ಶ್ರೀಲಂಕಾದಲ್ಲಿ ಮತ್ತೆ LTTE ಬಲಪಡಿಸುವ ಹುನ್ನಾರ, ತಮಿಳುನಾಡಿನಲ್ಲಿ ಆತಂಕವಾದಿಯನ್ನು ಬಂಧಿಸಿದ NIA

ಮೂಲಗಳ ಪ್ರಕಾರ, ಈ ವರ್ಷ ಮಾರ್ಚ್ 18 ರಂದು, NCB ಕೇರಳದ Vizhinjam ಬಳಿ ಅರಬ್ಬೀ ಸಮುದ್ರದಲ್ಲಿ ದೋಣಿಯನ್ನು ವಶಪಡಿಸಿಕೊಳ್ಳಲಾಯಿತು. ಆ ದೋಣಿಯಲ್ಲಿ 6 ಜನ ಶ್ರೀಲಂಕಾ  ಪ್ರಜೆಗಳಿದ್ದರು.

Written by - Ranjitha R K | Last Updated : Oct 6, 2021, 07:37 PM IST
  • ಎನ್‌ಸಿಬಿ 6 ಜನರನ್ನು ಬಂಧಿಸಿದೆ
  • ಪ್ರಕರಣದ ತನಿಖೆಯನ್ನು ಎನ್ಐಎ ಆರಂಭಿಸಿದೆ
  • ತಮಿಳುನಾಡನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದೆ
ಶ್ರೀಲಂಕಾದಲ್ಲಿ ಮತ್ತೆ  LTTE ಬಲಪಡಿಸುವ ಹುನ್ನಾರ, ತಮಿಳುನಾಡಿನಲ್ಲಿ ಆತಂಕವಾದಿಯನ್ನು ಬಂಧಿಸಿದ NIA title=
ಎನ್‌ಸಿಬಿ 6 ಜನರನ್ನು ಬಂಧಿಸಿದೆ (file photo)

ನವದೆಹಲಿ : ಶ್ರೀಲಂಕಾದಲ್ಲಿ ಎಲ್ ಟಿಟಿಇಗೆ (LTTE) ಮತ್ತೆ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ.  ಎಲ್ ಟಿಟಿಇ ಭಯೋತ್ಪಾದಕರನ್ನು ಎನ್ ಐಎ (NIA) ಬಂಧಿಸಿದೆ.  ಭಾರತದಲ್ಲಿಯೇ ಇದ್ದು, ಪಾಕಿಸ್ತಾನದಿಂದ ಶ್ರೀಲಂಕಾಗೆ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕೆಲಸದಲ್ಲಿ ನಿರತರಾಗಿದ್ದರು.

ಮಾರ್ಚ್‌ನಲ್ಲಿ 6 ಜನರನ್ನು ಬಂಧಿಸಿದ ಎನ್‌ಸಿಬಿ :
ಮೂಲಗಳ ಪ್ರಕಾರ, ಈ ವರ್ಷ ಮಾರ್ಚ್ 18 ರಂದು, NCB ಕೇರಳದ Vizhinjam ಬಳಿ ಅರಬ್ಬೀ ಸಮುದ್ರದಲ್ಲಿ ದೋಣಿಯನ್ನು ವಶಪಡಿಸಿಕೊಳ್ಳಲಾಯಿತು. ಆ ದೋಣಿಯಲ್ಲಿ 6 ಜನ ಶ್ರೀಲಂಕಾ (Srilanka) ಪ್ರಜೆಗಳಿದ್ದರು. ಇವರುಗಳಿಂದ 300 ಕೆಜಿ ಮಾದಕ ದ್ರವ್ಯ, 5 AK-47 ರೈಫಲ್, 1000 ಗೋಲಿಗಳನ್ನು , 9MM ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು. 

ಇದನ್ನೂ ಓದಿ : ನಕಲಿ mobile appಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಪತ್ತು..! ಇವುಗಳನ್ನು ತಕ್ಷಣ ಗುರುತಿಸಿಕೊಳ್ಳಿ

ಪಾಕಿಸ್ತಾನದಿಂದ (Pakistan) ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಮೂಲಕ ಸಾಗಿಸಿ, ಎಲ್‌ಟಿಟಿಇಯನ್ನು (LTTE)  ಪುನರುಜ್ಜೀವನಗೊಳಿಸಲು ಇವರು ಪ್ರಯತ್ನಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇವರುಗಳ ಸಹಚರ ಭಾರತದಲ್ಲಿದ್ದು, ಸಹಾಯ ಮಾಡುತ್ತಿರುವ ಅಂಶ ಕೂಡಾ ಬೆಳಕಿಗೆ ಬಂದಿದೆ.  

