Cyclone Yaas Latest Update : ವಿನಾಶಕಾರಿಯಾಗಿರಲಿದೆ ಯಾಸ್ ಚಂಡಮಾರುತ; ಈ ರಾಜ್ಯಗಳಿಗೆ ಹೆಚ್ಚಿನ ಅಪಾಯ

ಬುಧವಾರ ಬೆಳಿಗ್ಗೆ ಯಾಸ್  ವೇಗವು ಗಂಟೆಗೆ 90 ರಿಂದ 100 ಕಿ.ಮೀ ವೇಗದೊಂದಿಗೆ ಒಡಿಶಾ ಕರಾವಳಿಯನ್ನು ತಲುಪುತ್ತದೆ. ನಂತರ ಪೂರ್ವ ಮಿಡ್ನಾಪೋರ್ ಜಿಲ್ಲೆಗಳನ್ನು ತಲುಪಿದಾಗ  155 ರಿಂದ 165 ರವರೆಗೆ ವೇಗವನ್ನು ಪಡೆಯಲಿದೆ. ಇದು ಗಂಟೆಗೆ 185 ಕಿಲೋಮೀಟರ್ ವರೆಗೆ ತಲುಪುವ ಸಾಧ್ಯತೆ ಇದೆ ಎಂದು, ಕೋಲ್ಕತಾ ಮೂಲದ ಪ್ರಾದೇಶಿಕ ಹವಾಮಾನ ವಿಭಾಗದ ಉಪನಿರ್ದೇಶಕ ಸಂಜೀಬ್ ಬಂದೋಪಾಧ್ಯಾಯ ತಿಳಿಸಿದ್ದಾರೆ. 

Written by - Ranjitha R K | Last Updated : May 25, 2021, 09:19 AM IST
  • ಮೇ 26ರಂದು ಬಂಗಾಳ, ಉತ್ತರ ಒಡಿಶಾದ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಲಿರುವ 'ಯಾಸ್'
  • ಚಂಡಮಾರುತ ಎದುರಿಸಲು ಎನ್‌ಡಿಆರ್‌ಎಫ್, ನೌಕಾಪಡೆ, ವಾಯುಪಡೆ ಸನ್ನದ್ದ
  • ರೈಲುಗಳು ಮತ್ತು ವಿಮಾನಗಳು, ಹಡಗುಗಳಿಗೆ ಸರಪಳಿಯಿಂದ ಭದ್ರ
Cyclone Yaas Latest Update : ವಿನಾಶಕಾರಿಯಾಗಿರಲಿದೆ ಯಾಸ್ ಚಂಡಮಾರುತ; ಈ ರಾಜ್ಯಗಳಿಗೆ ಹೆಚ್ಚಿನ ಅಪಾಯ title=
ಮೇ 26ರಂದು ಬಂಗಾಳ, ಉತ್ತರ ಒಡಿಶಾದ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಲಿರುವ 'ಯಾಸ್' (photo india.com)

ನವದೆಹಲಿ :  ಯಾಸ್ ಚಂಡಮಾರುತವು (Yaas Cyclone) ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.   ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಅದರ ವೇಗ ಹೆಚ್ಚುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದು ತೀವ್ರ ಚಂಡಮಾರುತವಾಗಿ (Cyclone) ಬದಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 26 ರ ಬೆಳಿಗ್ಗೆ, ಯಾಸ್ ಬಂಗಾಳ ಮತ್ತು ಉತ್ತರ ಒಡಿಶಾದ (Odisha) ಕರಾವಳಿ ಪ್ರದೇಶಗಳನ್ನು ಅಪ್ಪಳಿಸಲಿದೆ. ನಾಳೆ ಮಧ್ಯಾಹ್ನ ಒಡಿಶಾದ ಪ್ಯಾರಾದೀಪ್ ಮತ್ತು ಬಂಗಾಳದ ಸಾಗರ್ ದ್ವೀಪದ ನಡುವೆ ಬಾಲಸೋರ್ ಮೂಲಕ ಹಾದು ಹೋಗಲಿದೆ. 

ಬುಧವಾರ ಬೆಳಿಗ್ಗೆ ಯಾಸ್ (Cyclone Yaas) ವೇಗವು ಗಂಟೆಗೆ 90 ರಿಂದ 100 ಕಿ.ಮೀ ವೇಗದೊಂದಿಗೆ ಒಡಿಶಾ ಕರಾವಳಿಯನ್ನು ತಲುಪುತ್ತದೆ. ನಂತರ ಪೂರ್ವ ಮಿಡ್ನಾಪೋರ್ ಜಿಲ್ಲೆಗಳನ್ನು ತಲುಪಿದಾಗ  155 ರಿಂದ 165 ರವರೆಗೆ ವೇಗವನ್ನು ಪಡೆಯಲಿದೆ. ಇದು ಗಂಟೆಗೆ 185 ಕಿಲೋಮೀಟರ್ ವರೆಗೆ ತಲುಪುವ ಸಾಧ್ಯತೆ ಇದೆ ಎಂದು, ಕೋಲ್ಕತಾ (Kolkatta) ಮೂಲದ ಪ್ರಾದೇಶಿಕ ಹವಾಮಾನ ವಿಭಾಗದ ಉಪನಿರ್ದೇಶಕ ಸಂಜೀಬ್ ಬಂದೋಪಾಧ್ಯಾಯ ತಿಳಿಸಿದ್ದಾರೆ. 

