Black Cobra Rare Photos: ಮರದ ಮೇಲೆ ಒಟ್ಟಿಗೆ ಕಂಡ 3 ನಾಗರ ಹಾವುಗಳು, ಇಲ್ಲಿದೆ ಅಪರೂಪದ ಫೋಟೋ

3 Black cobras Seen Together: ಫೋಟೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದಾರೆ ಮತ್ತು ಇದನ್ನು ಅಪರೂಪ ಎಂದು ಕರೆದಿದ್ದಾರೆ. ಫೋಟೋ ನೋಡಿದ ಅನೇಕರು ಆಶ್ಚರ್ಯ ಮತ್ತು ಶಾಕ್ ಆಗಿದ್ದಾರೆ. ಇಂತಹ ದೃಶ್ಯ ಅಪರೂಪಕ್ಕೆ ಕಾಣಸಿಗುವುದರಿಂದ ಜನ ಅಚ್ಚರಿ ಪಡುವುದು ಸಹಜ.

Written by - Yashaswini V | Last Updated : Nov 18, 2021, 09:06 AM IST
  • ಮೂರು ನಾಗರ ಹಾವುಗಳು ಮರದಲ್ಲಿ ಒಟ್ಟಿಗೆ ಸುತ್ತಿ ಬಿದ್ದಿರುವುದು ಕಂಡುಬಂದಿದೆ
  • ಐಎಫ್ಎಸ್ ಅಧಿಕಾರಿ ಇದನ್ನು ಅಪರೂಪದ ಕ್ಷಣ ಎಂದು ಬಣ್ಣಿಸಿದ್ದಾರೆ
  • ಫೋಟೋ ನೋಡಿದ ಜನರು ಬೆಚ್ಚಿಬಿದ್ದರು
Black Cobra Rare Photos: ಮರದ ಮೇಲೆ ಒಟ್ಟಿಗೆ ಕಂಡ 3 ನಾಗರ ಹಾವುಗಳು, ಇಲ್ಲಿದೆ ಅಪರೂಪದ ಫೋಟೋ title=
Black Cobra Photos

3 Black cobras Seen Together: ಇಂತಹ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿದ್ದು, ಜನರು ಇದನ್ನು ನೋಡಿ ಅಚ್ಚರಿಪಡುತ್ತಿದ್ದಾರೆ. ಅಂತಹ ಒಂದು ಕುತೂಹಲಕಾರಿ ಚಿತ್ರ ಇದೀಗ ಮತ್ತೆ ವೈರಲ್ ಆಗುತ್ತಿದೆ, ಇದರಲ್ಲಿ ಮೂರು ಕಪ್ಪು ನಾಗರಹಾವುಗಳು ಮರದ ಮೇಲೆ ಒಟ್ಟಿಗೆ ಸುತ್ತಿಕೊಂಡಿವೆ. ಫೋಟೋದಲ್ಲಿ ಮಹಾರಾಷ್ಟ್ರದ ಮೆಲ್ಘಾಟ್ ಕಾಡುಗಳ ಬಗ್ಗೆ ಹೇಳಲಾಗುತ್ತಿದೆ ಮತ್ತು ಮೂರು ನಾಗರಹಾವುಗಳು ಹೆಡೆಬಿಚ್ಚಿ ಮರಕ್ಕೆ ಸುತ್ತಿಕೊಂಡಿರುವುದನ್ನು ಕಾಣಬಹುದು.

