ನವದೆಹಲಿ:ದೇಶಾದ್ಯಂತ ಪಸರಿಸಿರುವ ಲಾಕ್ ಡೌನ್ ಹಿನ್ನೆಲೆ ಹಲವು ಜನರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಲ್ಲದೆ ಹಲವು ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ನಿಮ್ಮ ಜೊತೆಗೂ ಕೂಡ ಇದೇ ರೀತಿ ಸಂಭವಿಸಿದ್ದರೆ, ಬಿಲ್ ಕುಲ್ ಟೆನ್ಶನ್ ತೆಗೆದುಕೊಳ್ಳಬೇಡಿ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಂಕ್ ಗಳು ಓವರ್ ಡ್ರಾಫ್ಟ್ ಸೌಲಭ್ಯದ ಲಾಭ ನೀವು ಪಡೆಯಬಹುದು. ಈ ಸೌಲಭ್ಯ ಬಳಸಿ ನೀವು ನಿಮ್ಮ ಹಣಕಾಸಿನ ಸಮಸ್ಯೆಯನ್ನು ನಿವಾರಿಸಬಹುದು ಹಾಗೂ ನಿಮ್ಮ ಅತ್ಯಾವಶ್ಯಕ ಕೆಲಸಗಳನ್ನು ಕೂಡ ಪೂರ್ಣಗೊಳಿಸಬಹುದು. ಹಾಗಾದರೆ ಬನ್ನಿ ಈ ಸೌಲಭ್ಯದ ಲಾಭ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಬ್ಯಾಂಕ್ ನಲ್ಲಿ ಖಾತೆ ಹೊಂದಿದವವರು ಈ ಸೌಲಭ್ಯ ಪಡೆಯಬಹುದು
ಬ್ಯಾಂಕ್ ನ ಓವರ್ ಡ್ರಾಫ್ಟ್ ಸೌಲಭ್ಯ, ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಸಿಗುತ್ತದೆ. ಅಂದರೆ ಒಂದು ವೇಳೆ ನೀವು ಬ್ಯಾಂಕ್ ನಲ್ಲಿ ಮೊದಲೇ ಖಾತೆ ಹೊಂದಿದ್ದರೆ ಈ ಸೌಲಭ್ಯ ಪಡೆಯಬಹುದು ಅಥವಾ ಕೆಲ ಬ್ಯಾಂಕ್ ಗಳು ಆರಂಭದಿಂದಲೇ ಈ ಸೌಕರ್ಯ ಒದಗಿಸುತ್ತವೆ. ಆದರೆ, ಬ್ಯಾಂಕ್ ನೀಡುವ ಈ ಸೌಕರ್ಯದ ಬಗ್ಗೆ ತುಂಬಾ ಕಡಿಮೆ ಜನರಿಗೆ ತಿಳಿದಿದೆ.
ಓವರ್ ಡ್ರಾಫ್ಟ್ ಸೌಲಭ್ಯ ಅಂದರೇನು?
ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ಈ ಸೌಲಭ್ಯ ನೀಡುತ್ತವೆ. ಬಹುತೇಕ ಬ್ಯಾಂಕ್ ಗಳು ಚಾಲ್ತಿ ಖಾತೆ, ಸ್ಯಾಲರಿ ಖಾತೆ ಹಾಗೂ ಫಿಕ್ಸಡ್ ಡಿಪಾಸಿಟ್ ಗಳ ಮೇಲೆ ಈ ಸೌಲಭ್ಯ ನೀಡುತ್ತವೆ. ಕೆಲ ಬ್ಯಾಂಕ್ ಗಳು ಷೇರು, ಬಾಂಡ್ ಹಾಗೂ ವಿಮಾ ಪಾಲಸಿಗಳಂತಹ ಅಸೆಟ್ ಮೇಲೆ ಕೂಡ ಓವರ್ ಫ್ರಫ್ತ್ ಸೌಕರ್ಯ ಒದಗಿಸುತ್ತವೆ. ಈ ಸೌಲಭ್ಯ ಬಳಸಿ ನೀವು ಬ್ಯಾಂಕ್ ನಿಂದ ಹಣ ಪಡೆದು ನಂತರ ಮರುಪಾವತಿಸಬಹುದು.
