7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿಯಲ್ಲೂ ಹೆಚ್ಚಳ,

ಕರೋನಾ ಮಹಾಮಾರಿ  ಹಿನ್ನೆಲೆಯಲ್ಲಿ  ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು  ತಡೆಹಿಡಿಯಲಾಗಿತ್ತು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ  ಜನವರಿ 2020, 1 ಜುಲೈ 2020 ಮತ್ತು 1 ಜನವರಿ 2021 ರ ಡಿಎ ಮತ್ತು ಡಿಆರ್ ಅನ್ನು ತಡೆಹಿಡಿಯಲಾಗಿತ್ತು.

Written by - Ranjitha R K | Last Updated : Apr 12, 2021, 09:44 AM IST
  • ತಡೆಹಿಡಿಯಲಾಗಿದ್ದ ಡಿಎ ಮತ್ತು ಡಿ.ಆರ್ ಜುಲೈ 1 ರಿಂದ ಮತ್ತೆ ಆರಂಭಿಸುವುದಾಗಿ ಸರ್ಕಾರ ಹೇಳಿದೆ
  • ಲೆಕ್ಕಾಚಾರ ಹಾಕಿದರೆ ಹೆಚ್ಚಳವಾದ ಬಳಿಕ ಕೇಂದ್ರ ನೌಕರರಿಗೆ ಶೇ. 28 ರಷ್ಟು ಡಿಎ ಸಿಗಲಿದೆ.
  • ಏರಿಕೆಯಾಗಲಿದೆ ಕುಟುಂಬ ಪಿಂಚಣಿ, ಪಿಎಫ್ ಇತ್ಯಾದಿ
7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿಯಲ್ಲೂ ಹೆಚ್ಚಳ,  title=
ತಡೆಹಿಡಿಯಲಾಗಿದ್ದ ಡಿಎ ಮತ್ತು ಡಿ.ಆರ್ ಜುಲೈ 1 ರಿಂದ ಮತ್ತೆ ಆರಂಭಿಸುವುದಾಗಿ ಸರ್ಕಾರ ಹೇಳಿದೆ (file photo)

ನವದೆಹಲಿ: 7th Pay Commission : ಲಕ್ಷಾಂತರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಕರೋನಾ (Coronavirus) ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಡಿಎ (DA)ಮತ್ತು ಡಿ.ಆರ್ ಜುಲೈ 1 ರಿಂದ  ಮತ್ತೆ ಆರಂಭಿಸುವುದಾಗಿ ಸರ್ಕಾರ ಈಗಾಗಲೇ ಸಂಸತ್ತಿನಲ್ಲಿ ತಿಳಿಸಿದೆ.

ಜುಲೈ 1 ರಿಂದ ಸ್ಥಗಿತಗೊಂಡ ತುಟ್ಟಿ ಭತ್ಯೆ ಲಭ್ಯ : 
ಕರೋನಾ (Coronavirus)ಮಹಾಮಾರಿ  ಹಿನ್ನೆಲೆಯಲ್ಲಿ  ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (DA) ತಡೆಹಿಡಿಯಲಾಗಿತ್ತು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ  ಜನವರಿ 2020, 1 ಜುಲೈ 2020 ಮತ್ತು 1 ಜನವರಿ 2021 ರ ಡಿಎ ಮತ್ತು ಡಿಆರ್ (DR)ಅನ್ನು ತಡೆಹಿಡಿಯಲಾಗಿತ್ತು. ಈಗ 2021 ರ ಜುಲೈ 1 ರಂದು ಪರಿಷ್ಕರಣೆ ದರದಲ್ಲಿ ಅವುಗಳನ್ನು ಮತ್ತೆ ನೀಡಲಾಗುವುದು ಎಂದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು 50 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅತಿ ದೊಡ್ಡ ಸುದ್ದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ  (Central government employee) ಶೇ. 17ರ ದರದಲ್ಲಿ ಡಿಎ, ಡಿಆರ್  ಸಿಗುತ್ತಿದ್ದು, ಅದು  ಇನ್ನು ಶೇ. 28ಕ್ಕೆ ಏರಿಕೆಯಾಗಲಿದೆ. 

ಇದನ್ನೂ ಓದಿ : Postal Investment: ಸ್ಥಿರ ಠೇವಣಿಗಿಂತ ಉತ್ತಮ ಆದಾಯ ನೀಡುವ Post Officeನ ಈ ಯೋಜನೆ ನಿಮಗೆ ತಿಳಿದಿದೆಯೇ?

