ಶ್ರೀನಗರದಲ್ಲಿ ಉರುಳಿದ CRPF ವಾಹನ, 19 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

28 ಜವಾನರನ್ನು ಹೊತ್ತು ಸಾಗುತ್ತಿದ್ದ CRPF ವಾಹನ ರಾಷ್ಟ್ರೀಯ ಹೆದ್ದಾರಿ ಬಳಿ ಶ್ಯಾಮ್ಲಾಲ್ ಪೆಟ್ರೋಲ್ ಪಂಪ್ ನಿಂದ ಮುಂದೆ ಸಾಗುವಾಗ ನಿಯಂತ್ರಣ ತಪ್ಪಿ ಶ್ರೀನಗರದ ಹೊರವಲಯದಲ್ಲಿರುವ ಬೆಮಿನ ಬಳಿ ಇಂದು ಬೆಳಿಗ್ಗೆ ಸುಮಾರು 05:30 ರ ಸಮಯದಲ್ಲಿ ಅಪಘಾತಕೀಡಾಗಿದೆ.

Last Updated : May 27, 2018, 03:49 PM IST
ಶ್ರೀನಗರದಲ್ಲಿ ಉರುಳಿದ CRPF ವಾಹನ, 19 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ title=

ಶ್ರೀನಗರ: 28 ಜವಾನರನ್ನು ಹೊತ್ತು ಸಾಗುತ್ತಿದ್ದ CRPF ವಾಹನ ರಾಷ್ಟ್ರೀಯ ಹೆದ್ದಾರಿ ಬಳಿ ಶ್ಯಾಮ್ಲಾಲ್ ಪೆಟ್ರೋಲ್ ಪಂಪ್ ನಿಂದ ಮುಂದೆ ಸಾಗುವಾಗ ನಿಯಂತ್ರಣ ತಪ್ಪಿ ಶ್ರೀನಗರದ ಹೊರವಲಯದಲ್ಲಿರುವ ಬೆಮಿನ ಬಳಿ ಇಂದು ಬೆಳಿಗ್ಗೆ ಸುಮಾರು 05:30 ರ ಸಮಯದಲ್ಲಿ ಅಪಘಾತಕೀಡಾಗಿದೆ. ಈ ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಈ ರಸ್ತೆ ಅಪಘಾತವನ್ನು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಿದ್ದಾರೆ. ಅಪಘಾತದ ಆರಂಭಿಕ ಅವಧಿಯಲ್ಲಿ, ಕಲ್ಲುಗಳ ಕಾರಣ ಅಪಘಾತ ಉಂಟಾಗಿದೆಯೆಂದು ತಿಳಿದುಬಂದಿದೆ, ಈ ಕಾರಣದಿಂದ ಚಾಲಕನು ವಾಹನದ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಊಹಿಸಲಾಗಿತ್ತು. ಅದರ ನಂತರ ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾದ ತುಣುಕನ್ನು ಬಿಡುಗಡೆ ಮಾಡಿದರು ಮತ್ತು ಅಪಘಾತದ ಸಮಯದಲ್ಲಿ ಕಲ್ಲಿನ ಪ್ಯಾಚ್ವರ್ಕ್ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಆರ್ಪಿಎಫ್ನ ಐಜಿ ರವೀದೇಪ್ ಸಾಹೇಯವರು ಗಾಯಗೊಂಡ ಯೋಧರನ್ನು ಹತ್ತಿರದ ಜೆವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಹೇಳಿದರು. 7 ಗಾಯಗೊಂಡ ಯೋಧರನ್ನು ಬಾದಾಮಿ ಬಾಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸೈನಿಕನನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಯಿತು. ಮಾಹಿತಿ ಪ್ರಕಾರ CRPF ಆ ಸೈನಿಕನ ಸ್ಪೈನಲ್ ಕಾರ್ಡ್ ಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ.

Trending News