Budget 2023: ಬಜೆಟ್ ಮಂಡನೆಗೂ ಮುನ್ನ ಶುಭ ಸುದ್ದಿ: 2023ರಲ್ಲಿ ಹಣದುಬ್ಬರ ಇಳಿಕೆ; ಅಂಕಿ ಅಂಶಗಳು ಹೀಗಿವೆ!

Inflation Rate in India: ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಡೇನಿಯಲ್ ಲೆಹ್ ಮಾಹಿತಿ ನೀಡಿದ್ದು, “ಇತರ ದೇಶಗಳಂತೆ ಭಾರತದಲ್ಲಿ ಹಣದುಬ್ಬರವು 2022ರಲ್ಲಿದ್ದ ಶೇಕಡಾ 6.8 ರಿಂದ, ಈ ವರ್ಷ ಶೇಕಡಾ 5 ಕ್ಕೆ ಇಳಿಯುವ ನಿರೀಕ್ಷೆಯಿದೆ. 2024 ರಲ್ಲಿ, ಇದು ಇನ್ನೂ 4 ಪ್ರತಿಶತಕ್ಕೆ ಇಳಿಯಬಹುದು. ಇದು ಕೇಂದ್ರ ಬ್ಯಾಂಕ್‌ನ ಹಂತಗಳನ್ನು ಭಾಗಶಃ ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Jan 31, 2023, 04:36 PM IST
    • ದೇಶಕ್ಕೆ ಬಜೆಟ್ ಮಂಡನೆಗೂ ಮುನ್ನವೇ ಶುಭಸುದ್ದಿ ಲಭಿಸಿದೆ
    • ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇ.6.8ರಿಂದ ಶೇ.5ಕ್ಕೆ ಇಳಿಯಬಹುದು
    • 2024 ರಲ್ಲಿ, ಇದು 4 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಅಂದಾಜಿಸಲಾಗಿದೆ
Budget 2023: ಬಜೆಟ್ ಮಂಡನೆಗೂ ಮುನ್ನ ಶುಭ ಸುದ್ದಿ: 2023ರಲ್ಲಿ ಹಣದುಬ್ಬರ ಇಳಿಕೆ; ಅಂಕಿ ಅಂಶಗಳು ಹೀಗಿವೆ! title=
Inflation Rate Decline

Inflation Rate in India: ದೇಶಕ್ಕೆ ಬಜೆಟ್ ಮಂಡನೆಗೂ ಮುನ್ನವೇ ಶುಭಸುದ್ದಿ ಲಭಿಸಿದ್ದು, ಹಣದುಬ್ಬರ ದರ ಇಳಿಕೆಯಾಗುವ ಸಾಧ್ಯತೆ ಇದೆ. ಐಎಂಎಫ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇ.6.8ರಿಂದ ಶೇ.5ಕ್ಕೆ ಇಳಿಯಬಹುದು. 2024 ರಲ್ಲಿ, ಇದು 4 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಅಂದಾಜಿಸಲಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ ಪರವಾಗಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಈ ಬಗ್ಗೆ ಹೇಳಲಾಗಿದೆ.

ಇದನ್ನೂ ಓದಿ: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ

2024ರಲ್ಲಿ ಹಣದುಬ್ಬರ ಮತ್ತಷ್ಟು ಇಳಿಕೆ:

ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಡೇನಿಯಲ್ ಲೆಹ್ ಮಾಹಿತಿ ನೀಡಿದ್ದು, “ಇತರ ದೇಶಗಳಂತೆ ಭಾರತದಲ್ಲಿ ಹಣದುಬ್ಬರವು 2022ರಲ್ಲಿದ್ದ ಶೇಕಡಾ 6.8 ರಿಂದ, ಈ ವರ್ಷ ಶೇಕಡಾ 5 ಕ್ಕೆ ಇಳಿಯುವ ನಿರೀಕ್ಷೆಯಿದೆ. 2024 ರಲ್ಲಿ, ಇದು ಇನ್ನೂ 4 ಪ್ರತಿಶತಕ್ಕೆ ಇಳಿಯಬಹುದು. ಇದು ಕೇಂದ್ರ ಬ್ಯಾಂಕ್‌ನ ಹಂತಗಳನ್ನು ಭಾಗಶಃ ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

