48 ಗಂಟೆಗಳಲ್ಲಿ ಬದಲಾಗಲಿದೆ ಬಿಹಾರದ ರಾಜಕೀಯ ಚಿತ್ರಣ ! ಮುರಿದು ಬೀಳುವುದೇ ಬಿಜೆಪಿ-ಜೆಡಿಯು ಮೈತ್ರಿ ?

ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಪಾಟ್ನಾಗೆ ತೆರಳಿದ್ದಾರೆ. ಸೋಮವಾರ ಸಂಜೆಯೊಳಗೆ ಪಾಟ್ನಾಕ್ಕೆ ಬರುವಂತೆ ಜೆಡಿಯು ತನ್ನ ಎಲ್ಲ ಸಂಸದರನ್ನು ಕೇಳಿಕೊಂಡಿದೆ.  ಇನ್ನು ಕಾಂಗ್ರೆಸ್ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ.

Written by - Ranjitha R K | Last Updated : Aug 8, 2022, 11:52 AM IST
  • ಮುರಿದು ಬೀಳುವುದೇ ಬಿಜೆಪಿ-ಜೆಡಿಯು ಮೈತ್ರಿ ?
  • ಬದಲಾಗುತ್ತಿದೆ ಬಿಹಾರ ರಾಜಕೀಯ ಚಿತ್ರಣ
  • ಬಿಜೆಪಿ-ಜೆಡಿಯು ಮಧ್ಯೆ ಏನದು ತಕರಾರು
48 ಗಂಟೆಗಳಲ್ಲಿ ಬದಲಾಗಲಿದೆ ಬಿಹಾರದ ರಾಜಕೀಯ ಚಿತ್ರಣ ! ಮುರಿದು ಬೀಳುವುದೇ  ಬಿಜೆಪಿ-ಜೆಡಿಯು ಮೈತ್ರಿ ? title=
Bihar politrical development (file photo)

ಬಿಹಾರ : ಬಿಹಾರದ ರಾಜಕೀಯಕ್ಕೆ ಮುಂದಿನ 48 ಗಂಟೆಗಳು ಬಹಳ ಮುಖ್ಯ ಎಂದೇ ಹೇಳಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಮಹಾಮೈತ್ರಿಕೂಟದ ಜೊತೆ ಸೇರಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.  ರಾಜ್ಯದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬೀಳಬಹುದು ಎಂದೆ ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ದೊಡ್ಡ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದಿವೆ. 

ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಪಾಟ್ನಾಗೆ ತೆರಳಿದ್ದಾರೆ. ಸೋಮವಾರ ಸಂಜೆಯೊಳಗೆ ಪಾಟ್ನಾಕ್ಕೆ ಬರುವಂತೆ ಜೆಡಿಯು ತನ್ನ ಎಲ್ಲ ಸಂಸದರನ್ನು ಕೇಳಿಕೊಂಡಿದೆ.  ಇನ್ನು ಕಾಂಗ್ರೆಸ್ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಆರ್‌ಜೆಡಿ ತನ್ನ ಎಲ್ಲಾ ಶಾಸಕರನ್ನು ಮುಂದಿನ 3-4 ದಿನಗಳ ಕಾಲ ಪಾಟ್ನಾದಲ್ಲಿಯೇ ಇರುವಂತೆ ಆದೇಶಿಸಿದೆ.

ಇದನ್ನೂ ಓದಿ : ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ: ವಿದ್ಯುತ್‍ ಇಲಾಖೆಯಲ್ಲಿದೆ 86 ಸಾವಿರ ರೂ. ವೇತನದ ಜಾಬ್!

ಜೆಡಿಯು 2017 ರಲ್ಲಿ ಮಹಾಮೈತ್ರಿಕೂಟದಿಂದ  ಹೊರ ಬಂದಿತ್ತು : 
ಮಂಗಳವಾರ ಸಂಜೆ 6 ಗಂಟೆಗೆ, ಆರ್‌ಜೆಡಿ 10 ಸರ್ಕ್ಯುಲರ್ ರಸ್ತೆಯಲ್ಲಿ ಅಂದರೆ ರಾಬ್ರಿ ದೇವಿ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಬಿಹಾರದ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. 2017 ರಲ್ಲಿ ಜೆಡಿಯು ಮಹಾಮೈತ್ರಿಕೂಟದಿಂದ ಬೇರ್ಪಟ್ಟ ನಂತರ ಎನ್‌ಡಿಎ ಪಡೆ ಸೇರಿತ್ತು. 

ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸೇರದಿರಲು ನಿರ್ಧರಿಸಿರುವುದಾಗಿ ಜೆಡಿಯು ಹೇಳಿಕೆ ನೀಡಿತ್ತು. ವಾಸ್ತವವಾಗಿ, ಜೆಡಿಯು ಎರಡು ಸಚಿವ ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ ಅದನ್ನು ಬಿಜೆಪಿ ತಿರಸ್ಕರಿಸಿತ್ತು. ಈ ನಿರ್ಧಾರವು ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದೂ ಕೂಡಾ ಹೇಳಲಾಗಿತ್ತು. 

ಬಿಜೆಪಿ-ಜೆಡಿಯು ಮಧ್ಯೆ ತಕರಾರು : 
ನರೇಂದ್ರ ಮೋದಿ ಸಂಪುಟಕ್ಕೆ  ಸೇರುವುದಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಹಾಗೂ ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ. ಜೆಡಿಯು ಬಿಜೆಪಿಯಿಂದ ಗೌರವವನ್ನು ನಿರೀಕ್ಷಿಸಿತ್ತು ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರಡ ಜೊತೆ ಸೇರದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಆದರೆ, ಈ ನಿರ್ಧಾರವು ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಕೂಡಾ ಹೇಳಿದ್ದರು. 

ಇದನ್ನೂ ಓದಿ : JEE Main Cut Off 2022 ಬಿಡುಗಡೆ‌, ಇಂದಿನಿಂದ IIT JEE Advance ನೋಂದಣಿ ಆರಂಭ

ಆದರೆ ಚೌಧರಿ ಅವರ ಈ ಹೇಳಿಕೆಯು ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಸಂಬಂದದಲ್ಲಿ ಬಿರುಕು ಮೂಡಿರುವ ಸಂಕೇತವಾಗಿರಬಹುದು ಎನ್ನಲಾಗಿದೆ. ಅಲ್ಲದೆ,  ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಇದೇ ಕಾರಣವಿರಬಹುದು ಎಂದು ಕೂಡಾ ಹೇಳಲಾಗುತ್ತಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ NITI ಆಯೋಗದ ಸಭೆಯಲ್ಲಿ ಕೂಡಾ ಅವರು ಭಾಗವಹಿಸಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News