ಹೈದರಾಬಾದ್: ಲಂಡನ್‌ನಲ್ಲಿ ಆಗಸ್ಟ್ 22 ರಿಂದ ನಾಪತ್ತೆಯಾಗಿದ್ದ ತೆಲಂಗಾಣ ಮೂಲದ 23 ವರ್ಷದ ವಿದ್ಯಾರ್ಥಿಯ ಶವ ಬ್ರಿಟನ್‌ನ ಬೀಚ್‌ನಲ್ಲಿ ಪತ್ತೆಯಾಗಿದೆ.
ಮಂಗಳವಾರ ಖಮ್ಮಂ ಜಿಲ್ಲೆಯ ಉಜ್ವಾಲ್ ಶ್ರೀಹರ್ಷ ಅವರ ಕುಟುಂಬಕ್ಕೆ ದೊರಕಿದ ಮಾಹಿತಿಯ ಪ್ರಕಾರ, ಹರ್ಷ ಅವರ ಶವವನ್ನು ಅವರ ತಂದೆ ಉದಯ್ ಪ್ರತಾಪ್ ಗುರುತಿಸಿದ್ದಾರೆ ಎನ್ನಲಾಗಿದೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಉಜ್ವಾಲ್ ಆಗಸ್ಟ್ 22 ರಂದು ನಾಪತ್ತೆಯಾಗಿದ್ದರು. ಸಸೆಕ್ಸ್‌ನ ಈಸ್ಟ್‌ಬೋರ್ನ್‌ನ ಬೀಚಿ ಹೆಡ್‌ನಲ್ಲಿ ಬಂಡೆಗಳ ಮೇಲೆ ಅವರ ಬ್ಯಾಗ್ ಪತ್ತೆಯಾಗಿತ್ತು. ಅದರ ಆಧಾರದ ಮೇಲೆ ಪೊಲೀಸರು ಶ್ರೀಹರ್ಷ ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ನಂಬಲು ಕುಟುಂಬಸ್ಥರು ಸಿದ್ಧರಿರಲಿಲ್ಲ ಎನ್ನಲಾಗಿದೆ.
ಆಗಸ್ಟ್ 21ರಂದು ಉಜ್ವಾಲ್ ತಮ್ಮ ತಾಯಿಯೊಂದಿಗೆ ಮಾತನಾಡಿದ್ದರು. ಆದರೆ ಮರುದಿನವೇ ನಾಪತ್ತೆಯಾದ ಮಾಹಿತಿ ದೊರೆತಿತ್ತು ಎಂದು ಬಿಜೆಪಿಯ ಖಮ್ಮಂ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಉದಯ್ ಪ್ರತಾಪ್ ಹೇಳಿದ್ದಾರೆ.
ಹೈದರಾಬಾದ್‌ನ ಬಿಟ್ಸ್ ಪಿಲಾನಿಯಿಂದ ಪದವಿ ಪಡೆದ ಉಜ್ವಾಲ್ ಕಳೆದ ವರ್ಷ ಲಂಡನ್‌ಗೆ ತೆರಳಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಎಂಎಸ್ ಪದವಿ ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ.