ನವದೆಹಲಿ: ಭಾರತ ಬಯೋಟೆಕ್ ನ ವ್ಯಾಕ್ಸಿನ್ ಕೊವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ದೊರೆತಾಗಿನಿಂದ ಈ ಲಸಿಕೆಯ ಕುರಿತು ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಕೆಲವರು ಈ ವ್ಯಾಕ್ಸಿನ್ ನ ಪ್ರಭಾವದ ಮೇಲೆ ಸವಾಲೆತ್ತುತ್ತಿದ್ದರೆ, ಇನ್ನುಳಿದವರು ಈ ವ್ಯಾಕ್ಸಿನ್ ಅನ್ನು ಒಂದು ಬ್ಯಾಕ್ ಅಪ್ ವ್ಯಾಕ್ಸಿನ್ ಎಂದು ಕರೆಯುತ್ತಿದ್ದಾರೆ. ವ್ಯಾಕ್ತಿನ್ ಕುರಿತು ಏಳುತ್ತಿರುವ ಪ್ರಶ್ನೆಗಳಿಗೆ ಭಾರತ ಬಯೋಟೆಕ್ ಚೇರ್ಮನ್ ಕೃಷ್ಣಾ ಇಲ್ಲಾ ತಿರುಗೇಟು ನೀಡಿದ್ದಾರೆ. ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಕಂಪನಿ ಒಂದು ಜಾಗತಿಕ ಕಂಪನಿಯಾಗಿದ್ದು, ನಮ್ಮ ಕಂಪನಿಗೆ ಕ್ಲಿನಿಕಲ್ ರಿಸರ್ಚ್ ತಿಳಿದಿಲ್ಲ ಎಂಬ ಆರೋಪ ಮಾಡುವುದು ತಪ್ಪು ಎಂದಿದ್ದಾರೆ. ಇದಕ್ಕೂ ಮೊದಲು ಸಿರಮ್ ಇನ್ಸ್ಟಿಟ್ಯೂಟ್ ಸಿಇಓ ಅದರ್ ಪೂನಾವಾಲಾ ಅಪ್ರತ್ಯಕ್ಷ ರೂಪದಲ್ಲಿ ಕೊವ್ಯಾಕ್ಸಿನ್ ಅನ್ನು ನೀರು ಎಂದು ಕರೆದಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಇಲ್ಲಾ, ನಮ್ಮ ಕಂಪನಿಯ ವ್ಯಾಕ್ಸಿನ್ ಅನ್ನು ಈ ರೀತಿ ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ. ಯಾವುದೇ ಒಂದು ಲಸಿಕೆಗೆ ಅದರ ಪ್ರಭಾವಶಾಲಿಯಾಗಿರುವುದರ ಬಗ್ಗೆ ಅಂಕಿ ಅಂಶಗಳನ್ನು ಪ್ರಕಟಿಸದೆ ಈ ರೀತಿ ತುರ್ತು ಬಳಕೆಗೆ ಅನುಮತಿ ನೀಡುವುದನ್ನು ಪ್ರತಿಪಕ್ಷಗಳು ಹಾಗೂ ಉದ್ಯಮ ತಜ್ಞರು ಪ್ರಶ್ನಿಸಿದ್ದರು. ಸೋಮವಾರ ಟೀಕಾಕಾರರನ್ನು ಗುರಿಯಾಗಿಸಿ ಮಾತನಾಡಿರುವ ಕೃಷ್ಣಾ ಇಲ್ಲಾ, ತಮ್ಮ ಸಂಸ್ಥೆ ಶೇ.200 ರಷ್ಟು ಪ್ರಾಮಾಣಿಕ ಕ್ಲಿನಿಕಲ್ ಟ್ರಯಲ್ ನಡೆಸಿದೆ ಎಂದು ಹೇಳಿದ್ದಾರೆ.
ಭಾರತೀಯ ಕಂಪನಿಗಳನ್ನು ಗುರಿಯಾಗಿಸುವುದು ಸರಿಯಲ್ಲ
ಆನ್ಲೈನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣಾ ಇಲ್ಲಾ, ತಮ್ಮ ಕಂಪನಿ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಉತ್ಪಾದನೆಯ ದಾಖಲೆ ಹೊಂದಿದೆ ಹಾಗೂ ಎಲ್ಲ ರೀತಿಯ ಅಂಕಿ-ಅಂಶಗಳಲ್ಲಿ ಪಾರದರ್ಶಕತೆ ಹೊಂದಿದೆ. 'ನಾವು ಭಾರತ ಸೇರಿದಂತೆ ಒಟ್ಟು 12ಕ್ಕೂ ಅಧಿಕ ದೇಶಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ್ದೇವೆ. ಕೇವಲ ಭಾರತೀಯ ಕಂಪನಿಯನ್ನು ಗುರಿಯಾಗಿಸಲು ಜನರು ವಿಭಿನ್ನ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಇದು ನಮ್ಮ ದೃಷ್ಠಿಯಿಂದ ಸರಿಯಲ್ಲ' ಎಂದು ಹೇಳಿದ್ದಾರೆ.
ಇದನ್ನು ಓದಿ-COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಶೇ. 200 ರಷ್ಟು ಪ್ರಾಮಾಣಿಕ ಕ್ಲಿನಿಕಲ್ ಟ್ರಯಲ್
ಕೊವ್ಯಾಕ್ಸಿನ್ (Covaxin) ಹಲವು ವೈರಲ್ ಪ್ರೋಟೀನ್ ವಿರುದ್ಧ ಬಲಿಷ್ಠ ಪ್ರತಿರಕ್ಷಣಾ ಪ್ರತಿಕ್ರಿಯೆ ನೀಡುವುದರ ಜೊತೆಗೆ ಉನ್ನತ ದರ್ಜೆಯ ಸುರಕ್ಷಿತತೆಯ ದತ್ತಾಂಶ ಒದಗಿಸಿದೆ. ಇದಕ್ಕಾಗಿ ತಮ್ಮ ಕಂಪನಿ ಶೇ.200 ರಷ್ಟು ಪ್ರಾಮಾಣಿಕ ಪರೀಕ್ಷೆಗಳನ್ನು ನಡೆಸಿದೆ. 'ನನಗೆ ಒಂದು ವಾರದ ಕಾಲಾವಕಾಶ ನೀಡಿದರೆ, ನಾನು ನಿಮಗೆ ನಿಖರ ದತ್ತಾಂಶಗಳ ಮಾಹಿತಿ ನೀಡುವೆ' ಎಂದಿದ್ದಾರೆ. ಭಾರತ್ ಬಯೋಟೆಕ್ ಇರುವರೆಗೆ ದೇಶ ಹಾಗೂ ಇಡೀ ವಿಶ್ವಕ್ಕೆ ಇದುವರೆಗೆ ಸುಮಾರು 16 ಲಸಿಕೆಗಳನ್ನು ನೀಡಿದೆ. ನಾವು ಕೇವಲ ಒಂದು ಭಾರತೀಯ ಕಂಪನಿಯಾಗಿರದೆ, ವಾಸ್ತವ ರೂಪದಲ್ಲಿ ಜಾಗತಿಕ ಕಂಪನಿಯಾಗಿದ್ದೇವೆ. ನಮಗೆ ಕ್ಲಿನಿಕಲ್ ರಿಸರ್ಚ್ ಗೊತ್ತಿಲ್ಲ ಎಂದು ಜನರು ಮಾಡುತ್ತಿರುವ ಆರೋಪ ದುರುದ್ದೇಶಪೂರ್ವಕ' ಎಂದು ಅವರು ಹೇಳಿದ್ದಾರೆ.
ಸೀರಮ್ ಸಂಸ್ಥೆಯ ಪೂನಾವಾಲಾಗೆ ತಿರುಗೇಟು
ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಅದರ್ ಪೂನಾವಾಲಾ ಅವರ ಹೆಸರನ್ನು ಉಲ್ಲೇಖಿಸದೆ ಅವರಿಗೆ ತಿರುಗೇಟು ನೀಡಿರುವ ಕೃಷ್ಣಾ ಇಲ್ಲಾ, 'ನಾವು ಶೇ.200 ರಷ್ಟು ಪ್ರಾಮಾಣಿಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತೇವೆ. ಆದರೂ ಕೂಡ ನಮ್ಮನ್ನು ಗುರಿಯಾಗಿಸಲಾಗುತ್ತದೆ. ಕೆಲ ಕಂಪನಗಳು ನಮ್ಮ ಲಸಿಕೆಯನ್ನು ನೀರು ಎಂದು ಕರೆದಿವೆ. ಭಾರತ್ ಬಯೋಟೆಕ್ ಅಂಕಿ-ಅಂಶಗಳ ಕುರಿತು ಪಾರದರ್ಶಕವಾಗಿಲ್ಲ ಎಂದು ಹೇಳುವುದು ತಪ್ಪು ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಕಂಪನಿಯವತಿಯಿಂದ ನಡೆಸಲಾಗಿರುವ ಹಲವು ಪ್ರಕಾಶನಗಳನ್ನು ಉಲ್ಲೇಖಿಸಿದ್ದಾರೆ. ವ್ಯಾಕ್ಸಿನ ಪ್ರಭಾವದ ಕುರಿತು ಸ್ಪಷ್ಟ ಅಂಕಿ-ಅಂಶಗಳನ್ನು ಪಡೆಯದೇ ಅದರ ತುರ್ತು ಬಳಕೆಗೆ ಅನುಮತಿ ನೀಡಲಾಗಿರುವುದನ್ನು ಉದ್ಯಮ ತಜ್ಞರು ಹಾಗೂ ಕಾಂಗ್ರೆಸ್ ಮುಖಂಡರು ಸವಾಲೆತ್ತಿದ್ದಾರೆ.
ಇದನ್ನು ಓದಿ-ಶೀಘ್ರವೇ World's Biggest Vaccination Programme ಆರಂಭ: ಪ್ರಧಾನಿ ಮೋದಿ
ತಮ್ಮ ಕಂಪನಿಯ ವ್ಯಾಕ್ಸಿನ್ ಕುರಿತು ಹೇಳಿರುವ ಇಲ್ಲಾ, ಮಕ್ಕಳ ಮೇಲೂ ಕೂಡ ತಮ್ಮ ವ್ಯಾಕ್ಸಿನ್ ನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಮೂರನೇ ಹಂತದ ಪರೀಕ್ಷೆಗಳ ಪ್ರಭಾವಶೀಲತೆಯ ಕುರಿತು ಇದುವರೆಗೆ ಯಾವುದೇ ರೀತಿಯ ಆಂತರಿಕ ವಿಶ್ಲೇಷಣೆ ನಡೆಸಲಾಗಿಲ್ಲ. ಕೊವ್ಯಾಕ್ಸಿನ್ ಅನ್ನು 2019ರ ನಿಯಮಗಳ ಆಧಾರದ ಮೇಲೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಉತ್ತಮ ಪರೀಕ್ಷಾ ದತ್ತಾಂಶಗಳನ್ನು ಹೊಂದಿರುವ ಕಂಪನಿಗೆ ಅಮೇರಿಕಾದಲ್ಲಿಯೂ ಕೂಡ ಅನುಮೋದನೆ ನೀಡಲಾಗುತ್ತದೆ. ಕೊವಿಡ್-19 ಗಾಗಿ ಒಂದು ವ್ಯಾಕ್ಸಿನ್ ಅಭಿವೃದ್ಧಿಗೊಳಿಸಿರುವ ಅಸ್ಟ್ರಾಜೇನಿಕಾ ಕಂಪನಿ, ಸ್ವಯಂಸೇವಕರಿಗೆ ಆಂಟಿಡಾಟ್ ನೀಡುವುದರ ಜೊತೆಗೆ ಪ್ಯಾರಸಿಟಾಮಲ್ ಮಾತ್ರೆಯನ್ನು ಕೂಡ ನೀಡುತ್ತಿತ್ತು. ಇದರಿಂದ ಪ್ರತಿಕೂಲ ಪರಿಣಾಮಗಳನ್ನು ಮರೆಮಾಚಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಭಾರತ್ ಬಯೋಟೆಕ್ ಮೊಟ್ಟಮೊದಲ ಬಾರಿಗೆ ಝೀಕಾ ವೈರಸ್ ಗುರುತು ಪತ್ತೆಹಚ್ಚಿತ್ತು ಹಾಗೂ ಚಿಕುನಗುನ್ಯಾ ಲಸಿಕೆಗಾಗಿ ಜಾಗತಿಕ ಪೇಟೆಂಟ್ ದಾಖಲಿಸದ ಮೊದಲ ಕಂಪನಿಯಾಗಿದೆ ಎಂದು ಅವರ ಹೇಳಿದ್ದಾರೆ.
ಲಸಿಕೆಯ ಒಟ್ಟು 200 ಕೋಟಿ ಡೋಸ್ ಸಿದ್ಧಗೊಂಡಿವೆ.
ತಮ್ಮ ಕಂಪನಿಯ ಉತ್ಪಾದನಾ ಸಾಮರ್ಥ್ಯದ ಕುರಿತು ಮಾತನಾಡಿರುವ ಅವರು, ಲಸಿಕೆ ಉತ್ಪಾದನೆಗಾಗಿ ಒಟ್ಟು ಘಟಕಗಳನ್ನು ಸ್ಥಾಪಿಸುತ್ತಿರುವುದಾಗಿ ಹೇಳಿದ್ದಾರೆ. ಇವುಗಳಲ್ಲಿ ಒಂದು ಘಟಕ ಬೆಂಗಳೂರಿನಲ್ಲಿರಲಿದ್ದು, ಉಳಿದ ಮೂರು ಘಟಕಗಳು ಹೈದ್ರಾಬಾದ್ ನಲ್ಲಿರಲಿವೆ ಎಂದಿದ್ದಾರೆ. ಇವುಗಳ ಒಟ್ಟು ಸಾಮರ್ಥ್ಯ ಪ್ರತಿವರ್ಷ 70 ಕೋಟಿ ಡೋಸ್ ಆಗಿರಲಿದೆ. ಪ್ರಸ್ತುತ ಕಂಪನಿಯ ಬಳಿ ಕೊವ್ಯಾಕ್ಸಿನ್ ನ ಎರಡು ಕೋಟಿ ಪ್ರಮಾಣಗಳು ಸಿದ್ಧಗೊಂಡಿವೆ ಎಂದಿರುವ ಅವರು, ಜುಲೈ-ಆಗಸ್ಟ್ ವರೆಗೆ ಸುಮಾರು 15 ಕೋಟಿ ಡೋಸ್ ಗಳನ್ನು ಉತ್ಪಾದಿಸುವ ಗುರಿಹೊಂದಲಾಗಿದೆ. ಲಸಿಕೆಯ ವಿತರಣೆಗಾಗಿ ಸರ್ಕಾರದ ಜೊತೆ ತಮ್ಮ ಕಂಪನಿ ನಿರಂತರ ಸಂಪರ್ಕದಲ್ಲಿದೆ ಎಂದು ಇಲ್ಲಾ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.