ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ಸ್ಫೋಟವಾಗಿರುವ ಘಟನೆ ವರದಿಯಾಗಿದೆ.ಜವಾಹರ್ ಸುರಂಗದಾದ್ಯಂತ ಬನಿಹಾಲ್ ಸಮೀಪದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸ್ಯಾಂಟ್ರೋ ಕಾರಿನಲ್ಲಿ ರಹಸ್ಯ ಸ್ಫೋಟ ಸಂಭವಿಸಿದೆ.
CRPF sources say prima facie blast in the car seems to be a cylinder explosion, CRPF convoy was at a significant distance from explosion site, does not appear to be an attack. Investigations on. https://t.co/hzj8Cp9xpX
— ANI (@ANI) March 30, 2019
ಈಗ ಈ ಸ್ಪೋಟವು ಸಿಲಿಂಡರ್ ನದ್ದು ಎಂದು ತಿಳಿದುಬಂದಿದ್ದು,ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ವರದಿಯಾಗಿಲ್ಲ ಎನ್ನಲಾಗಿದೆ.ಪ್ರಾಥಮಿಕ ವರದಿಗಳು ಹೇಳುವಂತೆ ಈ ಸಿಲಿಂಡರ್ ಸ್ಫೋಟ ಸಂಭವಿಸಿದಾಗ ಸಿಆರ್ಪಿಎಫ್ ಸಿಬ್ಬಂದಿ ವಾಹನಗಳು ಈ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದವು ಎನ್ನಲಾಗಿದೆ.ಈ ಸ್ಪೋಟದ ವಿಚಾರವಾಗಿ ತನಿಖೆಗೆ ಒಳಪಡಿಸಿದಾಗ ಕಾರಿನೊಳಗಿರುವ ಸಿಲಿಂಡರ್ಗಳು ಸೋರಿಕೆಯಾದ ನಂತರ ಈ ಅಪಘಾತ ಸಂಭವಿಸಿವೆ ಎಂದು ಬೆನಿಹಾಲ್ ಪೊಲೀಸರು ತಿಳಿಸಿದ್ದಾರೆ.ಆದರೆ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಸಿಆರ್ಪಿಎಫ್ ಮೂಲಗಳು ಹೇಳುವಂತೆ ಕಾರ್ ನಲ್ಲಿರುವ ಸಿಲಿಂಡರ್ ಸಿಲಿಂಡರ್ ಸ್ಫೋಟ ಎಂದು ತೋರುತ್ತದೆ. ಈ ಘಟನೆಯು ಉಗ್ರರ ದಾಳಿಯಂತೆ ಕಾಣುತ್ತಿಲ್ಲ ಎಂದು ಹೇಳಿವೆ.ಆದರೆ ಹೆಚ್ಚಿನ ತನಿಖೆಯನ್ನು ಇನ್ನು ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