2022ಕ್ಕೆ ಹೋಲಿಸಿದರೆ ಹಣದುಬ್ಬರ ಕಡಿಮೆ:

“ವಿಶ್ವ ಆರ್ಥಿಕ ಸನ್ನಿವೇಶ'ಕ್ಕೆ ಸಂಬಂಧಿಸಿದಂತೆ ವರದಿಯನ್ನು ನೀಡಲಾಗಿದೆ” ಎಂದು ಐಎಂಎಫ್ ಹೇಳಿದೆ. ಇದರ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು 2022ಕ್ಕೆ ಹೋಲಿಸಿದರೆ ಸುಮಾರು 84 ಪ್ರತಿಶತ ಕಡಿಮೆಯಾಗುತ್ತದೆ.

ಹಣದುಬ್ಬರ ಎಷ್ಟು ಕಡಿಮೆಯಾಗುತ್ತದೆ?

ಜಾಗತಿಕ ಹಣದುಬ್ಬರವು 2022 ರಲ್ಲಿ ಶೇಕಡಾ 8.8 ರಿಂದ 2023 ರಲ್ಲಿ 6.6 ಶೇಕಡಾ ಮತ್ತು 2024 ರಲ್ಲಿ 4.3 ಶೇಕಡಾಕ್ಕೆ ಇಳಿಯಲಿದೆ ಎಂದು ವರದಿ ಹೇಳುತ್ತದೆ. ಸಾಂಕ್ರಾಮಿಕ-ಪೂರ್ವ ಯುಗದಲ್ಲಿ (2017-19), ಇದು ಸುಮಾರು 3.5 ಶೇಕಡಾ ಇತ್ತು.

ಜಾಗತಿಕ ಬೇಡಿಕೆಯಿಂದಾಗಿ ಪರಿಣಾಮ:

ಯೋಜಿತ ಹಣದುಬ್ಬರ ಕುಸಿತವು ಭಾಗಶಃ ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿನ ಇಳಿಕೆ ಮತ್ತು ದುರ್ಬಲ ಜಾಗತಿಕ ಬೇಡಿಕೆಯಿಂದಾಗಿ ಇಂಧನವಲ್ಲದ ಬೆಲೆಗಳನ್ನು ಆಧರಿಸಿದೆ. ವಿತ್ತೀಯ ಬಿಗಿಗೊಳಿಸುವಿಕೆ ಪರಿಣಾಮ ಬೀರುತ್ತಿದೆ ಎಂದು ಇದು ತೋರಿಸುತ್ತದೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಕೋರ್ ಹಣದುಬ್ಬರವು ವಾರ್ಷಿಕ ಆಧಾರದ ಮೇಲೆ 6.9 ಶೇಕಡಾದಿಂದ 2023 ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಶೇಕಡಾ 4.5 ಕ್ಕೆ ಇಳಿಯುತ್ತದೆ ಎಂದು IMF ಹೇಳಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಅಸಾರಾಂ ಬಾಪು ದೋಷಿ, ಕೋರ್ಟ್ ಮಹತ್ವದ ತೀರ್ಪು

ತಜ್ಞರ ಅಭಿಪ್ರಾಯವೇನು?

ಬ್ಲಾಗ್ ಪೋಸ್ಟ್‌ನಲ್ಲಿ, ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪಿಯರೆ-ಒಲಿವಿಯರ್ ಗೊರಿಂಚಸ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಜಾಗತಿಕ ಹಣದುಬ್ಬರವು ಈ ವರ್ಷ ಕಡಿಮೆಯಾಗುವ ನಿರೀಕ್ಷೆಯಿದೆ ಆದರೆ 2024 ರ ವೇಳೆಗೆ 80 ಪ್ರತಿಶತಕ್ಕೂ ಹೆಚ್ಚು ದೇಶಗಳಲ್ಲಿ ಸಾಂಕ್ರಾಮಿಕ ಪೂರ್ವ ಮಟ್ಟವನ್ನು ಮೀರುತ್ತದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News