Chandrayaan-3 Launch: ಚಂದ್ರಯಾಣ-3 ಉಡಾವಣೆ ಸಕ್ಸಸ್, ವಿಜ್ಞಾನಿಗಳ ಮೊಗದಲ್ಲಿ ಸಂತಸ

Chandrayaan-3 mission: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.

Written by - Puttaraj K Alur | Last Updated : Jul 14, 2023, 03:34 PM IST
  • ಇಸ್ರೋದ ಮಹತ್ವಾಕಾಂಕ್ಷೆಯ 3ನೇ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ
  • ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ LVM-3 ರಾಕೆಟ್ ಉಡಾವಣೆ
  • ಭಾರತದ ಚಂದ್ರಯಾನ-3 ಯೋಜನೆಯನ್ನು 615 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗಿದೆ
Chandrayaan-3 Launch: ಚಂದ್ರಯಾಣ-3 ಉಡಾವಣೆ ಸಕ್ಸಸ್, ವಿಜ್ಞಾನಿಗಳ ಮೊಗದಲ್ಲಿ ಸಂತಸ title=
ಚಂದ್ರಯಾನ-3 ಉಡಾವಣೆ ಸಕ್ಸಸ್

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ(ISRO) ಮಹತ್ವಾಕಾಂಕ್ಷೆಯ 3ನೇ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಸ್ರೋ ಶುಕ್ರವಾರ ಮಧ್ಯಾಹ್ನ ಚಂದ್ರನ ಮೇಲೆ ರೋವರ್ ಇಳಿಸುವ ಉದ್ದೇಶದಿಂದ ಯಶಸ್ವಿಯಾಗಿ ರಾಕೆಟ್ ಉಡಾವಣೆಗೊಳಿಸಿದ್ದು, ವಿಜ್ಞಾನಿಗಳ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.

ಇದನ್ನೂ ಓದಿ: Vyapam Scam 2.0 : ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸುವಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ, ಈ ಹಿಂದಿನ ಸೋವಿಯತ್ ಒಕ್ಕೂಟ ಹಾಗೂ ಚೀನಾ ಮಾತ್ರವೇ ಯಶಸ್ವಿಯಾಗಿವೆ. ದುರದೃಷ್ಟವಶಾತ್ 2023ರ ಆರಂಭದಲ್ಲಿ ಜಪಾನಿನ ಸ್ಟಾರ್ಟಪ್ ಸಂಸ್ಥೆಯೊಂದರ ಚಂದ್ರನ ಮೇಲೆ ಇಳಿಯುವ ಪ್ರಯತ್ನ ಪತನಗೊಂಡು, ವೈಫಲ್ಯ ಅನುಭವಿಸಿತ್ತು.

ಭಾರತದ ಚಂದ್ರಯಾನ-3 ಯೋಜನೆಯನ್ನು ಅಂದಾಜು 75 ಮಿಲಿಯನ್ ಡಾಲರ್ ಮೊತ್ತದಲ್ಲಿ (615 ಕೋಟಿ) ಅಭಿವೃದ್ಧಿಪಡಿಸಲಾಗಿದೆ. ಯಶಸ್ವಿ ಉಡಾವಣೆಯಾಗಿರುವ 43.5 ಮೀಟರ್ ಉದ್ದದ (143 ಅಡಿ) LVM-3  ಉಡಾವಣಾ ರಾಕೆಟ್ ಸ್ಪೇಸ್‌ಕ್ರಾಫ್ಟ್ ಅನ್ನು ದೀರ್ಘವೃತ್ತಾಕಾರದ ಭೂಮಿಯ ಕಕ್ಷೆಗೆ ಒಯ್ಯಲಿದೆ. ಅಲ್ಲಿಂದ ಸ್ಪೇಸ್‌ಕ್ರಾಫ್ಟ್ ಚಂದ್ರನೆಡೆಗಿನ ಪಥವನ್ನು ಅನುಸರಿಸಿ ಚಲಿಸುತ್ತಾ, ಆಗಸ್ಟ್ 23ರ ಆಸುಪಾಸಿನಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News