ಈ ರೀತಿ ಸೌಕರ್ಯದ ಲಾಭ ಪಡೆಯಬಹುದು
ಓವರ್ ಡ್ರಾಫ್ಟ್ ಪಡೆಯುವ ಪ್ರಕ್ರಿಯೆ ಬ್ಯಾಂಕ್ ನ ಇತರೆ ಸಾಲ ಪಡೆಯುವ ಪ್ರಕ್ರಿಯೆಯಂತೆಯೇ ಇರಲಿದೆ. ಒಂದು ವೇಳೆ ನೀವು ಬ್ಯಾಂಕ್ ನಲ್ಲಿ ಸ್ಯಾಲರಿ, ಚಾಲ್ತಿ ಖಾತೆ ಹೊಂದಿದ್ದರೆ ಪ್ರಕ್ರಿಯೆ ಸ್ವಲ್ಪ ಸರಳವಾಗಿರಲಿದೆ. ಒಂದು ವೇಳೆ ಬ್ಯಾಂಕ್ ನಲ್ಲಿ ನೀವು ಯಾವುದೇ FD ಇಲ್ಲದೆ ಹೋದಲ್ಲಿ, ಬ್ಯಾಂಕ್ ನಲ್ಲಿ ನೀವು ಯಾವುದಾದರೊಂದು ಆಸ್ತಿ ಅಡವು ಇಡಬೇಕು. ಇದಾದ ಬಳಿಕ ಅವಶ್ಯಕ ಎನಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬ್ಯಾಂಕ್ ನಿಮಗೆ ಓವರ್ ಡ್ರಾಫ್ಟ್ ಸೌಕರ್ಯ ನೀಡುತ್ತದೆ. ಇತ್ತೀಚಿಗೆ ಹಲವು ಬ್ಯಾಂಕ್ ಗಳು ತಮ್ಮ ಒಳ್ಳೆಯ ಗ್ರಾಹಕರಿಗೆ ಮುಂಚಿತವಾಗಿಯೇ ಓವರ್ ಡ್ರಾಫ್ಟ್ ಸೌಕರ್ಯ ಒದಗಿಸುತ್ತವೆ.
ಎಷ್ಟು ಹಣ ಪಡೆಯಬಹುದು?
ನೀವು ಬ್ಯಾಂಕ್ ನಿಂದ ಎಷ್ಟು ಹಣ ಪಡೆಯಬಹುದು ಎಂಬುದನ್ನು ಬ್ಯಾಂಕ್ ಗಳು ನಿರ್ಧರಿಸುತ್ತವೆ. ನೀವು ಬ್ಯಾಂಕ್ ನಲ್ಲಿ ಅಡವು ಇಟ್ಟ ವಸ್ತು ಯಾವುದು ಎಂಬುದರ ಮೇಲೂ ಕೂಡ ಇದು ಅವಲಂಭಿತವಾಗಿರುತ್ತವೆ. FD ಹಾಗೂ ಸ್ಯಾಲರಿ ಅಕೌಂಟ್ ಹೊಂದಿದ್ದರೆ, ನಿಮ್ಮ ಲಿಮಿಟ್ ಹೆಚ್ಚಾಗಿರಲಿದೆ. ಉದಾಹರಣೆಗೆ ಒಂದು ವೇಳೆ ನೀವು ಬ್ಯಾಂಕ್ ನಲ್ಲಿ 2 ಲಕ್ಷ ರೂ.ಗಳ ವರೆಗೆ FD ಹೊಂದಿದ್ದರೆ, ನಿಮಗೆ ನಿಮ್ಮ FDಯ ಶೇ.80 ರಷ್ಟು ಹಣ ಅಂದರೆ 1.60 ಲಕ್ಷ ರೂ.ಗಳವರೆಗೆ ಓವರ್ ಡ್ರಾಫ್ಟ್ ಸೌಕರ್ಯ ಸಿಗುತ್ತದೆ.
ಬಡ್ಡಿ ಎಷ್ಟು ಪಾವತಿಸಬೇಕು?
ಓವರ್ ಡ್ರಾಫ್ಟ್ ಸೌಕರ್ಯದ ಮೂಲಕ ನೀವು ಪಡೆಯುವ ಹಣಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಎಷ್ಟು ಅವಧಿಗಾಗಿ ನೀವು ಹಣ ಪಡೆಯುತ್ತಿರುವಿರಿ ಎಂಬುದರೆ ಮೇಲೆ ಇದು ಅವಲಂಭಿಸಿರುತ್ತದೆ. ಇದರ ಅರ್ಥ ಒಂದು ವೇಳೆ ನೀವು ಡಿಸೆಂಬರ್ ತಿಂಗಳಿನ 25 ನೇ ತಾರೀಖಿಗೆ ಹಣ ಪಡೆದು, ಜನವರಿ 25ಕ್ಕೆ ಮರುಪಾವತಿಸಿದರೆ ನಿಮಗೆ ಒಂದು ತಿಂಗಳ ಬಡ್ಡಿ ಬೀಳಲಿದೆ.