ಮುಸ್ಲಿಮರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಸಿಗುತ್ತಿಲ್ಲ ಎಂದ ಓವೈಸಿ ಹೇಳಿಕೆಗೆ ಯೋಗಿ ಖಡಕ್ ಉತ್ತರ

ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Written by - Ranjitha R K | Last Updated : Sep 30, 2021, 08:06 PM IST
  • ಉತ್ತರ ಪ್ರದೇಶದಲ್ಲಿ 'ಮುಸ್ಲಿಂ ಕಾರ್ಡ್' ಪ್ಲೇ ಮಾಡುತ್ತಿರುವ ಓವೈಸಿ
  • ಮುಸ್ಲಿಮರ ವಿರುದ್ಧ ತಾರತಮ್ಯದ ಆರೋಪ
  • ಓವೈಸಿಗೆ ತಕ್ಕ ಉತ್ತರ ನೀಡಿದ ಸಿಎಂ ಯೋಗಿ
ಮುಸ್ಲಿಮರಿಗೆ  ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಸಿಗುತ್ತಿಲ್ಲ ಎಂದ ಓವೈಸಿ ಹೇಳಿಕೆಗೆ ಯೋಗಿ ಖಡಕ್ ಉತ್ತರ  title=
ಓವೈಸಿಗೆ ತಕ್ಕ ಉತ್ತರ ನೀಡಿದ ಸಿಎಂ ಯೋಗಿ (file photo)

ಲಕ್ನೋ : ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asadudin Owaisi) ಉತ್ತರ ಪ್ರದೇಶ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi adityanath) ಮತ್ತು ಬಿಜೆಪಿ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಮುಸ್ಲಿಮರ ಬಗ್ಗೆ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಒವೈಸಿ ಮತ್ತೊಮ್ಮೆ ಆರೋಪಿಸಿದ್ದಾರೆ. ಒವೈಸಿ ಆರೋಪಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಕ್ತ ಉತ್ತರ ನೀಡಿದ್ದಾರೆ. 

ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pm awaz yojana) ಲಾಭವನ್ನು ಪಡೆಯುತ್ತಿಲ್ಲ ಎಂದು ಓವೈಸಿ ಹೇಳಿದ್ದಾರೆ.  ಬಹ್ರೈಚ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಓವೈಸಿ ತಾರತಮ್ಯದ ಆರೋಪ ಮಾಡಿದ್ದಾರೆ.  ಯಾವ ಮುಸ್ಲಿಮರಿಗೆ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ನೀಡಲಾಗಿದೆ, ಹತ್ತು ಹೆಸರುಗಳನ್ನು ಹೇಳಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿಯನ್ನು (UP CM) ಪ್ರಶ್ನಿಸಿದ್ದಾರೆ. ಮುಸ್ಲಿಮರು ಉತ್ತರ ಪ್ರದೇಶದಲ್ಲಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ಕೂಡಾ ಅವರು ಹೇಳಿದ್ದಾರೆ.  

ಇದನ್ನೂ ಓದಿ: Coronavirus : ಭಾರತೀಯರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆಯಾ ? ಏನು ಹೇಳುತ್ತಿದೆ ಸರ್ಕಾರ

ಓವೈಸಿ ಆರೋಪಕ್ಕೆ ಯೋಗಿ ಪ್ರತಿದಾಳಿ :
'ಮೋದಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ (Sab ka saath sab ka vikaas) ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿಯ ಮುಖ ನೋಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭವನ್ನು ನೀಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.   ಮಹಿಳೆಯರಿಗಾಗಿ ಇಜ್ಜಾತ್ ಘರ್ ಮಾಡುವ ಕೆಲಸವನ್ನು ಮೋದಿಯವರು (PM Modi) ಮಾಡಿದ್ದಾರೆ. ಮೊದಲು ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ನಂತರ ತಾರತಮ್ಯವನ್ನು ತೆಗೆದುಹಾಕಲಾಗಿದೆ. ಹೆಣ್ಣು ಮಕ್ಕಳ ಮದುವೆಗೆ ನಮ್ಮ ಸರ್ಕಾರ ಕೂಡ ಯೋಜನೆ ರೂಪಿಸಿದೆ. 751 ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಲಾಗಿದೆ. ಆಯುಷ್ಮಾನ್ ಯೋಜನೆಯ (Ayushman yojana) ಲಾಭವನ್ನು ಜನರಿಗೆ ನೀಡಲಾಗುತ್ತಿದೆ. 

ಅಖಿಲೇಶ್ ಸರ್ಕಾರದ ವಿರುದ್ದವೂ ವಾಗ್ದಾಳಿ : 
ಹಿಂದಿನ ಸರ್ಕಾರವು ಕನ್ವರ್ ಯಾತ್ರೆಗೆ ಅವಕಾಶ ನೀಡಿರಲಿಲ್ಲ. ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಣೆಯನ್ನು ಕೂಡಾ ನಿಷೇಧಿಸಿತ್ತು. ಡಿಜೆ ಹಾಕಿದರೆ , ಕನ್ವರ್ ಯಾತ್ರೆಯಲ್ಲಿ ಗಲಭೆ ಉಂಟಾಗುತ್ತದೆ ಎಂದು ಹಿಂದಿನ ಸರ್ಕಾರ ಹೇಳಿತ್ತು. ನಾವು ಕನ್ವರ್ ಯಾತ್ರೆಯಲ್ಲಿ ಡಿಜೆ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದೇವೆ ಆದರೂ ಯಾವುದೇ ಗಲಭೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: PM Kisan Samman Yojana: ಇಂದು ಈ ಕೆಲಸವನ್ನು ಮಾಡಿಲ್ಲ ಎಂದಾದರೆ ಖಾತೆಗೆ ಬರುವುದಿಲ್ಲ 4000 ರೂ. ಇಂದೇ ಕೊನೆಯ ದಿನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News