ಲೋಕಸಭಾ ಚುನಾವಣೆ 2019: ಹೈದರಾಬಾದ್ ಕ್ಷೇತ್ರದಿಂದ ಅಸಾದುದ್ದೀನ್ ಓವೈಸಿ ನಾಮಪತ್ರ ಸಲ್ಲಿಕೆ

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.

Last Updated : Mar 18, 2019, 05:49 PM IST
ಲೋಕಸಭಾ ಚುನಾವಣೆ 2019: ಹೈದರಾಬಾದ್ ಕ್ಷೇತ್ರದಿಂದ ಅಸಾದುದ್ದೀನ್ ಓವೈಸಿ ನಾಮಪತ್ರ ಸಲ್ಲಿಕೆ title=

ಹೈದರಾಬಾದ್:  ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್(AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸೋಮವಾರ ಹೈದರಾಬಾದ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

"ನಾನಿಂದು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದೆ. ಹೈದರಾಬಾದ್ ಲೋಕಸಭಾ ಕ್ಷೇತ್ರ ದೇಶದ ಬಡವರ, ಶೋಷಿತರ ಮತ್ತು ದುರ್ಬಲರ ಧ್ವನಿಯಾಗಿದೆ. ಇನ್ಷಾಅಲ್ಲಾಹ್, ಮುಂದೆಯೂ ಹೀಗೆ ಮುಂದುವರಿಯಲಿದೆ" ಎಂದು ನಾಮಪತ್ರ ಸಲ್ಲಿಸಿದ ಬಳಿಕ ಓವೈಸಿ ಟ್ವೀಟ್ ಮಾಡಿದ್ದಾರೆ. 

ಈಗಾಗಲೇ ಮೂರು ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಓವೈಸಿಗೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಟಿಎಸ್ಆರ್ ಬೆಂಬಲ ಸೂಚಿಸಿದ್ದು, ಆ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. 

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಮತಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

Trending News