Bhagalpur Bridge Collapse: ಕೆಲವೇ ಸೆಕೆಂಡ್ ಗಳಲ್ಲಿ ಗಂಗಾನದಿಗೆ ಆಹುತಿಯಾದ 1750 ಕೋಟಿ ರೂ. ವೆಚ್ಚದ ಸೇತುವೆ... ವಿಡಿಯೋ ನೋಡಿ

Bhagalpur Bridge Collapse: ಸೇತುವೆ ಕುಸಿದು ಗಂಗಾ ನದಿಯಲ್ಲಿ ಮುಳುಗುತ್ತಿರುವ ದೃಶ್ಯವನ್ನು ಜನರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಸುಮಾರು 1750 ಕೋಟಿ ರೂ.ವೆಚ್ಚ ತಗುಲಿದೆ ಮತ್ತು ಇದು ಸಿಎಂ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿತ್ತು ಎನ್ನಲಾಗಿದೆ. ಕಳೆದ ವರ್ಷದ ಏಪ್ರಿಲ್ ನಲ್ಲಿಯೂ ಕೂಡ ಈ ಸೇತುವೆಯ ಒಂದು ಸೆಗ್ಮೆಂಟ್ ನದಿಯಲ್ಲಿ ಕುಸಿದಿತ್ತು ಎನ್ನಲಾಗಿದೆ.   

Written by - Nitin Tabib | Last Updated : Jun 4, 2023, 08:23 PM IST
  • ಈ ಸೇತುವೆಯ ವೆಚ್ಚ ಸುಮಾರು 1750 ಕೋಟಿ ರೂಪಾಯಿ ಎನ್ನಲಾಗಿದ್ದು,
  • ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ.
  • ಈ ಸೇತುವೆಯ ಭಾಗವು ಕಳೆದ ವರ್ಷ ಏಪ್ರಿಲ್‌ನಲ್ಲಿಯೂ ಕುಸಿದಿತ್ತು.
Bhagalpur Bridge Collapse: ಕೆಲವೇ ಸೆಕೆಂಡ್ ಗಳಲ್ಲಿ ಗಂಗಾನದಿಗೆ ಆಹುತಿಯಾದ 1750 ಕೋಟಿ ರೂ. ವೆಚ್ಚದ ಸೇತುವೆ... ವಿಡಿಯೋ ನೋಡಿ title=

Bihar Bridge Collapse: ಬಿಹಾರದ ಭಾಗಲ್ಪುರದಲ್ಲಿ ಭಾನುವಾರ ದೊಡ್ಡ ಘಟನೆಯೊಂದು ಸಂಭವಿಸಿದೆ. ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸುಲ್ತಾನ್ ಗಂಜ್-ಅಗುವಾನಿ ಚತುಷ್ಪಥ ಸೇತುವೆ ಮತ್ತೆ ಗಂಗಾ ನದಿಯಲ್ಲಿ ಕುಸಿದು ಬಿದ್ದಿದೆ. 30ಕ್ಕೂ ಹೆಚ್ಚು ಸ್ಲ್ಯಾಬ್‌ಗಳು ಅಂದರೆ ಸುಮಾರು 100 ಅಡಿಯಷ್ಟು ಭಾಗ ಕುಸಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸೇತುವೆಯನ್ನು ಖಗಾರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗಿದೆ. ಸೇತುವೆ ಕುಸಿದ ಘಟನೆಯನ್ನು ಜನರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಸೇತುವೆಯ ವೆಚ್ಚ ಸುಮಾರು 1750 ಕೋಟಿ ರೂಪಾಯಿ ಎನ್ನಲಾಗಿದ್ದು,  ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ.ಈ ಸೇತುವೆಯ ಭಾಗವು ಕಳೆದ ವರ್ಷ ಏಪ್ರಿಲ್‌ನಲ್ಲಿಯೂ ಕುಸಿದಿತ್ತು. ಸೇತುವೆಯ ಒಂದು ಭಾಗವು ಗಂಗಾ ನದಿಯಲ್ಲಿ ಮುಳುಗಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅನೇಕ ಜನರು ಸ್ವಲ್ಪ ದೂರದಿಂದ ಅದರ ವೀಡಿಯೊಗಳನ್ನು ಮಾಡುವುದನ್ನು ಸಹ ನೀವು ಕಾಣಬಹುದು. ಸದ್ಯ, ಈ ಘಟನೆಯಲ್ಲಿ ಪ್ರಾಣಹಾನಿಯಾದ ಕುರಿತು ವರದಿಯಾಗಿಲ್ಲ. 

