ಸ್ನೇಹಿತನ ಕತ್ತು ಸೀಳಿ, ಕೈ ಕಾಲು ಕತ್ತರಿಸಿ ಕೊಲೆ.. ಕಾಡಿನಲ್ಲಿ ಶವ ಎಸೆದ ಕಿರಾತಕರು!

Boy Killed By Friends: 14 ವರ್ಷದ ಬಾಲಕನನ್ನು ಆತನ ಸ್ನೇಹಿತರೆ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.

Edited by - Zee Kannada News Desk | Last Updated : Dec 23, 2021, 12:56 PM IST
  • 14 ವರ್ಷದ ಬಾಲಕನನ್ನು ಆತನ ಸ್ನೇಹಿತರೆ ಹತ್ಯೆ ಮಾಡಿದ್ದಾರೆ
  • ಕತ್ತು ಸೀಳಿ, ಕೈಕಾಲುಗಳನ್ನು ಕತ್ತರಿಸಿ, ಮೃತ ದೇಹವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾರೆ
ಸ್ನೇಹಿತನ ಕತ್ತು ಸೀಳಿ, ಕೈ ಕಾಲು ಕತ್ತರಿಸಿ ಕೊಲೆ.. ಕಾಡಿನಲ್ಲಿ ಶವ ಎಸೆದ ಕಿರಾತಕರು!  title=
ಹತ್ಯೆ

ದಿಯೋಘರ್: 14 ವರ್ಷದ ಬಾಲಕನನ್ನು ಆತನ ಸ್ನೇಹಿತರೆ ಹತ್ಯೆ (Boy Killed By Friends) ಮಾಡಿರುವ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ. ಸ್ನೇಹಿತರು ಆತನ ಕತ್ತು ಸೀಳಿ, ಕೈಕಾಲುಗಳನ್ನು ಕತ್ತರಿಸಿ, ಮೃತ ದೇಹವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ರಾತ್ರಿ ಬಾಲಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಮೃತನ ಕುಟುಂಬದವರು ಬುಧವಾರ ದೂರು ದಾಖಲಿಸಿದ್ದಾಗಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಮೃತನ ಅಪ್ರಾಪ್ತ ಸ್ನೇಹಿತನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಅವರು ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಜಸಿದಿಹ್ ಪೊಲೀಸ್ ಠಾಣಾ ವ್ಯಾಪ್ತಿಯ ರೋಹಿಣಿ ಗ್ರಾಮದ ಮನೆಯ ಹೊರಗೆ ಮೃತನನ್ನು ಭೇಟಿಯಾದರು. ಬಳಿಕ ಕುಮ್ರಾಬಾದ್ ಸ್ಟೇಷನ್ ರಸ್ತೆ ಕಡೆ ಹೋಗಿದ್ದಾರೆ. ಅಲ್ಲಿ ಮತ್ತೊಬ್ಬ ಸ್ನೇಹಿತ ಅವಿನಾಶ್ (19) ಅವರೊಂದಿಗೆ ಸೇರಿಕೊಂಡಿದ್ದಾನೆ. ಮೂವರೂ ಪಳಂಗ ಪಹಾಡ್ ಜಂಗಲ್ ಕಡೆಗೆ ಹೋಗುತ್ತಿದ್ದಾಗ ಸ್ನೇಹಿತರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಅವಿನಾಶ್ ಚಾಕುವನ್ನು ತೆಗೆದುಕೊಂಡು ಆತನಿಗೆ ಇರಿದಿದ್ದಾನೆ. ನಂತರ ಅವನ ಕತ್ತು ಸೀಳಿದ್ದಾನೆ  ಎಂದು ಅಧಿಕಾರಿ ಹೇಳಿದರು. 

ಆತನನ್ನು ಕೊಂದ ನಂತರ, ಅವಿನಾಶ್ ಕೈ ಮತ್ತು ಕಾಲುಗಳನ್ನು ಕತ್ತರಿಸಿ, ನಂತರ ದೇಹದ ಭಾಗಗಳನ್ನು ಮೂರು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಅವಿನಾಶ್‌ನನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಅವಿನಾಶ್ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಚಾಕು ಮತ್ತು ಮೃತನ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯಾಧಾರ ಕಣ್ಮರೆಯಾಗುವಂತೆ ಮಾಡುವುದು), 120 ಬಿ (ಅಪರಾಧದ ಪಿತೂರಿ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಹಗ್ಗದಿಂದ ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ, ಐವರ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News