ಇದನ್ನೂ ಓದಿ : #CycloneYaas ಪೀಡಿತ ಪ್ರದೇಶಗಳಿಂದ ನಿರಾಶ್ರಿತರ ಶಿಬಿರಕ್ಕೆ ತೆರಳುವಂತೆ ಒಡಿಶಾ ಸಿಎಂ ಮನವಿ

ಭಾರತ ಹವಾಮಾನ ಇಲಾಖೆ (IMD) ನೀಡಿದ ಚಂಡಮಾರುತದ ಎಚ್ಚರಿಕೆ ಹಿನ್ನೆಲೆಯಲ್ಲಿ ಮೇ 26 ಮತ್ತು 27ಕ್ಕೆ ನಿಗದಿಯಾಗಿದ್ದ ಎಲ್ಲಾ ಪ್ರಕರಣಗಳನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಪಡಿಸಿದೆ.

ಎನ್‌ಡಿಆರ್‌ಎಫ್, ನೌಕಾಪಡೆ, ವಾಯುಪಡೆ ಸನ್ನದ್ದ :
ಈ ಚಂಡಮಾರುತವನ್ನು ಎದುರಿಸಲು, ಎನ್‌ಡಿಆರ್‌ಎಫ್ (NDRF) , ನೌಕಾಪಡೆ, ವಾಯುಪಡೆ ಮತ್ತು ಕೇಂದ್ರ ಏಜೆನ್ಸಿಗಳು, ಪಶ್ಚಿಮ ಬಂಗಾಳ (West Bengal) ಮತ್ತು ಒಡಿಶಾ ಸರ್ಕಾರಗಳು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ನಡೆಸಿವೆ. ನೌಕಾಪಡೆಯು (Navy) ನಾಲ್ಕು ಯುದ್ಧನೌಕೆಗಳನ್ನು ಪರಿಹಾರ ಕಾರ್ಯಾಚರಣೆಗಾಗಿ ಸಿದ್ಧಪಡಿಸಿದರೆ, ವಾಯುಪಡೆಯು (Air Force) 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳೊಂದಿಗೆ ಚಂಡಮಾರುತವನ್ನು ಎದುರಿಸಲು ಸನ್ನದ್ಧವಾಗಿದೆ.  ಬಂಗಾಳ ಮತ್ತು ಒಡಿಶಾದ ಕರಾವಳಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಎರಡೂ ರಾಜ್ಯಗಳಲ್ಲಿನ ಚಂಡಮಾರುತವನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ.

 

ಇದನ್ನೂ ಓದಿ : Black Fungus: ಖಾಸಗಿ ಅಂಗಗಳ ಮೇಲೂ Mucormycosis ದಾಳಿ ಇಡುತ್ತಂತೆ ಎಚ್ಚರ!

ರೈಲುಗಳು ಮತ್ತು ವಿಮಾನಗಳು, ಹಡಗುಗಳಿಗೆ ಸರಪಳಿಯಿಂದ ಭದ್ರ : 
ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳನ್ನು (Trains) ಸರಪಳಿಗಳಿಂದ ಕಟ್ಟಲಾಗಿದೆ.  ಪೂರ್ವ ಮತ್ತು ಆಗ್ನೇಯ ರೈಲ್ವೆಗಳು ಮೇ 25 ರಿಂದ 27 ರವರೆಗಿನ ರೈಲುಗಳನ್ನು ರದ್ದುಗೊಳಿಸಿವೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು (Flights) ಕೂಡಾ ಸರಪಳಿಯಿಂದ ಕಟ್ಟಲಾಗಿದೆ. ಇನ್ನು ಬಂದರಿನಲ್ಲಿ ದೊಡ್ಡ ಹಡಗನ್ನು ಕೂಡಾ ಸರಪಳಿಯಿಂದ ಕಟ್ಟಿ ಭದ್ರಪಡಿಸಲಾಗಿದೆ. 

ಈ ರಾಜ್ಯಗಳಲ್ಲಿ ಭಾರೀ ಪರಿಣಾಮ : 
ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತದ ಹೆಚ್ಚಿನ ಪರಿಣಾಮ ಕರಾವಳಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಡುಬರುತ್ತದೆ. ಮಾತ್ರವಲ್ಲ, ತಮಿಳುನಾಡು (Tamilnadu) , ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಪರಿಣಾಮ ಇರಲಿದೆ. ಈ ರಾಜ್ಯಗಳಲ್ಲದೆ, ಜಾರ್ಖಂಡ್ ಮತ್ತು ಕೇರಳದ (Kerala) ಕರಾವಳಿ ಪ್ರದೇಶಗಳ ಭಾಗಗಳೂ ಚಂಡಮಾರುತದಿಂದ ಪ್ರಭಾವಿತವಾಗಲಿದೆ.  ಅಸ್ಸಾಂ ಮತ್ತು ಮೇಘಾಲಯದಲ್ಲೂ (Meghalaya) ಭಾರಿ ಮಳೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 26 ಮತ್ತು 27 ರಂದು ಬಂಗಾಳ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Sonia Gandhi : ಪ್ರಧಾನಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News