ಇದರ ನಂತರ, ಭಾರತ ಸರ್ಕಾರವು ಪ್ರಕರಣದ ತನಿಖೆಯನ್ನು NIAಗೆ ವಹಿಸಿತು.  2021  ಮೇ ತಿಂಗಳಲ್ಲಿ ತನಿಖೆ ಆರಂಭಿಸಿದ NIA  ಔಪಚಾರಿಕವಾಗಿ ಶ್ರೀಲಂಕಾದ ಪ್ರಜೆಗಳಾದ LY ನಂದನ, HKG B ಜನಕ ದಸ್ಪ್ರಿಯಾ, AHS ಮೆಂಡಿಸ್ ಗುಣಶೇಖರ, SA ನಾಮೇಶ್ ಚುಲ್ಲಕ ಸೇನಾರತ್, ತಿಲಂಕ ಮಧುಶನ್ ರಣಸಿಂಗ್ ಮತ್ತು ದಡಲ್ಲಗೆ ನಿಸಂಕಾ  ಎಂಬವರನ್ನು ಬಂಧಿಸಿತ್ತು.  

ಇದನ್ನೂ ಓದಿ : IAS Success Story: ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಐಎಎಸ್ ಅಧಿಕಾರಿ ದಿವ್ಯಾಂಶು ನಿಗಮ್ ಯಶೋಗಾಥೆ

ಪ್ರಕರಣದ ತನಿಖೆ ಆರಂಭಿಸಿದ ಎನ್ಐಎ :
ಅನೇಕ ಎಲ್ ಟಿಟಿಇ ಬೆಂಬಲಿಗರು ಭಾರತದಲ್ಲಿದ್ದಾರೆ ಮತ್ತು ತಮಿಳುನಾಡಿನಲ್ಲಿ (Tamilnadu) ವಾಸಿಸುತ್ತಿರುವ ಕೆಲವರು ಅವರಿಗೆ ಸಹಾಯ ಮಾಡುತ್ತಿದ್ದಾರೆ ಎನ್ನುವುದನ್ನು  ಎನ್ಐಎ (NIA) ತನ್ನ ತನಿಖೆಯಲ್ಲಿ ಪತ್ತೆ ಹಚ್ಚಿದೆ. ಇದಾದ ನಂತರ, ಚೆನ್ನೈನಲ್ಲಿ ಅಡಗಿದ್ದ ಎಲ್ ಟಿಟಿಇ ಭಯೋತ್ಪಾದಕ ಸತ್ಕುನಂ ಅಲಿಯಾಸ್ ಸಬೇಸನ್ ನನ್ನು ಬಂಧಿಸಲಾಗಿದೆ.  

ಈ ಭಯೋತ್ಪಾದಕನನ್ನು ಎಲ್‌ಟಿಟಿಇಯ ಗುಪ್ತಚರ ವಿಭಾಗದಲ್ಲಿ ನೇಮಿಸಲಾಗಿದ್ದು,  ಚೆನ್ನೈನಲ್ಲಿ (Chennai) ಅಡಗಿರುವ ಎಲ್‌ಟಿಟಿಇ ಬೆಂಬಲಿಗರನ್ನು ಒಟ್ಟುಗೂಡಿಸುತ್ತಿದ್ದ ಎನ್ನಲಾಗಿದೆ. ಅವನು ತನ್ನ ಸಹಚರರ ಮೂಲಕ ಪಾಕಿಸ್ತಾನದಿಂದ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಇದರಿಂದ ಸಂಗ್ರಹಿಸಿದ ಹಣದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಎಲ್ಟಿಟಿಇಯನ್ನು ಶ್ರೀಲಂಕಾದಲ್ಲಿ ಬೆಳೆಸುವ ಗುರಿಯನ್ನು ಹೊಂದಿದ್ದ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News