ಡಿಎ ಹೆಚ್ಚಳದಿಂದಲೂ ಪ್ರಯೋಜನವಾಗುತ್ತದೆ:
ಇತ್ತೀಚೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ (Anurag Takur) ಅವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಜುಲೈ 1 ರಿಂದ ಕೇಂದ್ರ ಸರ್ಕಾರದ ಎಲ್ಲ ಉದ್ಯೋಗಿಗಳಿಗೆ ಡಿಎಯ ಸಂಪೂರ್ಣ ಲಾಭ ಸಿಗಲಿದೆ ಎಂದು ಹೇಳಿದ್ದರು. 2021 ರ ಜನವರಿಯಿಂದ ಜೂನ್ ವರೆಗೆ ಸ್ಥಗಿತಗೊಳಿಸಿದ ಡಿಎ ಜೊತೆಗೆ ಡಿಎ ಏರಿಕೆಯ ಪ್ರಯೋಜನ ಕೂಡಾ ಕೇಂದ್ರ ನೌಕರರಿಗೆ ಸಿಗಲಿದೆ.

ಶೇ. 28 ರಷ್ಟು ಡಿಎ ಸಿಗಬಹುದು :
ಇಲ್ಲಿಯವರೆಗೆ ಶೇ. 17 ರಷ್ಟು ಡಿಎ ಸಿಗುತ್ತಿತ್ತು. ಈಗ ಜನವರಿ 2020 ರಿಂದ ಜೂನ್ 2020ರ ತನಕದ ಶೇ. 3 ರಷ್ಟು ಡಿಎ, ಜುಲೈ 2020 ರಿಂದ ಡಿಸೆಂಬರ್ 2020ರ ತನಕದ ಶೇ. 4 ಡಿಎ ಹಾಗೂ ಇಲ್ಲಿಯವರೆಗೆ ಸಿಗುತ್ತಿದ್ದ ಶೇ. 17 ರಷ್ಟು ಡಿಎ- ಇವೆಲ್ಲವೂ ಸೇರಿ ಶೇ. 24 ರಷ್ಟು ಡಿಎ ಲೆಕ್ಕಾಚಾರ ಮಾಡಲಾಗಿತ್ತು.  ಇದರ ಜೊತೆ ಕಳೆದ ವರ್ಷ ಕ್ಯಾಬಿನೆಟ್ ಕೂಡಾ ಶೇ. 4 ರಷ್ಟು ಡಿಎ ಏರಿಕೆ ಮಾಡಿತ್ತು. ಇವೆಲ್ಲವೂ ಸೇರಿದಾಗ ಶೇ. 28 ರಷ್ಟು ಡಿಎ ಸಿಗುವ ಸಾಧ್ಯತೆ ಗಳಿವೆ. 

ಇದನ್ನೂ ಓದಿ : ಸ್ಕೂಲ್ ಐಡಿ ಇದ್ದರೆ ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್

ಕುಟುಂಬ ಪಿಂಚಣಿ ಹೆಚ್ಚಳ :
ಕೆಲವು ದಿನಗಳ ಹಿಂದೆ, ಕೇಂದ್ರ ಪಿಂಚಣಿದಾರರಿಗೆ ಕುಟುಂಬ ಪಿಂಚಣಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕೇಂದ್ರ ಸರ್ಕಾರವು ಕುಟುಂಬ ಪಿಂಚಣಿಯ ಗರಿಷ್ಠ ಮಿತಿಯನ್ನು ಸುಮಾರು ಎರಡೂವರೆ ಪಟ್ಟು ಹೆಚ್ಚಿಸಿದೆ. ಇಲ್ಲಿಯವರೆಗೆ ಕುಟುಂಬ ಪಿಂಚಣಿಯ ಗರಿಷ್ಠ ಮಿತಿ ತಿಂಗಳಿಗೆ 45,000 ರೂ. ಈಗ ಇದನ್ನು ತಿಂಗಳಿಗೆ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಪಿಎಫ್ ಕೂಡ ಹೆಚ್ಚಾಗುತ್ತದೆ:
ಡಿಎ ಸಿಗಲು ಆರಂಭಿಸಿದ  ನಂತರ, ಕೇಂದ್ರ ನೌಕರರ ಭವಿಷ್ಯ ನಿಧಿ ಕೂಡ ಹೆಚ್ಚಾಗುತ್ತದೆ. ಕೇಂದ್ರ ನೌಕರರ ಪಿಎಫ್ (PF)ಲೆಕ್ಕಾಚಾರವನ್ನು ಅವರ  ಮೂಲ ವೇತನ ಮತ್ತು ಡಿಎ ಹೊಂದಿಕೆಯೊಂದಿಗೆ ಮಾಡಲಾಗುತ್ತದೆ. 

ಇದನ್ನೂ ಓದಿ : SBI ಗ್ರಾಹಕರೆ ಗಮನಿಸಿ: ಫಿಕ್ಸೆಡ್ ಡೆಪಾಸಿಟ್ ದಾರರಿಗೆ ಬ್ಯಾಂಕ್ ನಿಂದ ಎಚ್ಚರಿಕೆ!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News