Coronavirus Pandemic:ಕ್ವಾರಂಟೈನ್ ಪ್ರೋಟೋಕಾಲ್ ಉಲ್ಲಂಘಿಸಿದ ಮೇರಿ ಕೋಮ್

ಕರೋನಾವೈರಸ್ ಸಮುದಾಯ ಪ್ರಸರಣದ ಸಾಧ್ಯತೆಯ ಬಗ್ಗೆ ಆತಂಕದ ಮಧ್ಯೆ, ಏಸ್ ಬಾಕ್ಸರ್ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ ಅವರು 14 ದಿನಗಳ ಸಂಪರ್ಕ ತಡೆಯನ್ನು( ಕ್ವಾರಂಟೈನ್ )ಪ್ರೋಟೋಕಾಲ್ ಅನ್ನು ಮುರಿದಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು  ಪ್ರಪಂಚದಾದ್ಯಂತದ ಹಲವು ದೇಶಗಳು ಕ್ವಾರಂಟೈನ್ ನ್ನು ಕಡ್ಡಾಯಗೊಳಿಸಿವೆ.

Last Updated : Mar 21, 2020, 03:26 PM IST
Coronavirus Pandemic:ಕ್ವಾರಂಟೈನ್ ಪ್ರೋಟೋಕಾಲ್ ಉಲ್ಲಂಘಿಸಿದ ಮೇರಿ ಕೋಮ್  title=

ನವದೆಹಲಿ: ಕರೋನಾವೈರಸ್ ಸಮುದಾಯ ಪ್ರಸರಣದ ಸಾಧ್ಯತೆಯ ಬಗ್ಗೆ ಆತಂಕದ ಮಧ್ಯೆ, ಏಸ್ ಬಾಕ್ಸರ್ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ ಅವರು 14 ದಿನಗಳ ಸಂಪರ್ಕ ತಡೆಯನ್ನು( ಕ್ವಾರಂಟೈನ್ )ಪ್ರೋಟೋಕಾಲ್ ಅನ್ನು ಮುರಿದಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು  ಪ್ರಪಂಚದಾದ್ಯಂತದ ಹಲವು ದೇಶಗಳು ಕ್ವಾರಂಟೈನ್ ನ್ನು ಕಡ್ಡಾಯಗೊಳಿಸಿವೆ.

ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯಾ-ಓಷಿಯಾನಿಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸಿದ್ದ ಮೇರಿ ಕೋಮ್ ಮಾರ್ಚ್ 13 ರಂದು ಮನೆಗೆ ಮರಳಿದ್ದರು ಮತ್ತು ನಡೆಯುತ್ತಿರುವ ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಕನಿಷ್ಠ 14 ದಿನಗಳವರೆಗೆ ಸ್ವಯಂ-ಪ್ರತ್ಯೇಕವಾಗಿರಬೇಕಿತ್ತು. ಆದರೆ, ಮಾರ್ಚ್ 18 ರಂದು ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಆಯೋಜಿಸಿದ್ದ ಉಪಾಹಾರದಲ್ಲಿ ಭಾಗವಹಿಸಿದ್ದರು.

ಭಾರತದ ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದ ನಾಲ್ಕು ಚಿತ್ರಗಳಲ್ಲಿ, ಮೇರಿ ಕೋಮ್ ಅವರನ್ನು ಇತರ ಸಂಸತ್ ಸದಸ್ಯರೊಂದಿಗೆ ಕಾಣಬಹುದು. "ರಾಷ್ಟ್ರಪತಿ ಕೋವಿಂದ್ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಬೆಳಗಿನ ಉಪಾಹಾರಕ್ಕಾಗಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಸಂಸತ್ ಸದಸ್ಯರಿಗೆ ಆತಿಥ್ಯ ನೀಡಿದರು" ಎಂದು  ಅವರ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದೇ ದಿನ, ಸೋಂಕಿತ ಬಾಲಿವುಡ್ ಗಾಯಕ ಕಾನಿಕಾ ಕಪೂರ್ ಅವರೊಂದಿಗೆ ಸಂಪರ್ಕಕ್ಕೆ ಬಂದ ಬಿಜೆಪಿ ಶಾಸಕ ದುಶ್ಯಂತ್ ಸಿಂಗ್ ಅವರು ರಾಷ್ಟ್ರಪತಿ ಭವನದಲ್ಲಿದ್ದರು. ಸಿಂಗ್ ಈಗ ಸ್ವಯಂ-ಸಂಪರ್ಕ ತಡೆಯಲ್ಲಿದ್ದಾರೆ.ಜೋರ್ಡಾನ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಬಾಕ್ಸಿಂಗ್ ಸದಸ್ಯರು ಎಲ್ಲರೂ 14 ದಿನಗಳ ಕಡ್ಡಾಯ ನಿರ್ಬಂಧದಲ್ಲಿದ್ದಾರೆ ಎಂದು ಬಾಕ್ಸಿಂಗ್ ತರಬೇತುದಾರ ಸ್ಯಾಂಟಿಯಾಗೊ ನೀವಾ ಶುಕ್ರವಾರ ಐಎಎನ್‌ಎಸ್‌ಗೆ ತಿಳಿಸಿದ್ದರು.

ಇನ್ನೊಂದೆಡೆಗೆ ಮೇರಿ ಕೋಮ್ ಅವರು ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂದು ಒಪ್ಪಿಕೊಂಡಿದ್ದಾರೆ."ನಾನು ಜೋರ್ಡಾನ್‌ನಿಂದ ಹಿಂತಿರುಗಿದಾಗಿನಿಂದ ನಾನು ಮನೆಯಲ್ಲಿದ್ದೇನೆ, ನಾನು ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ಮಾತ್ರ ಹಾಜರಿದ್ದೆ ಮತ್ತು ದುಶ್ಯಂತ್‌ನನ್ನು ಭೇಟಿಯಾಗಲಿಲ್ಲ ಅಥವಾ ಹಸ್ತಲಾಘವ ಮಾಡಲಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಅವರು ಕರೋನವೈರಸ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ, ಏಕೆಂದರೆ ಅವರು ಪಾರ್ಟಿಗೇ ಹಾಜರಾದಾಗ ಸಿಂಗ್ ಅವರನ್ನು ಭೇಟಿಯಾದರು.

Trending News