ಇದನ್ನೂ ಓದಿ-'Filmfare ಪ್ರಶಸ್ತಿಗಳನ್ನು ನಾನು ನನ್ನ ವಾಶ್ರೂಮ್ ಬಾಗಿಲುಗಳ ಹಿಡಿಕೆಗಳನ್ನಾಗಿಸಿದ್ದೇನೆ'

ಸೇತುವೆ ಕುಸಿತದ ಕುರಿತು ಹೇಳಿಕೆ ನೀಡಿರುವ ಬಿಹಾರ ರಾಜ್ಯ ಸೇತುವೆ ನಿರ್ಮಾಣ ನಿಗಮದ ಕಾರ್ಯವಾಹಕ ಅಭಿಯಂತ ಯೋಗೇಂದ್ರ ಕುಮಾರ್ ಖಗಾರಿಯಾ, ಕೆಲವು ಸ್ಪ್ಯಾನ್‌ಗಳು ಮಾತ್ರ ಕುಸಿತು ಬಿದ್ದಿವೆ ಎಂದು ಹೇಳಿದ್ದಾರೆ. ಸದ್ಯ ಅಪಘಾತ ನಡೆದ ಸ್ಥಳಕ್ಕೆ ಹೋಗುತ್ತಿದ್ದೇನೆ. ಸದ್ಯ ಈ ಬಗ್ಗೆ ವಿಶೇಷ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೊಂದೆಡೆ, ಈ ಸೇತುವೆಯ ಗುಣಮಟ್ಟದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆಗಳು ಉದ್ಭವಿಸಿವೆ ಎಂದು ಪರಬಟ್ಟ ಶಾಸಕ ಡಾ.ಸಂಜೀವ್ ಕುಮಾರ್ ಹೇಳಿದ್ದಾರೆ. ಇದು ಸಿಎಂ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ. ಆದರೆ ಸೇತುವೆ ನಿರ್ಮಾಣ ಮಾಡಿದ ಎಸ್ ಪಿ ಸಿಂಗ್ಲಾ ಕಂಪನಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಂಜೀವ್ ಕುಮಾರ್ ಒತ್ತಾಯಿಸಿದ್ದಾರೆ. ಈ ಯೋಜನೆಯ ನಿರ್ದೇಶಕ ಅಲೋಕ್ ಝಾ ಅವರ ಮೇಲೂ ಅವರು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ-Odisha Train Accident: ಬಾಲಾಸೋರ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೇಲ್ವೆ ಅಧಿಕೃತ ಹೇಳಿಕೆ ಪ್ರಕಟ

ಸೇತುವೆ ಅಪಘಾತದ ಬಗ್ಗೆ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹಾ ನೇರವಾಗಿ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಭ್ರಷ್ಟಾಚಾರ ಮತ್ತು ಕಮಿಷನ್ ಖೋರಿಯಿಂದಾಗಿ ಈ ಸೇತುವೆ ಅಪಘಾತಕ್ಕೆ ಬಲಿಯಾಗಿದೆ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ. ಒಂದು ಕಾಲದಲ್ಲಿ ಮಹಾಮೈತ್ರಿಕೂಟ ಸರ್ಕಾರದಲ್ಲಿ ಶಾಲೆಯ ಒಂದು ಭಾಗ ಕುಸಿದಿತ್ತು. ಇದೀಗ ಸೇತುವೆಯೂ ಕುಸಿದಿದೆ ಎಂದು ಮಿಶ್ರಾ ಹೇಳಿದ್ದಾರೆ. ರಾಜ್ಯ ಸರ್ಕಾರದ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಮಿಷನ್ ಖೋರಿ ಸರ್ಕಾರದ ಉನ್ನತ ಅಧಿಕಾರಿಗಳೇ ನೇರವಾಗಿ ಕಮಿಷನ್ ದಂಧೆಗೆ ಇಳಿದಿದ್ದಾರೆ. ಅಧಿಕಾರಿಗಳೇ ನೇರವಾಗಿ ವಸೂಲಾತಿಯಲ್ಲಿ ತೊಡಗಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟರ ಭ್ರಷ್ಟಾಚಾರದಿಂದ ಇಂತಹ ಘಟನೆಗಳು ನಡೆಯುವುದು ಸಹಜ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. 
 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News