Corona Cases in the World: ವಿಶ್ವದಲ್ಲಿ ಎಷ್ಟಾಗಿದೆ ಗೊತ್ತಾ ಕೊರೊನಾ ಪ್ರಕರಣಗಳು: ಯುಎಸ್-ಭಾರತದಲ್ಲಿ ಬೆಚ್ಚಿ ಬೀಳಿಸುವಂತಿದೆ ಅಂಕಿಅಂಶ

Corona Cases in the World:  ಇಲ್ಲಿ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣ ಎನಿಸಿಕೊಂಡಿದೆ. ಸಾವಿನ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಇನ್ನು ಮೂರು ತಿಂಗಳಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ 10 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

Written by - Bhavishya Shetty | Last Updated : Dec 22, 2022, 03:57 PM IST
    • ಚೀನಾದಲ್ಲಿ ಕೊರೊನಾ ಪ್ರಕರಣಗಳು ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ
    • ಪ್ರತಿನಿತ್ಯ ಲಕ್ಷಗಟ್ಟಲೆ ಪ್ರಕರಣಗಳು ದಾಖಲಾಗುತ್ತಿದ್ದು, 1500-2000 ಮಂದಿ ಸಾವನ್ನಪ್ಪುತ್ತಿದ್ದಾರೆ
    • ಚೀನಾಕ್ಕೆ ಸಮೀಪವಿರುವ ತೈವಾನ್, ಜಪಾನ್ ಮತ್ತು ಹಾಂಗ್ ಕಾಂಗ್‌ನಲ್ಲೂ ಪರಿಸ್ಥಿತಿ ಕೆಟ್ಟದಾಗಿದೆ
Corona Cases in the World: ವಿಶ್ವದಲ್ಲಿ ಎಷ್ಟಾಗಿದೆ ಗೊತ್ತಾ ಕೊರೊನಾ ಪ್ರಕರಣಗಳು: ಯುಎಸ್-ಭಾರತದಲ್ಲಿ ಬೆಚ್ಚಿ ಬೀಳಿಸುವಂತಿದೆ ಅಂಕಿಅಂಶ title=
Corona

Corona Cases in the World: ಕೊರೊನಾ ಮತ್ತೆ ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿದೆ. ಚೀನಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಲ್ಲಿ ಕೊರೊನಾ ಪ್ರಕರಣಗಳು ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ. ಅಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಪ್ರಕರಣಗಳು ದಾಖಲಾಗುತ್ತಿದ್ದು, 1500-2000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಚೀನಾಕ್ಕೆ ಸಮೀಪವಿರುವ ತೈವಾನ್, ಜಪಾನ್ ಮತ್ತು ಹಾಂಗ್ ಕಾಂಗ್‌ನಲ್ಲೂ ಪರಿಸ್ಥಿತಿ ಕೆಟ್ಟದಾಗಿದೆ. ಕೊರೊನಾ ಭೀತಿಯನ್ನು ಎದುರಿಸುತ್ತಿರುವ ದೇಶಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ಚೀನಾ: ಇಲ್ಲಿ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣ ಎನಿಸಿಕೊಂಡಿದೆ. ಸಾವಿನ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಇನ್ನು ಮೂರು ತಿಂಗಳಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ 10 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: INS Arnala: ಸಾಗರದಲ್ಲಿ ಸದ್ದಿಲ್ಲದೆ ಬೇಟೆಯಾಡೋ ‘ರಣಬೇಟೆಗಾರ’ ನೌಕಾಪಡೆಗೆ ಎಂಟ್ರಿ: ನಿಮಿಷದಲ್ಲಿ ಶತ್ರುನಾಶ ಖಂಡಿತ

ಜಪಾನ್: ಇಲ್ಲಿಯೂ ಸಹ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನಿತ್ಯ 70 ರಿಂದ 1 ಲಕ್ಷ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಮಂಗಳವಾರ ಸುಮಾರು 1.85 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 231 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 53 ಸಾವಿರದ 730 ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ದಕ್ಷಿಣ ಕೊರಿಯಾ: ಮಂಗಳವಾರದಂದು ದಕ್ಷಿಣ ಕೊರಿಯಾದಲ್ಲಿ 87 ಸಾವಿರದ 559 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 56 ರೋಗಿಗಳು ಸಾವನ್ನಪ್ಪಿದ್ದಾರೆ. ಇಲ್ಲಿ ಇದುವರೆಗೆ 31 ಸಾವಿರದ 490 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಫ್ರಾನ್ಸ್: ಈ ಸುಂದರ ದೇಶದಲ್ಲಿ ಮಂಗಳವಾರ 71 ಸಾವಿರದ 212 ಹೊಸ ಪ್ರಕರಣಗಳು ವರದಿಯಾಗಿದ್ದು, 131 ಮಂದಿ ಸಾವನ್ನಪ್ಪಿದ್ದಾರೆ. ಈ ದೇಶದಲ್ಲಿ ಇದುವರೆಗೆ 3.89 ಕೋಟಿ ಜನರು ಕೊರೊನಾ ಹಿಡಿತಕ್ಕೆ ಒಳಗಾಗಿದ್ದಾರೆ. 3.76 ಕೋಟಿ ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದು, ಮೃತಪಟ್ಟವರ ಸಂಖ್ಯೆ 1.60 ಲಕ್ಷಕ್ಕೆ ಏರಿಕೆಯಾಗಿದೆ.

ಜರ್ಮನಿ: ಮಂಗಳವಾರ 52 ಸಾವಿರದ 528 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 201 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಈ ದೇಶದಲ್ಲಿ 3.70 ಕೋಟಿ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 1.60 ಲಕ್ಷಕ್ಕೆ ಏರಿಕೆಯಾಗಿದೆ.

ಅಮೆರಿಕ: ಸೂಪರ್ ಪವರ್ ದೇಶವಾದ ಅಮೆರಿಕದಲ್ಲಿ ಪ್ರತಿದಿನ 20-30 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಮಂಗಳವಾರ 25 ಸಾವಿರದ 714 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಈ ದೇಶದಲ್ಲಿ ಇದುವರೆಗೆ 10 ಕೋಟಿ 18 ಲಕ್ಷ ಜನರು ಕೊರೊನಾ ಪೀಡಿತರಾಗಿದ್ದಾರೆ. ಸಾವಿನ ಸಂಖ್ಯೆ 11 ಲಕ್ಷ 13 ಸಾವಿರಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿ: Coronavirus: ಮತ್ತೆ ಆತಂಕ ಸೃಷ್ಟಿಸಿದ ಕೊರೋನಾ ಹಾವಳಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ!

ಭಾರತ: ಮಂಗಳವಾರ ದೇಶದಲ್ಲಿ 103 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಆದರೆ ಇದುವರೆಗೆ ಸಾವಿನ ಬಗ್ಗೆ ವರದಿಯಾಗಿಲ್ಲ. ಭಾರತದಲ್ಲಿ 4527 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 4.46 ಕೋಟಿ ಜನರು ಕೊರೊನಾ ಹಿಡಿತಕ್ಕೆ ಒಳಗಾಗಿದ್ದು, 5.30 ಲಕ್ಷ ಜನರು ಸಾವನ್ನಪ್ಪಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News