Kullu Landslide: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಹಲವು ಮನೆಗಳು ಕುಸಿದಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ 8 ರಿಂದ 9 ಕಟ್ಟಡಗಳು ಕುಸಿದು ಬಿದ್ದಿವೆ. ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳನ್ನು ತೆರವು ಮಾಡಿದ್ದರಿಂದ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ಇರಲಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿ ಈ ಅವಘಡ ಸಂಭವಿಸಿದೆ.
ಈ ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಸೃಷ್ಟಿಸಿರುವ ಅನಾಹುತದಿಂದ ಆತಂಕ ಎದುರಾಗಿದೆ. ಇಲ್ಲಿನ ಸಿರಾಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಇದೇ ವೇಳೆ ಕಂಗ್ರಾದ ಕೋಟ್ಲಾದಲ್ಲೂ ಪ್ರಕೃತಿ ವಿಕೋಪ ಸೃಷ್ಟಿಸಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಭೂಕುಸಿತದ ನಂತರ ಪರ್ವತಗಳಿಂದ ಹರಿಯುವ ಅವಶೇಷಗಳಿಂದಾಗಿ ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ.
ಇದನ್ನೂ ಓದಿ : Rain Alert: ಮುಂದಿನ 48 ಗಂಟೆಯಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆ: ಸಿಡಿಲು-ಬಿರುಗಾಳಿ ಭೀತಿ, ರೆಡ್ ಅಲರ್ಟ್ ಘೋಷಣೆ
ಹಿಮಾಚಲ ಪ್ರದೇಶದಲ್ಲಿ ಒಂದೆಡೆ ಭೂಕುಸಿತದಿಂದ ಅನಾಹುತವಾದರೆ, ಮತ್ತೊಂದೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ನದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ಒಂದು ರೀತಿಯಲ್ಲಿ ಅಪಾಯವನ್ನು ಹೊದ್ದು ಕೊಂಡೆ ಇಲ್ಲಿನ ಜನ ಬದುಕುತ್ತಿದ್ದಾರೆ. ಮಂಡಿಯಲ್ಲಿ ಪ್ರಕೃತಿಯ ಪ್ರಕೋಪ ಕಂಡು ಬರುತ್ತಿದ್ದು, ಶಿಮ್ಲಾದಲ್ಲೂ ಅಪಾಯ ಎದ್ದು ಕಾಣುತ್ತಿದೆ. ಶಿಮ್ಲಾದ ಮಾಲ್ ರಸ್ತೆಯಲ್ಲಿ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಮಳೆಯಿಂದಾಗಿ ರಸ್ತೆಗಳು ರಾಜಕಾಲುವೆಗಳಾಗಿ ಮಾರ್ಪಟ್ಟಿವೆ.
Scary building collapse from another
angle in Anni, Kullu, today. At least four buildings have come down like a house of cards today morning. 24/August/2023#HimachalPradesh #Kullu pic.twitter.com/qE9dCiO6ma— Delhi-NCR Weatherman 🌦️🥵⛈️🥶 (@SouravSaxena_17) August 24, 2023
ಇದನ್ನೂ ಓದಿ : Chandrayaan-3: ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿ: ಹೊಸ ದಾಖಲೆ ನಿರ್ಮಿಸಿದ ಭಾರತ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.