Dark Web:ಕಪ್ಪು ವ್ಯವಹಾರಗಳ ಗುಹೆಯಾಗಿರುವ ಇಂಟರ್ನೆಟ್ ಜಗತ್ತು! ಡಾರ್ಕ್ ವೆಬ್ ಬಗ್ಗೆ ನಿಮಗೆಷ್ಟು ಗೊತ್ತು?

Dark Web: ಡಾರ್ಕ್ ವೆಬ್ ಎಂದರೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಭೂಗತ ಜಗತ್ತು, ಹ್ಯಾಕಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ. ಡಾರ್ಕ್ ವೆಬ್ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Written by - Chetana Devarmani | Last Updated : Feb 22, 2022, 11:22 AM IST
  • ಡಾರ್ಕ್ ವೆಬ್ ಅಕ್ರಮ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ.
  • ಡಾರ್ಕ್ ವೆಬ್ ಸಂಪೂರ್ಣವಾಗಿ ಭಿನ್ನವಾಗಿದೆ.
  • ಡಾರ್ಕ್ ವೆಬ್‌ನಲ್ಲಿ ವಿಷಯದ ಯಾವುದೇ ನಿಯಂತ್ರಣವಿಲ್ಲ.
Dark Web:ಕಪ್ಪು ವ್ಯವಹಾರಗಳ ಗುಹೆಯಾಗಿರುವ ಇಂಟರ್ನೆಟ್ ಜಗತ್ತು! ಡಾರ್ಕ್ ವೆಬ್ ಬಗ್ಗೆ ನಿಮಗೆಷ್ಟು ಗೊತ್ತು? title=
ಡಾರ್ಕ್ ವೆಬ್

ನವದೆಹಲಿ: ಕೋವಿಡ್ ಸಾಂಕ್ರಾಮಿಕದ (Corona virus) ನಂತರ ಇಂಟರ್ನೆಟ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಅಂತರ್ಜಾಲದ ಸಹಾಯದಿಂದ ಮನೆಯಿಂದ ಕೆಲಸ ಮತ್ತು ಆನ್‌ಲೈನ್ ಅಧ್ಯಯನದಂತಹ ಕೆಲಸವನ್ನು ಸುಲಭವಾಗಿ ಮಾಡಲಾಗುತ್ತಿದೆ. ಆದರೆ ಇದರಿಂದ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ನೀವು ಮತ್ತು ನಾವು ಇಂಟರ್ನೆಟ್ ಅನ್ನು ಬಳಸುತ್ತಿರುವಷ್ಟೂ ಈ ವರ್ಚುವಲ್ (Virtual World) ಪ್ರಪಂಚವಿಲ್ಲ. ನಮಗೆ ಶೇಕಡಾ 5 ರಿಂದ 10 ರಷ್ಟು ಮಾತ್ರ ಗೊತ್ತು ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಕಣ್ಮುಂದೆ ಮಾಯವಾದ ಮುಚ್ಚಳ! 9 ರಲ್ಲಿ 1 ಹೇಗೆ ಕಣ್ಮರೆಯಾಯಿತು? ಇಲ್ಲಿದೆ ಉತ್ತರ

ಇಂಟರ್ನೆಟ್‌ ಒಂದು ದೊಡ್ಡ ಪ್ರಪಂಚ. ಹೆಚ್ಚಿನ ಭಾಗ ಸಾಮಾನ್ಯ ಜನರು ತಲುಪಲಾಗದಂತಿದೆ. ಆ ಜಗತ್ತನ್ನೇ ಡಾರ್ಕ್ ವೆಬ್ (Dark Web) ಎಂದು ಕರೆಯಲಾಗುತ್ತದೆ. ಡಾರ್ಕ್ ವೆಬ್ ಎಂದರೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಭೂಗತ ಜಗತ್ತು, ಹ್ಯಾಕಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ.

ಡಾರ್ಕ್ ವೆಬ್ ಎಂದರೇನು?

