ಭೂಪಾಲ್: ಬಾಲಿವುಡ್ ನಟ ಗೋವಿಂದ ಶೈಲಿಯ ನೃತ್ಯ ಕೌಶಲ್ಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿರುವ ಪ್ರಾಧ್ಯಾಪಕ ಸಂಜೀವ್ ಶ್ರೀವಾಸ್ತವ ಅವರು ಮಧ್ಯಪ್ರದೇಶದ ವಿದಿಶಾ ಮಹಾನಗರ ಪಾಲಿಕೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
Best wedding performance selected by UNESCO pic.twitter.com/XPmLbmRKld
— Gautam Trivedi (@KaptanHindustan) May 30, 2018
46 ಹರಯದ ಸಂಜೀವ್ ಶ್ರೀವಾಸ್ತವ,ಎಲೆಕ್ಟ್ರಾನಿಕ್ಸ್ ಪ್ರಾಧ್ಯಾಪಕ ಮತ್ತು ನಟ ಗೋವಿಂದರ ಅಭಿಮಾನಿ. ಇತ್ತೀಚಿಗೆ ಮದುವೆ ಸಮಾರಂಭದಲ್ಲಿ ನೃತ್ಯ ವೀಡಿಯೊಗಳು ಸಾಕಷ್ಟು ವೈರಲ್ ಆಗಿದ್ದವು. ಅದರಲ್ಲಿ 1987 ರ ಚಲನಚಿತ್ರ ಖುದ್ಗಾರ್ಜ್ನಿಂದ 'ಆಪ್ ಕೆ ಆ ಜಾನೆ ಸೆ' ಚಾಧತಿ ಜವಾನಿ ಹಾಡಿಗೆ ನೃತ್ಯ ಮಾಡಿರುವುದು ಸಾಕಷ್ಟು ವೈರಲ್ ಆಗಿತ್ತು.ಇದಕ್ಕೆ ಸ್ವತಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಮ್ಮ ವಿಡಿಯೋ ಗಳು ವೈರಲ್ ಆಗಿರುವ ಪ್ರತಿಕ್ರಿಯಿಸಿದ ಶ್ರೀವಾಸ್ತವ, ಅಕಲ್ಪಿತ ಭಾವನೆ" ಎಂದು ತಿಳಿಸಿದ್ದಾರೆ. "ಇದು ಅಕಲ್ಪಿತವಾದ ಭಾವನೆ. ನನ್ನ ನೃತ್ಯ ವೀಡಿಯೋ ವೈರಲ್ ಆಗಿರುವುದನ್ನು ನನಗೆ ನಂಬಲಾಗುತ್ತಿಲ್ಲ. ನನಗೆ ಬೆಂಬಲ ಮತ್ತು ಪ್ರೀತಿ ವ್ಯಕ್ತಪಡಿಸಿದ ಎಲ್ಲರಿಗೂ ಸಹ ನಾನು ಧನ್ಯವಾದ ಹೇಳಲಿಚ್ಛಿಸುತ್ತೇನೆ ಎಂದರು . ನಾನು 1982 ರಿಂದ ನೃತ್ಯ ಮಾಡುತ್ತಿದ್ದೇನೆ ಮತ್ತು ನನ್ನ ಮೂರ್ತಿ ಗೋವಿಂದ ಜಿ. ನ್ನು ಮುಂದೆ ಹೆಚ್ಚು ಅವಕಾಶಗಳು ಬರುತ್ತವೆ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.