Booster Dose Update: Omicron ಅಪಾಯದ ನಡುವೆಯೇ ಸರ್ಕಾರಕ್ಕೆ ವಿಜ್ಞಾನಿಗಳ ಶಿಫಾರಸು, 40+ ಜನರಿಗೆ ಬೂಸ್ಟರ್ ಡೋಸ್ ನೀಡಿ!

Covid-19 Vaccine Booster Dose - ಇತ್ತೀಚೆಗಷ್ಟೇ ಕೊರೊನಾ ವೈರಸ್ ನ ಹೊಸ ವೇರಿಯಂಟ್ ನ ಎರಡು ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದ ಬಳಿಕ ವ್ಯಾಕ್ಸಿನ್ ಮೇಲೆ ಮತ್ತೊಮ್ಮೆ ಪ್ರಶ್ನೆಗಳು ಏಳಲಾರಂಭಿಸಿವೆ. ಇಂತಹ ಸಂದರ್ಭದಲ್ಲಿ ವಿಜ್ಞಾನಿಗಳು ದೇಶದಲ್ಲಿರುವ 40+ ಜನರಿಗೆ ಬೂಸ್ಟರ್ ಡೋಸ್ ನೀಲು ಸಲಹೆ ನೀಡಿದ್ದಾರೆ. 

Written by - Nitin Tabib | Last Updated : Dec 3, 2021, 06:30 PM IST
  • 40+ ಜನರಿಗೆ ದೇಶದಲ್ಲಿ ಬೂಸ್ಟರ್ ಡೋಸ್ ನೀಡಬೇಕು.
  • ವಿಜ್ಞಾನಿಗಳ ಸಂಘ ಶಿಫಾರಸ್ಸು.
  • ಕಾಂಟಾಕ್ಟ್ ಟ್ರೆಸಿಂಗ್ ಮೇಲೆ ಹೆಚ್ಚಿನ ಒತ್ತು ನೀಡಬೇಕು
Booster Dose Update: Omicron ಅಪಾಯದ ನಡುವೆಯೇ ಸರ್ಕಾರಕ್ಕೆ ವಿಜ್ಞಾನಿಗಳ ಶಿಫಾರಸು, 40+ ಜನರಿಗೆ ಬೂಸ್ಟರ್ ಡೋಸ್ ನೀಡಿ! title=
Booster Dose Update (File Photo)

ನವದೆಹಲಿ: Anti-Covid-19 Vaccine Booster Dose - ದೇಶದಲ್ಲಿ ಮತ್ತೊಮ್ಮೆ ಕೊರೊನಾ ಅಟ್ಟಹಾಸ ಮೆರೆದಿದೆ. ಕರೋನಾ ವೈರಸ್‌ನ  (Coronavirus)ಹೊಸ ರೂಪಾಂತರಿ ಓಮಿಕ್ರಾನ್ (Omicron) ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಈ ವೈರಸ್ ನ 2 ಹೊಸ ಪ್ರಕರಣಗಳು ಪತ್ತೆಯಾದ ಬಳಿಕ, ಲಸಿಕೆ ಬಗ್ಗೆ ಮತ್ತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇಂತಹ  ಪರಿಸ್ಥಿತಿಯಲ್ಲಿ, ದೇಶದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಬೂಸ್ಟರ್ ಡೋಸ್ (Corona Vaccine Booster Dose) ನೀಡಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ವಿಜ್ಞಾನಿಗಳು ಮಾಡಿದ ಶಿಫಾರಸುಗಳು ಏನು?
ಭಾರತದ ಉನ್ನತ ಜೀನೋಮ್ ವಿಜ್ಞಾನಿಗಳು 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಶಿಫಾರಸು ಮಾಡಿದ್ದಾರೆ. ಭಾರತೀಯ SARS-CoV-2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ (INSACOG) ನ ಸಾಪ್ತಾಹಿಕ ಬುಲೆಟಿನ್‌ನಲ್ಲಿ ಈ ಶಿಫಾರಸು ಮಾಡಲಾಗಿದೆ. ವಾಸ್ತವವಾಗಿ, INSACOG ಎಂಬುದು ಕರೋನಾದ ಜೀನೋಮ್ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರದಿಂದ ರಚಿಸಲ್ಪಟ್ಟ ರಾಷ್ಟ್ರೀಯ ಪರೀಕ್ಷಾ ಪ್ರಯೋಗಾಲಯಗಳ ಜಾಲವಾಗಿದೆ.

