ನವದೆಹಲಿ: 10 ನೇ ತರಗತಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 2 ಹೆಚ್ಚುವರಿ ಅಂಕಗಳನ್ನು ನೀಡುವುದಾಗಿ ಸಿಬಿಎಸ್ಇ ತಿಳಿಸಿದೆ.
ಮಾರ್ಚ್ 12ರಂದು ನಡೆದ ಪರೀಕ್ಷೆಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆಯ ಕಾಂಪ್ರಹೆನ್ಶನ್ ಪ್ಯಾಸೇಜ್ ವಿಭಾಗದಲ್ಲಿ ಆಗಿದ್ದ ಲೋಪದೋಷಗಳನ್ನು ಸರಿದೂಗಿಸುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಂಡಳಿಯನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿದ ಮಂಡಳಿ, ಪ್ರಶ್ನೆ ಪತ್ರಿಕೆಯಲ್ಲಾಗಿದ್ದ ತಪ್ಪುಗಳಿಗೆ 2 ಹೆಚ್ಚುವರಿ ಅಂಕಗಳನ್ನು ನೀಡಲು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ನಿರ್ಧರಿಸಿದೆ.
ಸಿಬಿಎಸ್ಇ 10ನೇ ತರಗತಿ ಹಾಗೂ 12ನೇ ತರಗತಿಯ ಪರೀಕ್ಷೆಗಳು ಮಾ.5 ರಿಂದ ಪ್ರಾರಂಭವಾಗಿದ್ದು ಏ.25ಕ್ಕೆ ಮುಕ್ತಾಯಗೊಳ್ಳಲಿದೆ.