಲಿಲ್ಲ. ಸಾಕಷ್ಟು ಸಮಯದ ಬಳಿಕ ಕಾರು ಮುಂದಕ್ಕೆ ಚಲಿಸದೇ ನಿಂತಲ್ಲೇ ನಿಂತಿದ್ದರಿಂದ ನಾಯಿ ಕಾರಿನಿಂದ ಕೆಳಗಿಳಿದು ಬಂದಿದೆ. ಮೊದಲು ನೀರಿನಲ್ಲಿ ಸ್ವಲ್ಪಕಾಲ ಈಜಾಡಿದ ನಾಯಿ ಬಳಿಕ ತನ್ನ ಮಾಲೀಕರಿಗೆ ಕಾರು ತಳ್ಳಲು ಹೆಣಗಾಡುತ್ತಿದ್ದಾರೆಂದು ಅರಿತುಕೊಂಡಿದೆ. ನಾನು ಒಂದು ಕೈ ನೋಡೇ ಬೀಡುತ್ತೇನೆಂದು ಯಜಮಾನಿಯ ಜೊತೆ ಕಾರು ತಳ್ಳಲು ಪ್ರಯತ್ನಿಸಿರುವ ದೃಶ್ಯನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಲತಾಣ(Social Media)ಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಶ್ವಾನದ ಕಾರ್ಯವನ್ನು ಮೆಚ್ಚಿ ಅನೇಕರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News