China Interference In Myanmar: ಮ್ಯಾನ್ಮಾರ್ ನಲ್ಲಿ ನುಸುಳುತ್ತಿದೆ ಚೀನಾ, ತೀವ್ರ ನಿಗಾ ವಹಿಸುವ ಅಗತ್ಯ ಎಂದ ಬಿಪಿನ್ ರಾವತ್

China Interference In Myanmar - ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಬಳಿಕ ಇದೀಗ ಚೀನಾ ಇದೀಗ ಭಾರತವನ್ನು ಸುತ್ತುವರೆಯುವ ಉದ್ದೇಶದಿಂದ ಮ್ಯಾನ್ಮಾರ್ (Myanmar) ನಲ್ಲಿ ತನ್ನ ಹಿಡಿತ ಬಲಪಡಿಸಲು ಆರಂಭಿಸಿದೆ.

Written by - Nitin Tabib | Last Updated : Jul 25, 2021, 05:58 PM IST
  • ಫೆಬ್ರುವರಿಯಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ ಮಿಲಿಟರಿ ದಂಗೆಯ ಬಳಿಕ ಮ್ಯಾನ್ಮಾರ್ ದಿಗ್ಬಂಧನೆಗಳನ್ನು ಎದುರಿಸುತ್ತಿದೆ.
  • ಇದರಿಂದ ಚೀನಾದ ಮಹತ್ವಾಕಾಂಕ್ಷಿ ಯೋಜನೆ BRI ಗೆ ಮತ್ತಷ್ಟು ಬಲ ಸಿಗಲಿದೆ.
  • ಈಶಾನ್ಯ ಭಾರತದಲ್ಲಿನ ಸಾಧನೆಗಳು ಹಾಗೂ ಸವಾಲುಗಳ ಮೇಲೆ ಆಯೋಜಿಸಲಾಗಿದ್ದ ವೆಬಿನಾರ್ ನಲ್ಲಿ ಬಿಪಿನ್ ರಾವತ್.
China Interference In Myanmar: ಮ್ಯಾನ್ಮಾರ್ ನಲ್ಲಿ ನುಸುಳುತ್ತಿದೆ ಚೀನಾ, ತೀವ್ರ ನಿಗಾ ವಹಿಸುವ ಅಗತ್ಯ ಎಂದ ಬಿಪಿನ್ ರಾವತ್ title=
China Interference In Myanmar (File Photo)

China Interference In Myanmar - ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಬಳಿಕ ಇದೀಗ ಚೀನಾ ಇದೀಗ ಭಾರತವನ್ನು ಸುತ್ತುವರೆಯುವ ಉದ್ದೇಶದಿಂದ ಮ್ಯಾನ್ಮಾರ್ (Myanmar) ನಲ್ಲಿ ತನ್ನ ಹಿಡಿತ ಬಲಪಡಿಸಲು ಆರಂಭಿಸಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ (Chief Of Defence Staff Bipin Rawat), ಫೆಬ್ರುವರಿಯಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ ಮಿಲಿಟರಿ ದಂಗೆಯ ಬಳಿಕ ಅಂತಾರಾಷ್ಟ್ರೀಯ ದಿಗ್ಬಂಧನೆಗಳನ್ನೂ ಎದುರಿಸುತ್ತಿರುವ ಮ್ಯಾನ್ಮಾರ್ (Myanmar) ನಲ್ಲಿ ಇದೀಗ ಚೀನಾ  (China)ಒಳನುಸುಳಲು ಆರಂಭಿಸಿದ್ದು, ಇದರಿಂದ ನಿರ್ಮಾಣಗೊಳ್ಳುತ್ತಿರುವ ಪರಿಸ್ಥಿತಿಯ ಮೇಲೆ ಭಾರತ ಸೂಕ್ಷ್ಮವಾಗಿ ಲಕ್ಷ ಕೇಂದ್ರೀಕರಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. 

ಈಶಾನ್ಯ ಭಾರತದಲ್ಲಿನ (Nort-East India) ಸಾಧನೆಗಳು ಹಾಗೂ ಸವಾಲುಗಳ ಮೇಲೆ ಆಯೋಜಿಸಲಾಗಿದ್ದ ವೆಬಿನಾರ್ ವೊಂದನ್ನು ಉದ್ದೇಶಿಸಿ ಮಾತನಾಡಿರುವ ರಾವತ್, 'ಮ್ಯಾನ್ಮಾರ್ ಮೇಲಿನ ದಿಗ್ಬಂಧನೆಗಳ ನಡುವೆ ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬೋಲ್ಡ್ ಅಂಡ್ ರೋಡ್ ಇನಿಶಿಯೇಟಿವ್ (BRI)ಗೆ ಮತ್ತಷ್ಟು ಬಲ ಸಿಗಲಿದೆ' ಎಂದಿದ್ದಾರೆ. ಮ್ಯಾನ್ಮಾರ್ ತನ್ನ ಸಾಮಾನ್ಯ ಸ್ಥಿತಿಗೆ ಮರಳುವುದು ಈ ಕ್ಷೇತ್ರದ ಭವಿಷ್ಯಕ್ಕಾಗಿ ತುಂಬಾ ಮಹತ್ವದ್ದಾಗಿದೆ. ಏಕೆಂದರೆ, ಮ್ಯಾನ್ಮಾರ್ ಜೊತೆಗೆ ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳು ಆಳವಾಗಿ ಬೇರೂರಿವೆ ಎಂದು ರಾವತ್ ಹೇಳಿದ್ದಾರೆ. 

