“ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿ”: ಟ್ರಾಫಿಕ್ ರೂಂಗೆ ಬಂತು ವಿದೇಶದಿಂದ ಬೆದರಿಕೆ ಕರೆ!

ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಸಂದೇಶವೊಂದು ಬಂದಿದ್ದು, “ ಮುಂಬೈ 26/11 ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ” ಎಂದು ವಾಟ್ಸಾಪ್ ಮೆಸೇಜ್ ಬಂದಿದೆ. ಇದು ವಿದೇಶದಿಂದ ಬಂದ ಮೆಸೇಜ್ ಎಂದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಭದ್ರತೆ ಕೈಗೊಂಡಿದ್ದಾರೆ.

Written by - Bhavishya Shetty | Last Updated : Aug 20, 2022, 09:19 AM IST
    • ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಬೆದರಿಕೆ ಸಂದೇಶ
    • ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ ಎಂಬ ಸಂದೇಶ
    • ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಭದ್ರತೆ ಕೈಗೊಂಡಿದ್ದಾರೆ
“ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿ”: ಟ್ರಾಫಿಕ್ ರೂಂಗೆ ಬಂತು ವಿದೇಶದಿಂದ ಬೆದರಿಕೆ ಕರೆ! title=
Mumbai attack 26/11

ನವೆಂಬರ್ 26, 2008 ರಂದು ಮುಂಬೈನಲ್ಲಿ ನಡೆದ ದಾರುಣ ದುರಂತವನ್ನು ಯಾವೊಬ್ಬ ಭಾರತೀಯನೂ ಮರೆಯುವಂತಿಲ್ಲ. ಅಂತಹ ಮತ್ತೊಂದು ಘಟನೆ ನಡೆಯದಿರಲಿ ಎಂಬ ಪ್ರಾರ್ಥನೆ ಪ್ರತಿಯೊಬ್ಬ ಭಾರತೀಯನು ಮಾಡುತ್ತಾನೆ. ಆದರೆ ಇದೀಗ ಮತ್ತೆ ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ ಎಂಬ ಸಂದೇಶ ಬಂದಿದೆ. 

ಇದನ್ನೂ ಓದಿ: ಈ ರಾಜ್ಯಗಳಲ್ಲಿ ಭಾರೀ ಮಳೆ-ಪ್ರವಾಹದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ!

ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಸಂದೇಶವೊಂದು ಬಂದಿದ್ದು, “ ಮುಂಬೈ 26/11 ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ” ಎಂದು ವಾಟ್ಸಾಪ್ ಮೆಸೇಜ್ ಬಂದಿದೆ. ಇದು ವಿದೇಶದಿಂದ ಬಂದ ಮೆಸೇಜ್ ಎಂದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಭದ್ರತೆ ಕೈಗೊಂಡಿದ್ದಾರೆ.

ನವೆಂಬರ್ 26, 2008ರಂದು ಪಾಕಿಸ್ತಾನದಿಂದ 10 ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಆಗಮಿಸಿ ಮುಂಬೈನ್ನು ಮೃತ್ಯುಕೂಪವಾಗಿ ಮಾಡಿದ್ದರು. ಮುಂಬೈನ್ನು ಬರೋಬ್ಬರಿ 60 ಗಂಟೆಗಳ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಪಾಪಿಗಳು 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಹತ್ಯೆ ಮಾಡಿದ್ದರು. ಅದೆಷ್ಟ ಜನ ಈ ದುರಂತದಲ್ಲಿ ಗಾಯಗೊಂಡಿದ್ದರು. 

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 7 ಮಂದಿಯ ದುರ್ಮರಣ, 25ಕ್ಕೂ ಹೆಚ್ಚು ಜನರಿಗೆ ಗಾಯ

ಬಳಿಕ ದೇಶದ ಗಣ್ಯ ಕಮಾಂಡೋ ಪಡೆಗಳಾದ ಎನ್‌ಎಸ್‌ಜಿ ಸೇರಿದಂತೆ ಭದ್ರತಾ ಪಡೆಗಳು ಒಂಬತ್ತು ಭಯೋತ್ಪಾದಕರನ್ನು ಹತ್ಯೆಗೈದವು. ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ಸೆರೆ ಸಿಕ್ಕ ಭಯೋತ್ಪಾದಕ. ನಾಲ್ಕು ವರ್ಷಗಳ ನಂತರ ಅಂದರೆ ನವೆಂಬರ್ 21, 2012 ರಂದು ಆತನನ್ನು ಗಲ್ಲಿಗೇರಿಸಲಾಯಿತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News