7th Pay Commission Latest Update: DA ಹೆಚ್ಚಳ, DR ಪ್ರಯೋಜನಗಳ ಕುರಿತು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!

ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ಡಿಎ ಯ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. 

Last Updated : Apr 10, 2021, 02:21 PM IST
  • ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ
  • ಕಳೆದ ತಿಂಗಳು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪೂರ್ಣ ಡಿಎ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದಾಗ ಹೇಳಿತ್ತು.
  • ಸಧ್ಯ ಡಿಎಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
7th Pay Commission Latest Update: DA ಹೆಚ್ಚಳ, DR ಪ್ರಯೋಜನಗಳ ಕುರಿತು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! title=

ನವದೆಹಲಿ: ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪೂರ್ಣ ಡಿಎ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದಾಗ ಹೇಳಿತ್ತು. ಸಧ್ಯ ಡಿಎಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಇದನ್ನು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ನೀಡಿರುವುದಾಗಿ ಹಣಕಾಸು ಸಚಿವ ಅನುರಾಗ್ ಠಾಕೂರ್ ಸ್ಪಷ್ಟ ಪಡಿಸಿದ್ದಾರೆ. ಸಚಿವರ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ಡಿಎ ಯ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. 

1. ಕೇಂದ್ರ ಸರ್ಕಾರಿ ನೌಕರರು ಡಿಎ ಪೂರ್ಣ ಸೌಲಭ್ಯ: ಕೇಂದ್ರ ಸರ್ಕಾರಿ ನೌಕರರಿಗೆ(Central Government Employees) ಬಾಕಿ ಉಳಿದಿರುವ ಮೂರು ಡಿಎ ಕಂತುಗಳನ್ನು "ಜುಲೈ 1, 2021 ರಿಂದ ಜಾರಿಗೆ ಬರುವ ಡಿಎಯ ಸಂಚಿತ ಪರಿಷ್ಕೃತ ದರಗಳಲ್ಲಿ ಸೇರಿಸಲಾಗುವುದು" ಎಂದು ಠಾಕೂರ್ ಹೇಳಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಪೂರ್ಣ ಡಿಎ ಸೌಲಭ್ಯಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ. ಬಾಕಿ ಉಳಿದಿರುವ ಮೂರು ಕಂತುಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭಾರತ ಸರ್ಕಾರದಿಂದ ನಿಜವಾಗಿಯೂ ಸಿಗುತ್ತಿದೆಯೇ 3 ತಿಂಗಳ FREE Internet? ಇಲ್ಲಿದೆ ಸತ್ಯಾಸತ್ಯತೆ

01-07-2021 ರಿಂದ ಬರಲಿರುವ ಭತ್ಯೆಯನ್ನು ಬಿಡುಗಡೆ ಮಾಡುವ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿದೆ. 01.01.2020 , 01.07.2020  ಮತ್ತು  01.01. 2021 ರಿಂದ ನಿರೀಕ್ಷಿತ ರೀತಿಯಲ್ಲಿ ಬಿಡುಗಡೆ ಮಾಡಲುತ್ತದೆ ಮತ್ತು 01.07.2021 ರಿಂದ ಜಾರಿಗೆ ಬರುವ ಸಂಚಿತ ಪರಿಷ್ಕೃತ ದರಗಳು ಅನ್ವಯವಾಗಲಿದೆ”ಎಂದು ಠಾಕೂರ್(Anurag Thakur) ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ತಿಳಿಸಿದ್ದಾರೆ. 

ಇದನ್ನೂ ಓದಿ : CBSE Board Exam 2021: ಶಾಲೆಗಳಿಗೆ ಈ ಮಾಹಿತಿ ನೀಡಲು ಇಂದೇ ಕೊನೆಯ ದಿನ, ಇಲ್ದಿದ್ರೆ ನಿಂತ್ಹೋಗುತ್ತೆ Result

2. ಕೇಂದ್ರವು DA, DR ಎಷ್ಟು ಕಂತುಗಳನ್ನು ಸ್ಥಗಿತಗೊಳಿಸಿತ್ತು: ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಕಂತುಗಳ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಸ್ಥಗಿತಗೊಳಿಸಿದೆ. ಕೊರೋನಾ ಕಾರಣದಿಂದ ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರ ಸ್ಥಗಿತಗೊಳಿಸಿದೆ. 

