ನವದೆಹಲಿ: ಪೆಟ್ರೋಲ್-ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ನಡುವೆ ದೇಶದ ಪ್ರಮುಖ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಪೆಟ್ರೋಲ್-ಡೀಸೆಲ್ ಇಲ್ಲದೆ ಓಡುವ ಬೈಕ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಬೈಕ್ ಅನ್ನು ಹೊಗಳಿರುವ ಮಹೀಂದ್ರಾ, ಈ ರೀತಿಯ ಬೈಕ್ ನಿಂದ ದೊಡ್ಡ ವ್ಯಾಪಾರದ ಅವಕಾಶವಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಈ ಬೈಕ್ನಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಈ ಬೈಕುಗಳು ಸೌರ ಶಕ್ತಿಯಿಂದ ಚಾಲನೆಯಾಗುತ್ತದೆ.
ಮಹೀಂದ್ರ ಪೋಸ್ಟ್ ಮಾಡಿದ ವೀಡಿಯೊ ಟಿವಿ 9 ವಾಹಿನಿಯಲ್ಲಿ ಪ್ರಸಾರವಾದ ವಿಡಿಯೋ ಆಗಿದೆ. ಈ ವೀಡಿಯೊ ನವಸಾರಿಯ ಯುವಕನಿಂದ ತಯಾರಿಸಲ್ಪಟ್ಟ ಒಂದು ಸೌರ ಬೈಕ್ ಅನ್ನು ತೋರಿಸುತ್ತದೆ. ಆ ಬೈಕ್ ಚಲಿಸಲು ಯಾವುದೇ ರೀತಿಯ ಇಂಧನವನ್ನು ಬಳಸುವ ಅಗತ್ಯವಿಲ್ಲ.
My message, as co-chair of @GCAS2018 is that sustainability is the world’s next big business opportunity. So I was delighted to receive this video which shows how India’s micro-entrepreneurs & innovators will be amongst the first to seize this opportunity..Watch out world! pic.twitter.com/yEXcyYh6LM
— anand mahindra (@anandmahindra) September 12, 2018
ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಆನಂದ್ ಮಹೀಂದ್ರಾ ಅವರು "ಗ್ಲೋಬಲ್ ಕ್ಲೈಮೇಟ್ ಆಕ್ಷನ್ ಶೃಂಗಸಭೆಯ ಉಪಾಧ್ಯಕ್ಷನಾಗಿರುವ ನನ್ನ ಸಂದೇಶವು ಸಮರ್ಥನೀಯತೆಯಾಗಿದೆ. ಇದು ವಿಶ್ವದ ಮುಂದಿನ ದೊಡ್ಡ ವ್ಯಾಪಾರ ಅವಕಾಶವಾಗಿದೆ. ಭಾರತದ ಸೂಕ್ಷ್ಮ-ಉದ್ಯಮಿಗಳು ಮತ್ತು ಹೊಸತನವನ್ನು ವಶಪಡಿಸಿಕೊಳ್ಳುವಲ್ಲಿ ಮೊದಲಿಗರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಈ ವೀಡಿಯೊವನ್ನು ನೋಡಲು ನನಗೆ ಸಂತಸವಾಯಿತು ಎಂದು ಹೇಳಿದ್ದಾರೆ.
ಸಿವಿಲ್ ಎಂಜಿನಿಯರ್ ಜಿಗರ್ ಪಟೇಲ್ ಎಂಬಾತ ಈ ಬೈಕ್ ಅನ್ನು ರಚಿಸಿದ್ದು, ಈ ಬೈಕಿನ ಹಿಂಭಾಗದ ಸೀಟಿನಲ್ಲಿ ಸೌರ ಫಲಕವನ್ನು ಇರಿಸಲಾಗುತ್ತದೆ ಮತ್ತು ಪ್ಯಾನಲ್ ಹ್ಯಾಂಡಲ್ ಮುಂದೆ ಇಡಲಾಗುತ್ತದೆ. ಸೂರ್ಯ ಬೆಳಕು(ಶಾಖ) ಸಾಕಷ್ಟಿದ್ದಾರೆ ಈ ಬೈಕು 65 ಕಿ.ಮೀ. ವರೆಗೂ ಚಲಿಸುತ್ತದೆ. ಈ ಬೈಕು ತುಂಬಾ ಸೌಂಡ್ ಮಾಡುವುದಿಲ್ಲ. ಯಾವುದೇ ವೆಚ್ಚವಿಲ್ಲದೆ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಲು ಈ ಬೈಕ್ ನಿಮಗೆ ಅವಕಾಶ ನೀಡುತ್ತದೆ.