ಇದನ್ನು ಅಪರೂಪದ ಕ್ಷಣ ಎಂದು ಬಣ್ಣಿಸಿದ ಐಎಫ್ಎಸ್ ಅಧಿಕಾರಿ:
ಈ ಫೋಟೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದು ಇದನ್ನು ಅಪರೂಪದ ಕ್ಷಣ ಎಂದು ಬಣ್ಣಿಸಿದ್ದಾರೆ. ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, 'ಆಶೀರ್ವಾದಗಳು... ಒಂದೇ ಸಮಯದಲ್ಲಿ ಮೂರು ಹಾವುಗಳು (Three Cobra) ನಿಮಗೆ ಆಶೀರ್ವಾದ ಮಾಡಿದಾಗ' ಎಂದು ಬರೆದುಕೊಂಡಿದ್ದಾರೆ. ವಾಸ್ತವವಾಗಿ, ಮೂರು ನಾಗರ ಹಾವುಗಳ ಫೋಟೋಗಳನ್ನು ರಾಜೇಂದ್ರ ಸೆಮಾಲ್ಕರ್ ಎಂಬ ಬಳಕೆದಾರರು ನವೆಂಬರ್ 16 ರಂದು 'ಇಂಡಿಯನ್ ವೈಲ್ಡ್‌ಲೈಫ್' ಎಂಬ ಫೇಸ್‌ಬುಕ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. 'ಮಾಂತ್ರಿಕ ಮೆಲ್ಘಾಟ್, ಹರಿಸಲ್ ಕಾಡಿನಲ್ಲಿ ಕಾಣಿಸಿಕೊಂಡ 3 ನಾಗರಹಾವುಗಳು!!' ಎಂಬ ಶೀರ್ಷಿಕೆಯಲ್ಲಿ ಅವರು ಇದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ- Viral Video: ಸಿಂಹದ ವೇಷದಲ್ಲಿ ಇದ್ದಕ್ಕಿದ್ದಂತೆ ಉದ್ಯಾನವನಕ್ಕೆ ಪ್ರವೇಶಿಸಿದ ನಾಯಿ, ಮುಂದೆ...

ಫೋಟೋ ನೋಡಿ ಬೆಚ್ಚಿಬಿದ್ದ ಜನ:
ಫೋಟೋ ನೋಡಿದ ಅನೇಕರು ಆಶ್ಚರ್ಯ ಮತ್ತು ಶಾಕ್ ಆಗಿದ್ದಾರೆ. ಇಂತಹ ದೃಶ್ಯ ಅಪರೂಪಕ್ಕೆ ಕಾಣಸಿಗುವುದರಿಂದ ಜನ ಅಚ್ಚರಿ ಪಡುವುದು ಸಹಜ. ಶೈಲೇಶ್ ವರ್ಮಾ ಎಂಬ ಟ್ವಿಟರ್ (Twitter) ಬಳಕೆದಾರರು ಫೋಟೋಗೆ ಕಾಮೆಂಟ್ ಮಾಡಿದ್ದಾರೆ, 'ಫೋಟೋ ನೋಡಲು ಚೆನ್ನಾಗಿದೆ, ಆದರೆ ನನ್ನನ್ನು ನಂಬಿರಿ ಸರ್, ನಾನು ಅದನ್ನು ಮುಂದೆ ನೋಡಿದಾಗ ನನ್ನ ಆತ್ಮವು ನಡುಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ- Rohit Sharma Video: ಡಗೌಟ್‌ನಲ್ಲಿ ಸಿರಾಜ್ ಜೊತೆ ರೋಹಿತ್ ದೃಶ್ಯ; ವಿಡಿಯೋ ವೈರಲ್

'ಸರ್... ತುಂಬಾ ಭಯಾನಕವಾಗಿದೆ. ನನ್ನ ಕೂದಲು ಎದ್ದು ನಿಂತಿತು. ಆ ವ್ಯಕ್ತಿ ಚಿತ್ರ ತೆಗೆದದ್ದು ಹೇಗೆ?' ಉತ್ಕರ್ಷ್ ಸಿಂಗ್ ಬಘೇಲ್ ಎಂಬ ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, ಅವಿನಾಶ್ ಬಸವರಾಜ್ ಎಂಬ ಬಳಕೆದಾರರು  'ಅವು ನಿಜವೇ? ಇದು ನಿಜಕ್ಕೂ ಭಯಾನಕವಾಗಿದೆ' ಎಂದು ಬರೆದಿದ್ದಾರೆ.

ಮೆಲ್ಘಾಟ್ ಕಾಡುಗಳಲ್ಲಿ ಅನೇಕ ಜಾತಿಯ ವನ್ಯಜೀವಿಗಳು ಕಂಡುಬರುತ್ತವೆ:
ಮೇಲ್ಘಾಟ್‌ನ ಕಾಡುಗಳಲ್ಲಿ ಅನೇಕ ರೀತಿಯ ವನ್ಯಜೀವಿ ಪ್ರಭೇದಗಳು ಕಂಡುಬರುತ್ತವೆ ಮತ್ತು ಇದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಬರುತ್ತದೆ. ಮೆಲ್ಘಾಟ್ ಎಂದರೆ - ಘಟ್ಟಗಳ ಸಭೆ ಮತ್ತು ಇಲ್ಲಿ ಅನೇಕ ಬೆಟ್ಟಗಳಿವೆ. ಮೆಲ್ಘಾಟ್ ಪ್ರದೇಶವನ್ನು 1974 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News