'ಭಾರತದ ಈಶಾನ್ಯ ಪ್ರದೇಶ, ಸಿಲಿಗುರಿ ಕಾರಿಡಾರ್ ಅಥವಾ 'ಚಿಕನ್ ನೆಕ್' (Chicken Neck) ದೇಶದ ಇತರೆ ಭಾಗಗಳೊಂದಿಗೆ ಸಂಬಂಧ ಹೊಂದಿದ್ದು, ಅತ್ಯಧಿಕ ಭೂ-ತಂತ್ರಗಾರಿಕೆಯ ಮಹತ್ವ ಹೊಂದಿದೆ. ಅದರಲ್ಲೂ ವಿಶೇಷವಾಗಿ ಚೀನಾ ಈ ಪ್ರದೇಶದ ಮೇಲೆ ತನ್ನ ಕೆಟ್ಟ ದೃಷ್ಟಿ ಬೀರಿದೆ.

ಇದನ್ನೂ ಓದಿ- ಕೇವಲ 24 ಗಂಟೆಯಲ್ಲಿಯೇ 262 ತಾಲಿಬಾನ್ ಭಯೋತ್ಪಾದಕರ ಹತ್ಯೆ..!

ಇತರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ರೋಹಿಂಗ್ಯಾ ಶರಣಾರ್ಥಿಗಳ ಸಂಖ್ಯೆಯೂ ಕೂಡ ಈ ಕ್ಷೇತ್ರದ ಪಾಲಿಗೆ ಚಿಂತೆ ಹೆಚ್ಚಿಸುವ ಸಂಗತಿಯಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಬಿಪಿನ್ ರಾವತ್, 'ಮೂಲಭೂತವಾದಿ ಇಸ್ಲಾಮಿಕ್ ಸಮೂಹ ಈ ಪ್ರದೇಶದಲ್ಲಿ ಶಾಂತಿ ಕದಡಿ, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಚೀನಾ ಹೊರತುಪಡಿಸಿ ಈಶಾನ್ಯ ಕ್ಷೇತ್ರದಲ್ಲಿರುವ ತೆರೆದ ಗಡಿಗಳ ಕಾರಣ ಕೂಡ ಔಷಧಿ ಹಾಗೂ ಡ್ರಗ್ಸ್ ಗಳ ಕಳ್ಳಸಾಗಾಣಿಕೆಯಂತಹ ಹಲವು ಚಿಂತೆಗಳು ಕೂಡ ಇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN

ಈಶಾನ್ಯದಲ್ಲಿ ಆಂತರಿಕ ಭದ್ರತಾ ಸವಾಲುಗಳ ಗಂಭೀರ ಅಂತಾರರಾಷ್ಟ್ರೀಯ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತೆಗೆ ಸಂಬಂಧಿಸಿದ ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡುಅಂತಾರಾಷ್ಟ್ರೀಯ ರಾಜತಾಂತ್ರಿಕ-ಮಿಲಿಟರಿ ಸಹಕಾರ ಬಹಳ ಮುಖ್ಯವಾಗಿದೆ. ಇತೀಚಿನ ವರ್ಷಗಳಲ್ಲಿ ಪೂರ್ವೋತ್ತರ ಕ್ಷೇತ್ರಗಳಲ್ಲಿ ಸತದ ವಾಗಿ ನಡೆಯುತ್ತಿರುವ ಉಗ್ರಗಾಮಿ ವಿರೋಧಿ ಚಟುವಟಿಕೆಗಳ ಕಾರಣ ಈ ಕ್ಷೇತ್ರದಲ್ಲಿ ಉಗ್ರವಾಗಿ ಚಟುವಟಿಕೆಗಳು ಕಡಿಮೆಯಾಗಿವೆ ಹಾಗೂ ಬಾಂಗ್ಲಾದೇಶ್, ಭೂತಾನ್ ಮ್ಯಾನ್ಮಾರ್ ಗಳಂತಹ ನೆರೆ ರಾಷ್ಟ್ರಗಳಲ್ಲಿ ಉಗ್ರವಾದಿಗಳ ಸುರಕ್ಷಾ ತಾಣಗಳು ಕೂಡ ಕಡಿಮೆಯಾಗಿವೆ. ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ-Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News