ಶ್ರೀನಗರ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಸೇನಾ ಮುಖ್ಯಸ್ಥರು ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಅವರು ಶ್ರೀನಗರದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ನಂತರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊದಲ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದಾರೆ. ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಜಮ್ಮು ಮತ್ತು ಕಾಶ್ಮೀರದ ಅನೇಕ ಪ್ರದೇಶಗಳಲ್ಲಿ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೆಲವು ಪ್ರದೇಶಗಳಲ್ಲಿ ಸೇವೆಯನ್ನು ಪುನರಾರಂಭಿಸಲಾಗಿದೆ.
ಕಾಶ್ಮೀರದಲ್ಲಿ ಶೀಘ್ರದಲ್ಲೇ 50 ಸಾವಿರ ಹೊಸ ಸರ್ಕಾರಿ ಉದ್ಯೋಗಗಳು: ರಾಜ್ಯಪಾಲರು
370 ನೇ ವಿಧಿಯನ್ನು ರದ್ದುಗೊಳಿಸಿರುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರ ಅನುಕೂಲಕ್ಕಾಗಿ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬುಧವಾರ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಸಾವಿನ ಯಾವುದೇ ಅಂಕಿಅಂಶಗಳನ್ನು ರಾಜ್ಯ ಆಡಳಿತ ಮರೆಮಾಚುತ್ತಿಲ್ಲ, ಇಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 50 ಸಾವಿರ ಹೊಸ ಸರ್ಕಾರಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲಿಕ್, "ಪ್ರತಿ ಕಾಶ್ಮೀರಿ ಜೀವನ ಅಮೂಲ್ಯವಾದುದು. ಇದು ಸಾಧನೆಯಲ್ಲವೇ? ಇದು ಸರ್ಕಾರವು ಶಾಂತಿಯನ್ನು ಕಾಪಾಡಿಕೊಂಡ ಪರಿಣಾಮವಾಗಿದೆ ಮತ್ತು ಪ್ರತಿಯೊಬ್ಬರೂ ಯಾರಿಗೂ ಯಾವುದೇ ಹಾನಿಯಾಗದಂತೆ ದಿನವಿಡೀ ಕೆಲಸ ಮಾಡಿದ್ದಾರೆ. ಸಾಮಾನ್ಯತೆಯನ್ನು ಮರುಸ್ಥಾಪಿಸಲು ಜನರು ಸಾಕಷ್ಟು ಸಹಕರಿಸಿದರು ಮತ್ತು ಪ್ರದೇಶದಲ್ಲಿ ಶಾಂತಿ ವಾತಾವರಣ ನೆಲೆಸಿದೆ" ಎಂದು ಅವರು ಹೇಳಿದರು.
"ನಿರ್ಬಂಧಗಳ ಪರಿಣಾಮಗಳು ನಿಮ್ಮ ಮುಂದೆ ಇವೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಬಳಿಕ ಯಾವುದೇ ಗದ್ದಲ, ಗಲಾಟೆ ನಡೆದಿಲ್ಲ ಹಾಗೂ ಇದರಿಂದಾಗಿ ರಾಜ್ಯದಲ್ಲಿ ಒಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ. 2008 ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2010 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ 100 ಜನರು ಸಾವನ್ನಪ್ಪಿದರು. "ಆದರೆ, ಇದೀಗ ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ, ಹಿಂಸಾಚಾರದಲ್ಲಿ ಕೆಲವರು ಮಾತ್ರ ಗಾಯಗೊಂಡಿದ್ದಾರೆ" ಎಂದು ರಾಜ್ಯಪಾಲರು ತಿಳಿಸಿದರು.
"ಈ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡ ರಾಜ್ಯಪಾಲ ಸತ್ಯಪಾಲ್ ಮಲಿಕ್, ಹಿಂಸಾಚಾರದಲ್ಲಿ ಗಾಯಗೊಂಡವರಿಗೂ ಕೂಡ ಸೊಂಟದಿಂದ ಕೆಳಗೆ ಗಾಯಗೊಂಡಿದ್ದಾರೆ. ಕೇಂದ್ರದ ತಂಡಗಳು ಪ್ರತಿದಿನ ಅವರನ್ನು ಭೇಟಿ ಮಾಡಲು ಬರುತ್ತಿರುವಾಗ ಆಡಳಿತವು ಸಾವಿನ ಸಂಖ್ಯೆಯನ್ನು ಹೇಗೆ ಮರೆಮಾಡಲು ಸಾಧ್ಯ" ಎಂದರು. ಕುಪ್ವಾರಾ ಮತ್ತು ಹಂಡ್ವಾರಾ ಜಿಲ್ಲೆಗಳಲ್ಲಿ ಮೊಬೈಲ್ ಫೋನ್ ಸಂಪರ್ಕವನ್ನು ಸರ್ಕಾರ ತೆರೆಯಲಿದೆ ಎಂದು ಮಲಿಕ್ ಘೋಷಿಸಿದರು.
ಇದಲ್ಲದೆ, ಈ ಭಾಗದಲ್ಲಿ ಫೋನ್ ಮತ್ತು ಇಂಟರ್ನೆಟ್ ಬಳಕೆಯನ್ನು ಜನರು ಕಡಿಮೆ ಬಳಸುತ್ತಾರೆ, ಆದರೆ ಇದನ್ನು ಹೆಚ್ಚಾಗಿ ಭಯೋತ್ಪಾದಕರು ಬಳಸುತ್ತಾರೆ ಎಂದು ರಾಜ್ಯಪಾಲರು ತಿಳಿಸಿದರು. "ಇದು ನಮ್ಮ ವಿರುದ್ಧ ಬಳಸಲಾಗುವ ಒಂದು ರೀತಿಯ ಆಯುಧ, ಆದ್ದರಿಂದ ನಾವು ಅದನ್ನು ಸ್ಥಗಿತಗೊಳಿಸಿದ್ದೇವೆ. ಕ್ರಮೇಣ ಸೇವೆಗಳನ್ನು ಪುನರಾರಂಭಿಸಲಾಗುವುದು" ಎಂದು ಫೋನ್, ಇಂಟರ್ನೆಟ್ ಸ್ಥಗಿತಗೊಳಿಸಿರುವ ಅವರ ಕ್ರಮವನ್ನು ಸಮರ್ಥಿಸಿಕೊಂಡರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ -370 ಅನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ನಿರ್ಧಾರವನ್ನು ಬೆಂಬಲಿಸಿದ ಅವರು, "ಜಮ್ಮು ಮತ್ತು ಕಾಶ್ಮೀರ (ಜಮ್ಮು ಕಾಶ್ಮೀರ) ಮತ್ತು ಲಡಾಖ್ ಜನರ ಸುಧಾರಣೆಗಾಗಿ ಸರ್ಕಾರದ ನಿರ್ಧಾರವಾಗಿದೆ" ಎಂದರು.
"ಮುಂಬರುವ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜನರು ಮುಂದಿನ ದಿನಗಳಲ್ಲಿ ಅದೇ ರೀತಿಯ ಅಭಿವೃದ್ಧಿಗೆ ಒತ್ತಾಯಿಸುತ್ತಾರೆ". ಸುಮಾರು 50 ಸಾವಿರ ಸರ್ಕಾರಿ ಉದ್ಯೋಗಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಮತ್ತು 50 ಹೆಚ್ಚುವರಿ ಪದವಿ ಕಾಲೇಜುಗಳನ್ನು ರಾಜ್ಯದಲ್ಲಿ ತೆರೆಯಲಾಗುವುದು ಎಂದು ಮಲಿಕ್ ಹೇಳಿದರು.