ಕರೋನಾ: ಕಳೆದ 24 ಗಂಟೆಗಳಲ್ಲಿ 14933 ಹೊಸ ಪ್ರಕರಣಗಳು, 4.4 ಲಕ್ಷ ದಾಟಿದೆ ಪೀಡಿತರ ಸಂಖ್ಯೆ

ದೇಶದಲ್ಲಿ ಕರೋನಾವೈರಸ್ ಸೋಂಕಿತ ರೋಗಿಗಳ ಸಂಖ್ಯೆ ನಾಲ್ಕೂವರೆ ದಶಲಕ್ಷವನ್ನು ತಲುಪಲಿದೆ.

Last Updated : Jun 23, 2020, 11:07 AM IST
ಕರೋನಾ: ಕಳೆದ 24 ಗಂಟೆಗಳಲ್ಲಿ 14933 ಹೊಸ ಪ್ರಕರಣಗಳು, 4.4 ಲಕ್ಷ ದಾಟಿದೆ ಪೀಡಿತರ ಸಂಖ್ಯೆ title=

ನವದೆಹಲಿ: ದೇಶದಲ್ಲಿ ಕರೋನಾವೈರಸ್  ಕೋವಿಡ್ -19 (Covid-19)  ಸೋಂಕಿತ ರೋಗಿಗಳ ಸಂಖ್ಯೆ ನಾಲ್ಕೂವರೆ ಲಕ್ಷಕ್ಕೆ ತಲುಪಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 14933 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 4,40,215 ಕ್ಕೆ ಏರಿದೆ. 

ಕರೋನವೈರಸ್ (Coronavirus) ಸಾಂಕ್ರಾಮಿಕ ರೋಗದಿಂದ ಕಳೆದ 24 ಗಂಟೆಗಳಲ್ಲಿ 312 ಜನರು ಸಾವನ್ನಪ್ಪಿದ್ದಾರೆ. ಕರೋನಾ ವೈರಸ್ ಸೋಂಕಿನಿಂದ ಈವರೆಗೆ ಒಟ್ಟು 14,011 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ದೆಹಲಿಯಲ್ಲಿ Covid-19 ನಿಯಂತ್ರಿಸಲು ಸಿದ್ಧವಾಗಿದೆ ತಂತ್ರ

ಪ್ರಸ್ತುತ ದೇಶದಲ್ಲಿ ಒಟ್ಟು 1,78,014 ಪ್ರಕರಣಗಳಿವೆ. ಅಂದರೆ ದೇಶದ ಹಲವು ಆಸ್ಪತ್ರೆಗಳಲ್ಲಿ 1,78,014 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಾಂಕ್ರಾಮಿಕ ರೋಗದಿಂದ 2,48,190 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಮಂಗಳವಾರ 56.37% ಕ್ಕೆ ಏರಿದೆ. ದೇಶದಲ್ಲಿ ಕರೋನಾ ಸೋಂಕಿತರ ಚೇತರಿಕೆ ದರ ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಪರಿಹಾರದ ಸುದ್ದಿ. 

Trending News