ಈ ಜನರಿಗೆ ಮೊದಲು ಬೂಸ್ಟರ್ ಡೋಸ್ ನೀಡಬೇಕು
INSACOG ಯ ಸಾಪ್ತಾಹಿಕ ಬುಲೆಟಿನ್, ಲಸಿಕೆಯನ್ನು ಪಡೆಯದ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಮತ್ತು ಮೊದಲು ಅವರಿಗೆ ಲಸಿಕೆ ಹಾಕಬೇಕು ಎಂದು ಹೇಳಿದೆ. ಇದಲ್ಲದೆ, 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನರಿಗೆ ಬೂಸ್ಟರ್ ಡೋಸ್ ನೀಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅದು ಹೇಳಿದೆ.

ಗಮನಾರ್ಹವಾಗಿ, ದೇಶದಲ್ಲಿ ಕೋವಿಡ್ ಸ್ಥಿತಿ ಹದಗೆಟ್ಟಿರುವ ವಿಷಯ ಲೋಕಸಭೆಯಲ್ಲಿಯೂ ಕೂಡ ಚರ್ಚೆಗೆ ಗ್ರಾಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನಿಗಳ ಬೂಸ್ಟರ್ ಡೋಸ್ ನೀಡುವ ಕುರಿತಾದ ಶಿಫಾರಸು ಭಾರಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ-Karnataka ಬಳಿಕ ದೆಹಲಿ ತಲುಪಿದ Omicron? ಆಸ್ಪತ್ರೆಗೆ 12 ಶಂಕಿತರು ದಾಖಲು

ಮೇಲ್ವಿಚಾರಣೆ ಅತ್ಯಗತ್ಯ
ಯಾತ್ರೆಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು INSACOG ಸಲಹೆ ನೀಡಿದೆ, ಓಮಿಕ್ರಾನ್ (ಆಫ್ರಿಕನ್ ದೇಶಗಳು) ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಕರೋನವೈರಸ್ (Covid - 19) ಪ್ರಕರಣಗಳ ಕಾಂಟಾಕ್ಟ್ ಟ್ರೆಸಿಂಗ್ ಕೂಡ ಇರಬೇಕು ಇದರಿಂದ ಪೀಡಿತ ಪ್ರದೇಶಗಳಲ್ಲಿ ಅದರ ಸೋಂಕನ್ನು ಪತ್ತೆಹಚ್ಚಬಹುದು ಮತ್ತು ಪರೀಕ್ಷೆಯನ್ನು ಮಾಡಬೇಕು. ಟೆಸ್ಟಿಂಗ್ ಸಂಖ್ಯೆಗಳನ್ನು ಹೆಚ್ಚಿಸುವ ಮೂಲಕ ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ-Venus Transit 2021: ಆರು ದಿನಗಳ ಬಳಿಕ ಈ ರಾಶಿಯ ಜನರ ಪಾಲಿಗೆ 'ಅಚ್ಛೆ ದಿನ್' ಆರಂಭಗೊಳ್ಳಲಿವೆ

ಭಾರತದಲ್ಲಿ ಓಮಿಕ್ರಾನ್‌ನ 2 ಪ್ರಕರಣಗಳು
ಭಾರತದಲ್ಲಿ ಕರ್ನಾಟಕದಲ್ಲಿ ಇದುವರೆಗೆ 2 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಇಬ್ಬರಲ್ಲೂ. ಸಣ್ಣಪುಟ್ಟ ಲಕ್ಷಣಗಳಿವೆ. ಇದುವರೆಗೆ ವಿಶ್ವಾದ್ಯಂತ  ಈ ರೂಪಾಂತರದ ಪ್ರಕರಣಗಳಲ್ಲಿ ಯಾವುದೇ ಗಂಭೀರ ಲಕ್ಷಣಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಾಸ್ಕ್ ಧರಿಸುವುದು ಸಾರ್ವತ್ರಿಕ ಲಸಿಕೆಯಂತೆ. ಇದು ಎಲ್ಲಾ ರೂಪಾಂತರಗಳನ್ನು ನಿರ್ಬಂಧಿಸುತ್ತದೆ.

ಇದನ್ನೂ ಓದಿ-ಭಾರತ ಬಿಟ್ಟು ಪಲಾಯನಗೈದ ದೇಶದ ಮೊದಲ ಓಮಿಕ್ರಾನ್ ರೋಗಿ! ಈ ರೀತಿ ಆಡಳಿತದ ಕಣ್ಣು ತಪ್ಪಿಸಿದ್ದಾನಂತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News