ಪಿಎಂಸಿ ಬ್ಯಾಂಕ್ ಹಗರಣ : ಮೂವರು ನಿರ್ದೇಶಕರನ್ನು ಬಂಧಿಸಿದ ಮುಂಬೈ ಪೋಲಿಸ್

4,355 ಕೋಟಿ ರೂ.ಗಳ ಹಗರಣದ ತನಿಖೆಗಾಗಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮಂಗಳವಾರ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್ಸಿ) ಬ್ಯಾಂಕಿನ ಮೂವರು ನಿರ್ದೇಶಕರನ್ನು ಬಂಧಿಸಿದೆ. ಆ ಮೂಲಕ ಈಗ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆಯನ್ನು 12 ಕ್ಕೆ ತಲುಪಿದೆ.

Last Updated : Dec 3, 2019, 11:09 PM IST
ಪಿಎಂಸಿ ಬ್ಯಾಂಕ್ ಹಗರಣ : ಮೂವರು ನಿರ್ದೇಶಕರನ್ನು ಬಂಧಿಸಿದ ಮುಂಬೈ ಪೋಲಿಸ್  title=
File Photo

ನವದೆಹಲಿ: 4,355 ಕೋಟಿ ರೂ.ಗಳ ಹಗರಣದ ತನಿಖೆಗಾಗಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮಂಗಳವಾರ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್ಸಿ) ಬ್ಯಾಂಕಿನ ಮೂವರು ನಿರ್ದೇಶಕರನ್ನು ಬಂಧಿಸಿದೆ. ಆ ಮೂಲಕ ಈಗ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆಯನ್ನು 12 ಕ್ಕೆ ತಲುಪಿದೆ.

ಹೌಸಿಂಗ್ ಡೆವಲಪ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಮತ್ತು ಅದರ ಸಮೂಹ ಕಂಪನಿಗಳಿಗೆ ಬ್ಯಾಂಕ್ ಒದಗಿಸಿರುವ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ವಿಚಾರಣೆಯ ನಂತರ ಜಗದೀಶ್ ಮುಖೆ, ಮುಕ್ತಿ ಬವಿಸಿ ಮತ್ತು ತೃಪ್ತಿ ಬಾನೆ ಅವರನ್ನು ಬಂಧಿಸಲಾಗಿದೆ ಎಂದು ಇಒಡಬ್ಲ್ಯೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗದೀಶ್ ಮುಖೆ 2005 ರಿಂದ ಬ್ಯಾಂಕಿನ ನಿರ್ದೇಶಕರಾಗಿದ್ದರು ಮತ್ತು ಅದರ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರಾಗಿದ್ದರು, ಆದರೆ ಬವಿಸಿ 2011 ರಿಂದ ಅದರ ಸಾಲ ಮತ್ತು ಮುಂಗಡ ಸಮಿತಿಯ ನಿರ್ದೇಶಕರಾಗಿದ್ದರು ಮತ್ತು ಸದಸ್ಯರಾಗಿದ್ದರು ಎಂದು ಅವರು ಹೇಳಿದರು. ತೃಪ್ತಿ ಬಾನೆ ಅವರು 2010 ರಿಂದ 2015 ರ ನಡುವಿನ ಅವಧಿಯಲ್ಲಿ ಸಾಲ ಮರುಪಡೆಯುವಿಕೆ ಸಮಿತಿಯ ಸದಸ್ಯರಾಗಿದ್ದರು ಮತ್ತು 2015 ರಿಂದ ಸಾಲ ಮತ್ತು ಮುಂಗಡ ಸಮಿತಿಯ ಸದಸ್ಯರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.ಈ ಮೂವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನವೆಂಬರ್ 16 ರಂದು ಬಿಜೆಪಿ ಮಾಜಿ ಶಾಸಕ ಸರ್ದಾರ್ ತಾರಾ ಸಿಂಗ್ ಅವರ ಪುತ್ರ ರಜನೀತ್ ಸಿಂಗ್ ಅವರನ್ನು ಇಒಡಬ್ಲ್ಯೂ ಬಂಧಿಸಿತ್ತು.ಈ ಹಿಂದೆ ಬಂಧಿಸಲ್ಪಟ್ಟವರಲ್ಲಿ ಮೂವರು ಉನ್ನತ ಬ್ಯಾಂಕ್ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಗುಂಪಿನ ಇಬ್ಬರು ಪ್ರವರ್ತಕರಾದ ರಾಕೇಶ್ ಮತ್ತು ಸಾರಂಗ್ ವಾಧವನ್ ಮತ್ತು ಲೆಕ್ಕ ಪರಿಶೋಧಕರು ಸೇರಿದ್ದಾರೆ.
 

Trending News