ಸೈಬರ್ ವಲಯ ಭಯೋತ್ಪಾದನೆ ಮತ್ತು ಮೂಲಭೂತವಾದದ ತಾಣವಾಗಬಾರದು:ಪ್ರಧಾನಿ ಮೋದಿ

    

Last Updated : Nov 23, 2017, 01:42 PM IST
ಸೈಬರ್ ವಲಯ ಭಯೋತ್ಪಾದನೆ ಮತ್ತು ಮೂಲಭೂತವಾದದ ತಾಣವಾಗಬಾರದು:ಪ್ರಧಾನಿ ಮೋದಿ title=

ನವದೆಹಲಿ: ಗುರುವಾರದಂದು ಇಲ್ಲಿ ಸೈಬರ್ ವಲಯದ ಕುರಿತಾದ  5ನೆಯ ಜಾಗತಿಕ ಸಮ್ಮೇಳನವನ್ನು  ಉದ್ಘಾಟಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೈಬರ್ ವಲಯದ ಮಹತ್ವವನ್ನು ಕುರಿತು ಮಾತನಾಡುತ್ತಾ  ಕಳೆದೆರೆಡು ದಶಕಗಳಿಂದ  ಸೈಬರ್ ವಲಯ ಇಡಿ ಜಗತ್ತನ್ನೇ ಬದಲಾಯಿಸಿದೆ.70,80ರ ದಶಕದ ಬೃಹತ್ ಕಂಪ್ಯೂಟರ್ ಗಳಿಂದ 90ರ ವೈಯಕ್ತಿಕ  ಕಂಪ್ಯೂಟರ ಮತ್ತು ಮೇಲ್ ಗಳ ಬದಲಾವಣೆ ಇಂದು  ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಸಂಪರ್ಕವು ಇಂದಿನ ಅಚ್ಚರಿಯ ಸಾಧನಗಳಾಗಿವೆ ಎಂದರು .

ಭಾರತದ ಐಟಿ ಕ್ಷೇತ್ರದ ಪ್ರತಿಭೆಗಳು ಜಗತ್ತಿನೆಲ್ಲಡೆ ವ್ಯಾಪಿಸಿದ್ದು ಮತ್ತು ಭಾರತದ ಐಟಿ ಕಂಪನಿಗಳು ಸಹಿತ ಜಾಗತಿಕವಾಗಿ ಮಹತ್ತರ ಸಾಧನೆಯನ್ನು ಮಾಡಿವೆ.ಇಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಗುಣಮಟ್ಟದ ಸೇವೆಯನ್ನು ಆಡಳಿತ, ಶಿಕ್ಷಣ ,ಆರೋಗ್ಯ ಕ್ಷೇತ್ರದಲ್ಲಿ ನೀಡುತ್ತಿದೆ,ನಮ್ಮ ದೇಶದಲ್ಲಿ  ಮೊಬೈಲನ್ನು ಪ್ರಜೆಗಳನ್ನು ಸಶಕ್ತರನ್ನಾಗಿ ಮಾಡಲು ಬಳಸಲಾಗುತ್ತಿದೆ.ಎಂದು ಅಭಿಪ್ರಾಯಪಟ್ಟರು   

ಸೈಬರವಲಯವು ಭಯೋತ್ಪಾದನೆಯ ತಾಣವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿಗಳು ಸಮಾಜವು ಸೈಬರ ಕ್ರೈಂ ಬಗ್ಗೆ ಎಚ್ಚರದಿಂದಿರಬೇಕಲ್ಲದೆ ಇಂಥಹ ಮೂಲಭೂತವಾದ ಮತ್ತು ಭಯೋತ್ಪಾದನೆಯ ಹಿಂದೆ ಬೀಳಬಾರದು ಎಂದು ಈ ಸಂಧರ್ಭದಲ್ಲಿ ಪ್ರಧಾನ ಮಂತ್ರಿಗಳು ತಿಳಿಸಿದರು. 

ಸಮ್ಮೇಳನವು  'ಎಲ್ಲರಿಗಾಗಿ ಸೈಬರ್ ವಲಯ: ಸುಸ್ಥಿರ ಅಭಿವೃದ್ದಿಗಾಗಿ ರಕ್ಷಣಾತ್ಮಕ ಮತ್ತು ಒಳಗೊಳ್ಳುವಿಕೆಯ ಸೈಬರ್ ವಲಯ' ಎನ್ನುವ ಧ್ಯೇಯವನ್ನು ಹೊಂದಿತ್ತು.ಸಮ್ಮೇಳನದಲ್ಲಿ  124 ದೇಶಗಳ ಪ್ರತಿನಿಧಿಗಳು  ಮತ್ತು 33 ಸಚಿವಾಲಯದ ಪ್ರತಿನಿಧಿಗಳು 31 ದೇಶಗಳಿಂದ ಭಾಗವಹಿಸಿದ್ದರು. 

Trending News