ಕೊರೋನಾ ಪೀಡಿತರ ಸಂಖ್ಯೆ, 24,506ಕ್ಕೆ, ಮೃತಪಟ್ಟವರ ಸಂಖ್ಯೆ‌ 776ಕ್ಕೆ ಏರಿಕೆ

ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಮೇ 3ರ ಬಳಿಕ‌ ಲಾಕ್​ಡೌನ್ ಅನ್ನು ತೆರವುಗೊಳೊಸಬೇಕೋ ಅಥವಾ ಮುಂದುವರೆಸಬೇಕೋ ಎಂಬ ಗೊಂದಲ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ.

Last Updated : Apr 25, 2020, 10:30 AM IST
ಕೊರೋನಾ ಪೀಡಿತರ ಸಂಖ್ಯೆ, 24,506ಕ್ಕೆ, ಮೃತಪಟ್ಟವರ ಸಂಖ್ಯೆ‌ 776ಕ್ಕೆ ಏರಿಕೆ title=

ನವದೆಹಲಿ: ಲಾಕ್​ಡೌನ್ ನಂಥ ಪರಿಣಾಮಕಾರಿ ಕ್ರಮ ಕೈಗೊಂಡ ಬಳಿಕವೂ, ಪರೀಕ್ಷೆಗಳನ್ನು ತೀವ್ರಗೊಳಿಸುತ್ತಿರುವ ನಡುವೆಯೂ ದೇಶದಲ್ಲಿ ಕೊರೋನಾ  ಕೋವಿಡ್-19 (Covid-19) ಪೀಡಿತರ ಸಂಖ್ಯೆ 24,506ಕ್ಕೆ ಏರಿಕೆಯಾಗಿದೆ.  ಅಲ್ಲದೆ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ‌ 775ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಮೊದಲ ಬಾರಿಗೆ  ಲಾಕ್​ಡೌನ್ (Lockdown)ಘೋಷಣೆ ಮಾಡುವ ಮುನ್ನ ಏಪ್ರಿಲ್ 19ರಂದು ಇಡೀ ದೇಶದಲ್ಲಿ ಇದ್ದ ಕೊರೋನಾ ಪೀಡಿತರ ಸಂಖ್ಯೆ ಕೇವಲ 166. ಆದರೀಗ ಆ ಸಂಖ್ಯೆ 24,506ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಗುಣಮುಖರಾದವರು 5,062 ಜನ ಮಾತ್ರ.

 ಕರೋನಾವೈರಸ್ (Coronavirus) ನಿಯಂತ್ರಿಸಲು ಮೊದಲಿವೆ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಆದರೂ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 3ರವರೆಗೆ ಎರಡನೇ ಹಂತದ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಈ ನಡುವೆ ದೇಶದ ಆರ್ಥಿಕತೆ ಮತ್ತು ಉತ್ಪಾದನೆಗೆ ಧಕ್ಕೆ ಆಗಬಾರದೆಂದು ಮತ್ತು ದೇಶದ ಜನ ಜೀವನ ಅಸ್ತವ್ಯಸ್ತ ಆಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 20ರಿಂದ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಒಟ್ಟು ಈವರೆಗೆ 4 ಬಾರಿ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ‌.

ಕಾರ್ಮಿಕರಿಗೆ ಗುಡ್ ನ್ಯೂಸ್: ಕೈಗಾರಿಕೆ ಪ್ರಾರಂಭಕ್ಕೆ ಲಾಕ್​ಡೌನ್‍ನಿಂದ ವಿನಾಯಿತಿ

ಈಗ ಮೇ 3ರ ಬಳಿಕ‌ ಲಾಕ್​ಡೌನ್ ಅನ್ನು ತೆರವುಗೊಳೊಸಬೇಕೋ ಅಥವಾ ಮುಂದುವರೆಸಬೇಕೋ ಎಂಬ ಗೊಂದಲ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ. ಲಾಕ್​ಡೌನ್  ತೆರೆವುಗೊಳಿಸಿದರೆ ಕೊರೋನಾ ಸೋಂಕು ಹರಡುವಿಕೆ ತೀವ್ರಗೊಳ್ಳಬಹುದು, ಲಾಕ್​ಡೌನ್  ಮುಂದುವರೆಸಿದರೆ  ದೇಶದ ಆರ್ಥಿಕತೆ ಕುಸಿಯಲಿವೆ ಎಂಬ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಗೊಂದಲಕ್ಕೆ ಸಿಲುಕಿದೆ.

COVID-19 ಲಾಕ್‌ಡೌನ್ ನಿಯಮ ಸಡಿಲಿಸಿದ ಕೆಂದ್ರ ಗೃಹ ಸಚಿವಾಲಯ, ತೆರೆಯಲಿದೆ ಈ ಅಂಗಡಿಗಳು

ಏಪ್ರಿಲ್ 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಮೇ 3ರ ಬಳಿಕವೂ ಲಾಕ್​ಡೌನ್ ಮುಂದುವರೆಸಬೇಕೊ ಬೇಡವೋ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಂತಿಮ‌ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
 

Trending News