ADR Report: ಶ್ರೀಮಂತ ಪಕ್ಷವಾಗುತ್ತಿರುವ ಬಿಜೆಪಿ; ಯಾವ ಪಕ್ಷಕ್ಕೆ ಎಷ್ಟು ಆಸ್ತಿ ಇದೆ ಗೊತ್ತಾ?

ರಾಜಕೀಯ ಪಕ್ಷಗಳ ಆಸ್ತಿಗಳ ಕುರಿತು ಎಡಿಆರ್ ವರದಿ ಬಹಿರಂಗವಾಗಿದೆ. ದೇಶದ 7 ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿವೆ.

Written by - Puttaraj K Alur | Last Updated : Jan 29, 2022, 10:23 AM IST
  • ಬಿಜೆಪಿ ಒಟ್ಟು 4847.78 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದೆ
  • 2ನೇ ಸ್ಥಾನದಲ್ಲಿರುವ ಬಿಎಸ್‌ಪಿ 698.33 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ
  • 3ನೇ ಸ್ಥಾನದಲ್ಲಿರುವ ಕಾಂಗ್ರೆಸ್ 588.16 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದೆ
ADR Report: ಶ್ರೀಮಂತ ಪಕ್ಷವಾಗುತ್ತಿರುವ ಬಿಜೆಪಿ; ಯಾವ ಪಕ್ಷಕ್ಕೆ ಎಷ್ಟು ಆಸ್ತಿ ಇದೆ ಗೊತ್ತಾ?  title=
ಬಿಜೆಪಿ 4847.78 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದೆ

ನವದೆಹಲಿ: 2019-20ರ ಹಣಕಾಸು ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳ ಆಸ್ತಿ ಮತ್ತು ಸಾಲದ ವಿವರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(The Association for Democratic Reforms) ಬಹಿರಂಗಪಡಿಸಿದೆ. ಈ ಪೈಕಿ ಬಿಜೆಪಿ ಬರೋಬ್ಬರಿ 4,847.78 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದು, ಇದು ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಅತ್ಯಧಿಕ ಮೌಲ್ಯವಾಗಿದೆ. ನಂತರದ ಸ್ಥಾನ ಅಂದರೆ 2ನೇ ಸ್ಥಾನದಲ್ಲಿ ಬಿಎಸ್‌ಪಿ ಇದ್ದು, 698.33 ಕೋಟಿ ರೂ. ಮತ್ತು 3ನೇ ಸ್ಥಾನದಲ್ಲಿರುವ ಕಾಂಗ್ರೆಸ್ 588.16 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿವೆ.

7 ರಾಷ್ಟ್ರೀಯ ಪಕ್ಷಗಳಿಂದ ಆಸ್ತಿ ಘೋಷಣೆ!

2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ವಿಶ್ಲೇಷಣೆಯ ಆಧಾರದ ಮೇಲೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR Report)ತನ್ನ ಈ ವರದಿಯನ್ನು ಸಿದ್ಧಪಡಿಸಿದೆ. ವಿಶ್ಲೇಷಣೆಯ ಪ್ರಕಾರ ಈ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿಯ ಮೌಲ್ಯವು 6,988.57 ಕೋಟಿ ರೂ. ಮತ್ತು 44 ಪ್ರಾದೇಶಿಕ ಪಕ್ಷಗಳ ಆಸ್ತಿ ಮೌಲ್ಯ 2,129.38 ಕೋಟಿ ರೂ. ಆಗಿದೆ. 

ಇದನ್ನೂ ಓದಿ: Impact Feature: 3,399 ರೂ.ಗೆ ಸ್ಮಾರ್ಟ್‌ಫೋನ್ ಆಫರ್‌, ಖರೀದಿಸಿ ಮತ್ತು ಬಹುಮಾನ ಗೆಲ್ಲಿರಿ!

ಬಿಜೆಪಿ ಮಾತ್ರ ಶೇ.69ಕ್ಕೂ ಹೆಚ್ಚು ಆಸ್ತಿ ಹೊಂದಿದೆ

7 ರಾಷ್ಟ್ರೀಯ ಪಕ್ಷಗಳ(National Party)ಪೈಕಿ ಬಿಜೆಪಿ 4847.78 ಕೋಟಿ ರೂ. ಅಥವಾ ಶೇ.69.37ರಷ್ಟು(Richest Party), ಬಿಎಸ್‌ಪಿ(BSP) 698.33 ಕೋಟಿ ರೂ. ಅಥವಾ ಶೇ.9.99ರಷ್ಟು ಮತ್ತು ಕಾಂಗ್ರೆಸ್ 588.16 ಕೋಟಿ ರೂ. ಅಥವಾ ಶೇ.8.42ರಷ್ಟು ಆಸ್ತಿ ಹೊಂದಿದೆ ಎಂದು ಎಡಿಆರ್ ವರದಿ ಹೇಳಿದೆ.