 ಇದನ್ನೂ ಓದಿ : West Bengal Elections 2021: ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಲ್ಲಿ ಮತದಾನ ಆರಂಭ

ಜುಲೈ 2021 ರಿಂದ ಬಾಕಿ ಇರುವ ಡಿಎ(DA) ಅನ್ನು ಮತ್ತೆ ನೀಡಲು ಮುಂದಾಗಿರುವ ಕೇಂದ್ರದ  ಈ ನಿರ್ಧಾರವು ಸುಮಾರು 50 ಲಕ್ಷ ನೌಕರರಿಗೆ ಮತ್ತು 65 ಲಕ್ಷ ಪಿಂಚಣಿದಾರರಿಗೆ ಸ್ವಾಗತಾರ್ಹ ಸುದ್ದಿಯಾಗಿದೆ.

3. ಪಿಂಚಣಿದಾರರು DR ಹೆಚ್ಚಳ: ಡಿಎ ಹೆಚ್ಚಳದಿಂದ ಪಿಂಚಣಿದಾರರ(Pensioners) ಡಿಆರ್ ಕೂಡ ಹೆಚ್ಚಳವಾಗುತ್ತದೆ. ಇದರರ್ಥ ಕೇಂದ್ರ ಸರ್ಕಾರಿ ನೌಕರರು ಡಿಎ ಹೆಚ್ಚಾದರೆ, ಪಿಂಚಣಿದಾರರ ಡಿಆರ್ ಕೂಡ ತನ್ನಿಂದ ತಾನೇ ಹೆಚ್ಚಾಗುತ್ತದೆ.

ಇದನ್ನೂ ಓದಿ : Coronavirus: ಮತ್ತೆ ಸ್ಥಗಿತಗೊಳ್ಳಲಿದೆಯೇ ರೈಲು ಸೇವೆ, ಗಂಭೀರ ಹೇಳಿಕೆ ನೀಡಿದ ರೈಲು ವಿಭಾಗ

4. ಕೋವಿಡ್ ಕಾರಣ DA , DR ತೆಡೆ ಹಿಡಿಯಲಾಗಿತ್ತು:  ಕೊರೊನಾವೈರಸ್(Coronavirus) ಕಾರಣದಿಂದಾಗಿ ಸರ್ಕಾರವು ಡಿಎ ಮತ್ತು ಡಿಆರ್ ಕಂತುಗಳನ್ನು ಸ್ಥಗಿತಗೊಳಿಸಿತ್ತು. ಈ ಸಮಯದಲ್ಲಿ ಸರ್ಕಾರಕ್ಕೆ 37,000 ಕೋಟಿ ರೂ. ಉಳಿತಾಯವಾಗಿದೆ.

"ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಂದ ತಡೆ ಹಿಡದಿದ್ದ ಒಟ್ಟು ಮೂರೂ ಕಂತುಗಳ ಡಿಎ, ಡಿಆರ್ 37,430.08 ಕೋಟಿ ರೂ.ಗಳನ್ನು ಕೋವಿಡ್(COVID-19) ಸಂದರ್ಭದಲ್ಲಿ ಸರ್ಕಾರ ಬಳಸಿಕೊಂಡಿತ್ತು ಎಂದು ಹಣಕಾಸು ಸಚಿವಾಲಯವು ರಾಜ್ಯಸಭೆಯಲ್ಲಿ ಹೇಳಿದೆ.

ಇದನ್ನೂ ಓದಿ : Companies Back To Work Plan: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸ್ಫೋಟ, ಮತ್ತೆ Work From Home Mode ನತ್ತ ಮುಖ ಮಾಡಿದ ಕಂಪನಿಗಳು

5. ಕೇಂದ್ರ ನೌಕರರ ಸಂಬಳ ಹೆಚ್ಚಳ: ಜುಲೈ 1 ರಿಂದ ಡಿಎ ಪ್ರಯೋಜನಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರೆ ಕೇಂದ್ರ ಸರ್ಕಾರಿ ನೌಕರರ ವೇತನ(Salary) ಗಮನಾರ್ಹವಾಗಿ ಹೆಚ್ಚಾಗುತ್ತದೆ. ಡಿಎ ಹೆಚ್ಚಳವು ಡಿಎ, ಎಚ್‌ಆರ್‌ಎ, ಪ್ರಯಾಣ ಭತ್ಯೆ (TA), ಕೇಂದ್ರ ಸರ್ಕಾರಿ ನೌಕರರ ವೈದ್ಯಕೀಯ ಭತ್ಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : 8ನೇ ತರಗತಿ ಪಾಸ್ ಆಯಿತು ಮೂರು ದಿನದ ಹಸುಗೂಸು ..!

6. ಪಿಎಫ್ ಹೆಚ್ಚಳ: ಡಿಎ ಬಿಡುಗಡೆಯಿಂದ ಕೇಂದ್ರ ಸರ್ಕಾರಿ ನೌಕರರ ಪಿಎಫ್(PF) ಕೂಡ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ಪಿಎಫ್ ಕೊಡುಗೆಯನ್ನು ಮೂಲ ವೇತನ ಮತ್ತು ಡಿಎ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News