Bomb Blast: ಭಾರಿ ಆತ್ಮಾಹುತಿ ದಾಳಿಗೆ ನಲುಗಿದ ಕಾಬೂಲ್ ಶಾಲೆ, ಕನಿಷ್ಠ 100 ವಿದ್ಯಾರ್ಥಿಗಳ ಸಾವು

Afghanistan Bomb Blast: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಒಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ ಕುರಿತು ವರದಿಯಾಗಿದೆ. ಸ್ಥಳೀಯ ಪತ್ರಕರ್ತರ ಪ್ರಕಾರ ಈ ಘಟನೆ ಮಾನವೀಯ ಸಂವೇದನೆಗಳನ್ನೇ ಕಲುಕಿದೆ ಎನ್ನಲಾಗಿದೆ.  

Written by - Nitin Tabib | Last Updated : Sep 30, 2022, 06:27 PM IST
  • ಸ್ಥಳೀಯ ಪತ್ರಕರ್ತರ ಪ್ರಕಾರ, ಘಟನೆಯಲ್ಲಿ ಸಾವಿಗೀಡಾದ ಬಹುತೇಕ ವಿದ್ಯಾರ್ಥಿಗಳು
  • ಹಜಾರಾ ಮತ್ತು ಶಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.
  • ಹಜಾರಾ ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಜನಾಂಗೀಯ ಗುಂಪಾಗಿದೆ.
Bomb Blast: ಭಾರಿ ಆತ್ಮಾಹುತಿ ದಾಳಿಗೆ ನಲುಗಿದ ಕಾಬೂಲ್ ಶಾಲೆ, ಕನಿಷ್ಠ 100 ವಿದ್ಯಾರ್ಥಿಗಳ ಸಾವು title=
Afghanistan Suicide Blast (Photo Courtesy - Twitter)

Afghanistan Suicide Bomb Blast: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಳ್ವಿಕೆಯ ನಂತರ ಬಾಂಬ್ ದಾಳಿಯ ಘಟನೆಗಳು ನಿಲ್ಲುವ ಮಾತೆ ಎತ್ತುತ್ತಿಲ್ಲ. ಹೊಸ ವರದಿಯೊಂದರ ಪ್ರಕಾರ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಶಾಲೆಯೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವರದಿಗಾರಿಕೆಯ ಸಂದರ್ಭದಲ್ಲಿ ಈ ಘಟನೆ ಮಾನವ ಸಂವೇದನೆಗಳನ್ನೇ ಕಲುಕಿದೆ ಎಂದು ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ. ಶಾಲೆಯ ಸುತ್ತಮುತ್ತ ಮೃತದೇಹಗಳನ್ನು ಗುರುತಿಸುವುದೂ ಕಷ್ಟವಾಗುತ್ತಿದೆ. ಮೃತದೇಹಗಳ ಕೈ-ಕಾಳುಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ ಎಂದು ಸ್ಥಳೀಯ ಪತ್ರಕರ್ತರು. 

ಆಂಗ್ಲ ಮಾಧ್ಯಮವೊಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ, ನಗರದ ಪಶ್ಚಿಮ ಭಾಗದಲ್ಲಿರುವ ದಷ್ಟ್-ಎ-ಬರ್ಚಿ ಪ್ರದೇಶದ ಕಾಜ್ ಶಾಲೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಅವರು ಈ ದಾಳಿಯ ಕುರಿತು ಟ್ವೀಟ್ ಮಾಡಿದ್ದಾರೆ, "ನಾವು ಇಲ್ಲಿಯವರೆಗೆ ನಮ್ಮ ವಿದ್ಯಾರ್ಥಿಗಳ 100 ಶವಗಳನ್ನು ಎಣಿಕೆ ಮಾಡಿದ್ದೇವೆ. ಹತ್ಯೆಗೀದಾದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ. ತರಗತಿಯು ವಿದ್ಯಾರ್ಥಿಗಳಿಂದ ತುಂಬಿತ್ತು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದರು"  ಎಂದಿದ್ದಾರೆ.

ಇದನ್ನೂ ಓದಿ-Afghanistan: ಕಾಬೂಲ್‌ನಲ್ಲಿ ಭಾರೀ ಸ್ಫೋಟ, 32 ಮಂದಿ ಮೃತ, 40 ಮಂದಿಗೆ ಗಾಯ

ಸ್ಥಳೀಯ ಪತ್ರಕರ್ತರ ಪ್ರಕಾರ, ಘಟನೆಯಲ್ಲಿ ಸಾವಿಗೀಡಾದ ಬಹುತೇಕ ವಿದ್ಯಾರ್ಥಿಗಳು ಹಜಾರಾ ಮತ್ತು ಶಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಹಜಾರಾ ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಜನಾಂಗೀಯ ಗುಂಪಾಗಿದೆ.

ಇದನ್ನೂ ಓದಿ-ನಾಳೆ ನಾಲ್ಕು ಉಕ್ರೇನ್ ಪ್ರದೇಶಗಳನ್ನು ಔಪಚಾರಿಕವಾಗಿ ವಶಪಡಿಸಿಕೊಳ್ಳಲಿದೆ ರಷ್ಯಾ

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೈ-ಕಾಲುಗಳು
ಕಾಜ್ ಉನ್ನತ ಶಿಕ್ಷಣ ಸಂಸ್ಥೆಯ ಶಿಕ್ಷಕರೊಬ್ಬರು ಮಕ್ಕಳ ಕೈಕಾಲುಗಳನ್ನು ಆಯ್ದ ಭಯಾನಕತೆಯನ್ನು ವರದಿಯ ಮಾಡಿದ ಪತ್ರಕರ್ತರು ನೆನಪಿಸಿಕೊಳ್ಳುತ್ತಾರೆ. ಎಲ್ಲೋ ಕೈಗಳಿದ್ದವು, ಎಲ್ಲೋ ಕಾಲುಗಳು ಬಿದ್ದಿದ್ದವು. ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ ಸ್ಥಳದ ಸ್ಫೋಟದ ಪೂರ್ವ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News