ಹೆಸರು ಕೇಳಿದ ತಕ್ಷಣ ಮನಸ್ಸಿಗೆ ಬರುವ ಮೊದಲ ಯೋಚನೆ ಇದೇನು? ಅಂತ. ಇದು ವೆಬ್‌ನ ಅಸ್ಪೃಶ್ಯ ಭಾಗವಾಗಿದ್ದು, ಎಲ್ಲರೂ ಪ್ರವೇಶಿಸಲು ಸಾಧ್ಯವಿಲ್ಲ. ಇದೊಂದು ಕತ್ತಲ ಜಗತ್ತು. ಅಲ್ಲಿ ನಡೆಯುವುದೆಲ್ಲ ಬಹುಪಾಲು ಅಕ್ರಮವೇ. ಈ ಮೂಲಕ ಜನ ಸಾಮಾನ್ಯರನ್ನು ವಂಚಿಸಿ ಹಲವು ಬಗೆಯ ಕಪ್ಪು ದಂಧೆಗಳನ್ನು ಮಾಡುವ ಇಂಟರ್ನೆಟ್ ಭೂಗತ ಲೋಕದಂತಿದೆ ಈ ಡಾರ್ಕ್ ವೆಬ್. 

ಯಾವ ವೆಬ್ ಅನ್ನು ನಾವು ಬಳಸುತ್ತೇವೆ? 

ನಾವು ಬಳಸುವ ವೆಬ್‌ನ ಭಾಗವನ್ನು ಸರ್ಫೇಸ್ ವೆಬ್ (Sufacde Web) ಎಂದು ಕರೆಯಲಾಗುತ್ತದೆ. ಡಾರ್ಕ್ ವೆಬ್ ಸರ್ಫೇಸ್ ವೆಬ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಡಾರ್ಕ್ ವೆಬ್‌ನಲ್ಲಿ ವಿಷಯದ ಯಾವುದೇ ನಿಯಂತ್ರಣವಿಲ್ಲ. ಡಾರ್ಕ್ ವೆಬ್ ಅನ್ನು ಪ್ರವೇಶಿಸಲು, ವಿಶೇಷ ಅನುಮತಿಗಳ ಅಗತ್ಯವಿದೆ.

ಇದನ್ನೂ ಓದಿ: ರೈಲ್ವೆ ಹೊರ ತಂದಿದೆ ಕ್ರೆಡಿಟ್ ಕಾರ್ಡ್, ಟಿಕೆಟ್ ಬುಕಿಂಗ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ

ಯಾರು ಡಾರ್ಕ್ ವೆಬ್ ಅನ್ನು ಬಳಸುತ್ತಾರೆ?

ಡಾರ್ಕ್ ವೆಬ್ ಅನ್ನು ಯಾರು ಬಳಸುತ್ತಾರೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬೇಕು. ಪ್ರಪಂಚದಾದ್ಯಂತ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮತ್ತು ಅಕ್ರಮಗಳ ಯೋಜನೆ ಅಲ್ಲಿ ನಡೆಯುತ್ತದೆ ಎಂದು ನಂಬಲಾಗಿದೆ. ಸರ್ಕಾರಿ-ಕಾರ್ಪೊರೇಟ್ ಹಗರಣಗಳನ್ನು ಬಯಲಿಗೆಳೆಯಲು ತನಿಖಾ ಪತ್ರಕರ್ತರು ಡಾರ್ಕ್ ವೆಬ್ ಅನ್ನು ಬಳಸುತ್ತಾರೆ.

ಡಾರ್ಕ್ ವೆಬ್ ಕಾನೂನುಬಾಹಿರವೇ?

ಡಾರ್ಕ್ ವೆಬ್ ಅನ್ನು ಬಳಸುವುದು ಕಾನೂನುಬಾಹಿರವಲ್ಲ. ಇಲ್ಲಿ ಯಾರಾದರೂ ಪ್ರವೇಶಿಸಬಹುದು, ಆದರೆ ಡಾರ್ಕ್ ವೆಬ್ ಅನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಬಾರದು. ಹಾಗೊಂದು ವೇಳೆ ಬಳಸಿದರೆ ಅದು ಕಾನೂನಿಗೆ ವಿರುದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News