Coronavirus: 24 ಗಂಟೆಯಲ್ಲಿ 1.26 ಲಕ್ಷ ಪ್ರಕರಣ ವರದಿ, 685 ಮಂದಿ ಸಾವು

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1 ಲಕ್ಷ 26 ಸಾವಿರ 789 ಜನರು ಕರೋನವೈರಸ್  ಸೋಂಕಿಗೆ ಒಳಗಾಗಿದ್ದಾರೆ. 685 ಜನರು ಸಾವನ್ನಪ್ಪಿದ್ದಾರೆ.

Written by - Ranjitha R K | Last Updated : Apr 8, 2021, 11:44 AM IST
  • 24 ಗಂಟೆಗಳಲ್ಲಿ 1,26,789 ಜನರಿಗೆ ಸೋಂಕು
  • 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳಲ್ಲೂ ಹೆಚ್ಚಳ
  • 4 ದಿನಗಳಲ್ಲಿ ಮೂರನೇ ಬಾರಿಗೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿ
Coronavirus: 24 ಗಂಟೆಯಲ್ಲಿ 1.26 ಲಕ್ಷ ಪ್ರಕರಣ ವರದಿ, 685 ಮಂದಿ ಸಾವು    title=
24 ಗಂಟೆಗಳಲ್ಲಿ 1,26,789 ಜನರಿಗೆ ಸೋಂಕು (file photo)

ನವದೆಹಲಿ : ದಿನೇ ದಿನೇ ಕರೋನಾ (Coronavirus) ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1.26 ಲಕ್ಷ ಕೋವಿಡ್ -19 (COVID-19) ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾದಂತಾಗಿದೆ. 

24 ಗಂಟೆಗಳಲ್ಲಿ 1,26,789 ಜನರಿಗೆ ಸೋಂಕು : 
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1 ಲಕ್ಷ 26 ಸಾವಿರ 789 ಜನರು ಕರೋನವೈರಸ್ (Coronavirus) ಸೋಂಕಿಗೆ ಒಳಗಾಗಿದ್ದಾರೆ. 685 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 1 ಕೋಟಿ 29 ಲಕ್ಷ 28 ಸಾವಿರ 574 ಆಗಿದೆ. ಇನ್ನು 1 ಲಕ್ಷ 66 ಸಾವಿರ 862 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : Corona Vaccine : ಕರೋನ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ಮೋದಿ

24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳಲ್ಲೂ ಹೆಚ್ಚಳ : 
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 59 ಸಾವಿರ 258 ಜನರು ಕೋವಿಡ್ -19 (COVD-19) ನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 1 ಕೋಟಿ 18  ಲಕ್ಷ 51 ಸಾವಿರದ 393. ಆದರೆ, ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳಲ್ಲಿ 66 ಸಾವಿರ 846 ರಷ್ಟು ಹೆಚ್ಚಳ ಕಂಡುಬಂದಿದೆ.  

4 ದಿನಗಳಲ್ಲಿ ಮೂರನೇ ಬಾರಿಗೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು  :
ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ, ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು (New corona cases) ವರದಿಯಾಗಿವೆ. ಸೋಮವಾರ (ಏಪ್ರಿಲ್ 5) 1,03,558 ಹೊಸ ಪ್ರಕರಣಗಳು ಮತ್ತು ಬುಧವಾರ (ಏಪ್ರಿಲ್ 7) 115736 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ  ಸೆಪ್ಟೆಂಬರ್ 16 ರಂದು ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಅಂದರೆ 97894 ಪ್ರಕರಣಗಳು ವರದಿಯಾಗಿತ್ತು.

ಇದನ್ನೂ ಓದಿ : ಎಪ್ರಿಲ್ 15 ರ ವರೆಗೆ ಈ ರಾಜ್ಯದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸ್ಥಗಿತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News