ನವದೆಹಲಿ: ಅಕ್ಟೋಬರ್ 5 ರ ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಧಾಬಾ, ರೆಸ್ಟೋರೆಂಟ್ ಮತ್ತು ಬಾರ್ (Bar) ಸೇರಿದಂತೆ ಇತರ ರೆಸ್ಟೋರೆಂಟ್ಗಳು (Restaurant) ಪ್ರಾರಂಭವಾಗುತ್ತಿವೆ. ಇವುಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಹೊಸ ಮಾರ್ಗಸೂಚಿ ಹೊರಡಿಸಿದೆ. 50 ರಷ್ಟು ಸಾಮರ್ಥ್ಯದೊಂದಿಗೆ ಅವುಗಳನ್ನು ತೆರೆಯಲು ಸರ್ಕಾರ ಪ್ರಸ್ತುತ ಅನುಮೋದನೆ ನೀಡಿದೆ.
ಅಕ್ಟೋಬರ್ 5 ರಿಂದ ರಾಜ್ಯದಲ್ಲಿ ಹೋಟೆಲ್-ರೆಸ್ಟೋರೆಂಟ್ (Hotel-restaurant) ಮತ್ತು ಬಾರ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಮಹಾರಾಷ್ಟ್ರ (Maharashtra) ಸರ್ಕಾರ ಸೆಪ್ಟೆಂಬರ್ 30 ರಂದು ಹೇಳಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಮಾರ್ಗಸೂಚಿಗಳನ್ನು ನೀಡಿರಲಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.
ಈಗ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ತಮ್ಮ ಹೋಟೆಲ್-ರೆಸ್ಟೋರೆಂಟ್ ಮತ್ತು ಬಾರ್ ಅನ್ನು ಯಾರು ತೆರೆಯುತ್ತಾರೋ ಅವರು ಕರೋನಾ ಸೋಂಕಿನ ತಡೆಗಟ್ಟುವಿಕೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ದೇಶದಲ್ಲಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳ: 7 ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಸಭೆ
ಮಾರ್ಗಸೂಚಿಗಳ ಪ್ರಕಾರ (ಎಸ್ಒಪಿ), ಹೋಟೆಲ್-ರೆಸ್ಟೋರೆಂಟ್ ಅಥವಾ ಬಾರ್ಗೆ ಪ್ರವೇಶಿಸುವಾಗ ಮಾಸ್ಕ್ ಅನ್ನು ಧರಿಸಿರುವುದು ಅಗತ್ಯವಾಗಿರುತ್ತದೆ. ಯಾವುದೇ ವ್ಯಕ್ತಿಗಳಿಗೆ ಈ ಸ್ಥಳಗಳಲ್ಲಿ ಸ್ಕ್ರೀನಿಂಗ್ ಇಲ್ಲದೆ ಪ್ರವೇಶ ನೀಡಲಾಗುವುದಿಲ್ಲ.
- ಗ್ರಾಹಕರ ದೇಹದ ಉಷ್ಣತೆ, ಶೀತ ಮತ್ತು ಕೆಮ್ಮು ಲಕ್ಷಣಗಳನ್ನು ಪರಿಶೀಲಿಸಲಾಗುತ್ತದೆ. ಯಾರ ತಾಪಮಾನವು ಸಾಮಾನ್ಯವಾಗಿರುತ್ತದೆ ಮತ್ತು ಶೀತ ಮತ್ತು ಶುಷ್ಕತೆ ಇರುವುದಿಲ್ಲ ಅವರಿಗೆ ಮಾತ್ರ ರೆಸ್ಟೋರೆಂಟ್ನಲ್ಲಿ ಪ್ರವೇಶ ನೀಡಲಾಗುತ್ತದೆ.
- ಬಿಲ್ ಪಾವತಿಗಾಗಿ ಡಿಜಿಟಲ್ ಮಾಧ್ಯಮವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿ. ನಗದು ವಹಿವಾಟು ನಡೆಸುವಾಗ ಅಗತ್ಯ ಜಾಗರೂಕತೆ ವಹಿಸಬೇಕಾಗುತ್ತದೆ.
- ರೆಸ್ಟೋರೆಂಟ್ನಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಇಡುವುದು ಸಹ ಅಗತ್ಯವಾಗಿರುತ್ತದೆ. ರೆಸ್ಟೋರೆಂಟ್ ಕೌಂಟರ್ನಲ್ಲಿ ಪ್ಲೆಕ್ಸಿ ಗ್ಲಾಸ್ ಪರದೆಯನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ.
- ಜನರು ಬಂದು ಹೋಗಲು ಪ್ರತ್ಯೇಕ ಗೇಟ್ಗಳನ್ನು ನಿರ್ಮಿಸಬೇಕು. ರೆಸ್ಟೋರೆಂಟ್ನಲ್ಲಿ ಕಾಯುವ ಸಮಯದಲ್ಲಿ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುವುದು ಅವಶ್ಯಕ.
ಮಹಾರಾಷ್ಟ್ರದಲ್ಲಿ ಕೊರೊನಾ ಗೆದ್ದ 106 ರ ವಯೋವೃದ್ಧ ಮಹಿಳೆ
- ರೆಸ್ಟೋರೆಂಟ್ನ ಆಸನ ಮತ್ತು ವಾಶ್ ರೂಂ ಅನ್ನು ಆಗಾಗ ಸ್ವಚ್ಛಗೊಳಿಸಬೇಕು.
- ಗ್ರಾಹಕರಿಗೆ ಬೇಯಿಸಿದ ಆಹಾರವನ್ನು ಮಾತ್ರ ನೀಡಬೇಕು. ಕಚ್ಚಾ ಸಲಾಡ್ಗಳು ಮತ್ತು ತಂಪು ಪಾನೀಯಗಳನ್ನು ಮೆನುವಿನಲ್ಲಿ ಸೇರಿಸಲು ಅನುಮತಿಸಲಾಗಿಲ್ಲ.
ಪ್ರಸ್ತುತ, ಕೇವಲ 50 ಪ್ರತಿಶತ ಜನರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುವುದು.