ಚೀನಾಗೆ ಮತ್ತೊಂದು ಆಘಾತ, ಭಾರತದ ಜೊತೆ ಸೇರಿ 5ಜಿ ತಂತ್ರಜ್ಞಾನ ಅಭಿವೃದ್ಧಿಗೊಳಿಸಲಿವೆ ಈ ಎರಡು ಶಕ್ತಿಶಾಲಿ ದೇಶಗಳು

ಚೀನಾಗೆ ಮತ್ತೊಂದು ಆಘಾತ ನೀಡಿರುವ ಭಾರತ ಇದೀಗ ಇಸ್ರೇಲ್ ಹಾಗೂ ಅಮೆರಿಕಾದ ಜೊತೆಗೆ ಸೇರಿ 5G ತಂತ್ರಜ್ಞಾನ ಅಭಿವೃದ್ಧಿಗೊಳಿಸಲಿದೆ.

Last Updated : Sep 8, 2020, 01:28 PM IST
  • ಈ ಮೂರೂ ದೇಶಗಳು ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸಲಿವೆ.
  • ಸಿಲಿಕಾನ್ ವ್ಯಾಲಿ, ಬೆಂಗಳೂರು ಮತ್ತು ಟೆಲ್ ಅವೀವ್ ಬದಲಾವಣೆಯ ವಾಹಕಗಳಾಗಿವೆ.
  • 5 ಜಿ ತಂತ್ರಜ್ಞಾನ ವನ್ನು ಏಕಸ್ವಾಮ್ಯಗೊಳಿಸಲು ಯಾವುದೇ ದೇಶವನ್ನು ಅನುಮತಿಸುವುದಿಲ್ಲ
ಚೀನಾಗೆ ಮತ್ತೊಂದು ಆಘಾತ, ಭಾರತದ ಜೊತೆ ಸೇರಿ 5ಜಿ ತಂತ್ರಜ್ಞಾನ ಅಭಿವೃದ್ಧಿಗೊಳಿಸಲಿವೆ ಈ ಎರಡು ಶಕ್ತಿಶಾಲಿ ದೇಶಗಳು  title=

ವಾಶಿಂಗ್ಟನ್:  ಚೀನಾಗೆ ಮತ್ತೊಂದು ಆಘಾತ ನೀಡಿರುವ ಭಾರತ ಇದೀಗ ಇಸ್ರೇಲ್ ಹಾಗೂ ಅಮೆರಿಕಾದ ಜೊತೆಗೆ ಸೇರಿ 5G ತಂತ್ರಜ್ಞಾನ (5G Technology) ಅಭಿವೃದ್ಧಿಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಸಿಲಿಕಾನ್ ವ್ಯಾಲಿ, ಬೆಂಗಳೂರು ಹಾಗೂ ಟೆಲ್ ಅವೀವ್ ನ ಐಟಿ ಹಬ್ ಪರಸ್ಪರ ಸಹಯೋಗ ನೀಡಲಿವೆ. ಈ ತಂತ್ರಜ್ಞಾನದ ಅಭಿವೃದ್ಧಿಯ ಬಳಿಕ ಇದನ್ನು ಮೂರನೇ ವಿಶ್ವದ ದೇಶಗಳೊಂದಿಗೆ  ಹಂಚಿಕೊಳ್ಳಬಹುದಾಗಿದೆ.

ಭವಿಷ್ಯದ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸಲಿವೆ ಮೂರು ದೇಶಗಳು
ಈ ಪ್ರಮುಖ ಅಂತಾರಾಷ್ಟ್ರೀಯ ಘಟನೆಯ ಕುರಿತು ಮಾಹಿತಿ ನೀಡಿರುವ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID)ನ ಉಪ ಆಡಳಿತಾಧಿಕಾರಿ ಬಾನಿ ಗ್ಲೀಕ್, ಈಗಷ್ಟೇ ಐಸ್ ಕರಗಳು ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಈ ಸಹಯೋಗ ಇನ್ನಷ್ಟು ಆಳವಾಗಲಿದೆ. ಮೂರು ದೇಶಗಳು ಸೇರಿ  ಭವಿಷ್ಯದ ತಂತ್ರಜ್ಞಾನಗಳ ಮೇಲೆ ರಿಸರ್ಚ್ ಹಾಗೂ ಡೆವಲಪ್ಮೆಂಟ್ ನಡೆಸಲಿವೆ.

ಸಿಲಿಕಾನ್ ವ್ಯಾಲಿ, ಬೆಂಗಳೂರು ಹಾಗೂ ಟೆಲ್ ಅವೀವಾ ಈ ಬದಲಾವಣೆಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿವೆ . ವರ್ಚ್ಯುವಲ್ ಶೃಂಗಸಭೆಯೊಂದರಲ್ಲಿ ಮಾತನಾಡಿರುವ ಬಾನಿ ಗ್ಲೀಕ್, 5ಜಿ ತಂತ್ರಜ್ನಾದದ ಕುರಿತು ಜುಲೈ ನಲ್ಲಿ ಒಂದು ದುಂಡು ಮೇಜಿನ ಪರಿಷತ್ತನ್ನು ಆಯೋಜಿಸಲಾಗಿತ್ತು.  ಈ ಪರಿಷತ್ತಿನಲ್ಲಿ ಭಾರತ ಹಾಗೂ ಇಸ್ರೇಲ್ ನ ತಜ್ಞರು ಭಾಗವಹಿಸಿದ್ದರು. ಬೆಂಗಳೂರು, ಸಿಲಿಕಾನ್ ವ್ಯಾಲಿ ಹಾಗೂ ಟೆಲ್ ಅವೀವಾ ನಗರಗಳು ತಂತ್ರಜ್ನಾದದ ಅಭಿವ್ರುದ್ಧಿಗಾಗಿ ಸಾಕಷ್ಟು ಪ್ರಸಿದ್ದಿ ಗಳಿಸಿವೆ ಎಂಬುದರ ಕುರಿತು ಚರ್ಚೆ ನಡೆದಿತ್ತು. ಇಂತಹುದರಲ್ಲಿ ಈ ನಗರಗಳ ತಜ್ಞರು 5 ಜಿ ಹಾಗೂ ಇತರೆ ತಂತ್ರಜ್ಞಾನಗಳ ವಿಕಾಸಕಾಗಿ ಪರಸ್ಪರ ಸೇರಿಕೊಂಡರೆ ಸಂಪೂರ್ಣ ವಿಶ್ವಕ್ಕೆ ಇದಕ್ಕೆ ಲಾಭ ಸಿಗಲಿದೆ.

5 ಜಿ ತಂತ್ರಜ್ಞಾನದ ಮೇಲೆ ಯಾವುದೇ ದೇಶದ ಅಧಿಕಾರ ಇಲ್ಲ
ಒಂದು ವೇಳೆ ಮೂರು ದೇಶಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ವಿಶ್ವದಲ್ಲಿ ವಿಶ್ವಾಸಾರ್ಹ ಹಾಗೂ ಸುರಕ್ಷಿತ 5ಜಿ ತಂತ್ರಜ್ಞಾನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ. ಪರೋಕ್ಷವಾಗಿ ಚೀನಾವನ್ನು ಗುರಿಯಾಗಿಸಿರುವ ಬಾನಿ ಗ್ಲೀಕ್, ನಾವು ಈ ತಂತ್ರಜ್ಞಾನದಲ್ಲಿ ಯಾವುದೇ ಒಂದು ದೇಶದ ಏಕಾಧಿಕಾರ ಅಥವಾ ಇತರ ದೇಶಗಳನ್ನು ತುಳಿಯುವ ಅಧಿಕಾರ ನೀಡುವುದಿಲ್ಲ. ಈ ಮೂರು ದೇಶಗಳ ನಡುವೆ ಈಗಾಗಲೇ ರಕ್ಷಣಾ ಹಾಗೂ ಆರ್ಥಿಕ ಸಹಯೋಗವಿದೆ. ಹೀಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿಒಂದಾಗಿ ಕೆಲಸ ಮಾಡುವುದರಿಂದ, ವಿಶ್ವಾದ್ಯಂತ ಇರುವ ನಾಗರಿಕರ ಜನಜೀವನ ಇನ್ನಷ್ಟು ಸುಧಾರಿಸಲಿದೆ.

Trending News