ಎಡಿಆರ್ ವರದಿಯಲ್ಲಿ ಇದು ಬಹಿರಂಗವಾಗಿದೆ

ಎಡಿಆರ್ ಪ್ರಕಾರ 44 ಪ್ರಾದೇಶಿಕ ಪಕ್ಷ(Regional Party)ಗಳಲ್ಲಿ ಅಗ್ರ 10 ಪಕ್ಷಗಳ ಆಸ್ತಿ 2028.715 ಕೋಟಿ ರೂ. ಅಥವಾ ಅವರೆಲ್ಲರೂ ಘೋಷಿಸಿದ ಒಟ್ಟು ಮೊತ್ತದ ಶೇ.95.27ರಷ್ಟಾಗಿದೆ. 2019-20ರ ಹಣಕಾಸು ವರ್ಷದಲ್ಲಿ ಸಮಾಜವಾದಿ ಪಕ್ಷವು ಪ್ರಾದೇಶಿಕ ಪಕ್ಷಗಳಲ್ಲಿ ಗರಿಷ್ಠ ಆಸ್ತಿ 563.47 ಕೋಟಿ ರೂ. ಅಥವಾ ಶೇ.26.46ರಷ್ಟು ಎಂದು ಘೋಷಿಸಿತು. ಇದಾದ ನಂತರ ಟಿಆರ್‌ಎಸ್ 301.47 ಕೋಟಿ ರೂ. ಹಾಗೂ ಎಐಎಡಿಎಂಕೆ 267.61 ಕೋಟಿ ರೂ. ಆಸ್ತಿ ಘೋಷಿಸಿದೆ.

2019-20ರ ಹಣಕಾಸು ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳು ಘೋಷಿಸಿದ ಆಸ್ತಿಯಲ್ಲಿ ಸ್ಥಿರ ಠೇವಣಿ/ಎಫ್‌ಡಿಆರ್‌ಗಳ ಪಾಲು ಗರಿಷ್ಠ 1,639.51 ಕೋಟಿ ರೂ. ಅಥವಾ ಶೇ.76.99 ರಷ್ಟಾಗಿದೆ. ಹಣಕಾಸು ವರ್ಷಕ್ಕೆ ಎಫ್‌ಡಿಆರ್/ನಿಶ್ಚಿತ ಠೇವಣಿ ವರ್ಗದಡಿ ಬಿಜೆಪಿ 3,253 ಕೋಟಿ ರೂ. ಮತ್ತು ಬಿಎಸ್‌ಪಿ 618.86 ಕೋಟಿ ರೂ.ಗಳೊಂದಿಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲಿ ಮೊದಲ ಮತ್ತು 2ನೇ ಸ್ಥಾನದಲ್ಲಿವೆ. ಆದರೆ ಈ ವರ್ಗದಲ್ಲಿ ಕಾಂಗ್ರೆಸ್ 240.90 ಕೋಟಿ ರೂ. ಘೋಷಿಸಿದೆ.

ಇದನ್ನೂ ಓದಿ: Gold price Today : ಮಹಿಳೆಯರೆ ಗಮನಿಸಿ : ಇಂದು ಚಿನ್ನ - ಬೆಳ್ಳಿ ಖರೀದಿಸಲು ಉತ್ತಮ ಅವಕಾಶ!

ಪ್ರಾದೇಶಿಕ ಪಕ್ಷಗಳ ಪೈಕಿ ರಾಜಕೀಯ ಪಕ್ಷಗಳಾದ ಎಸ್‌ಪಿ (434.219 ಕೋಟಿ ರೂ.), ಟಿಆರ್‌ಎಸ್ (256.01 ಕೋಟಿ ರೂ.), ಎಐಎಡಿಎಂಕೆ (246.90 ಕೋಟಿ ರೂ.), ಡಿಎಂಕೆ (162.425 ಕೋಟಿ ರೂ.), ಶಿವಸೇನೆ(Shivasena) (148.46 ಕೋಟಿ ರೂ.), ಬಿಜೆಡಿ (118.425 ಕೋಟಿ ರೂ.) FDR/ನಿಶ್ಚಿತ ಠೇವಣಿಗಳ ಅಡಿಯಲ್ಲಿ ಹೆಚ್ಚಿನ ಆಸ್ತಿಗಳನ್ನು ಘೋಷಿಸಿವೆ. 2019-20ರ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಸಾಲದ ಮೊತ್ತವು 134.93 ಕೋಟಿ ರೂ. ಆಗಿದೆ. ಈ ಪೈಕಿ ಕೇವಲ ಪ್ರಾದೇಶಿಕ ರಾಜಕೀಯ ಪಕ್ಷಗಳು ಸಾಲವೇ 60.66 ಕೋಟಿ ರೂ.ಗಳಿಷ್ಟಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News