WATCH: ಕಬಡ್ಡಿ ವೀಡಿಯೋಗೆ ಮಹಾ'ನಾಟಕ ಹೋಲಿಸಿದ ಉದ್ಯಮಿ ಆನಂದ್ ಮಹೇಂದ್ರ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶನಿವಾರ ಕಬಡ್ಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕವನ್ನು ಚಿತ್ರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

Last Updated : Nov 24, 2019, 12:15 PM IST
WATCH: ಕಬಡ್ಡಿ ವೀಡಿಯೋಗೆ ಮಹಾ'ನಾಟಕ ಹೋಲಿಸಿದ ಉದ್ಯಮಿ ಆನಂದ್ ಮಹೇಂದ್ರ  title=

ನವದೆಹಲಿ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶನಿವಾರ ಕಬಡ್ಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕವನ್ನು ಚಿತ್ರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿವಾರ ಬೆಳಗ್ಗೆ ನಡೆದ ಅದ್ಭುತ ಘಟನೆಗಳಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಬಿಜೆಪಿಯೇತರ ಸರ್ಕಾರವನ್ನು ರಚಿಸುವ ಹಕ್ಕು ಪಡೆಯಲು ಮಾತುಕತೆ ನಡೆಸುತ್ತಿದ್ದಾಗ ಈ ಬೆಳವಣಿಗೆ ಸಂಭವಿಸಿದೆ.

ಇದು ಹಳೆಯ ವೈರಲ್ ಆಗಿರುವ ಕಬಡ್ಡಿ ವಿಡಿಯೋ ಆಗಿದ್ದು ಇದರಲ್ಲಿ ರೈಡರ್ ಡಿಫೆಂಡರ್" ನಿಂದ ಸಿಕ್ಕಿಹಾಕಿಕೊಳ್ಳುವುದನ್ನು ತೋರಿಸಿದೆ. "ನಾನು ಟ್ವೀಟ್ ಮಾಡಿದ ಈ ವೀಡಿಯೊವನ್ನು ನೆನಪಿಸಿಕೊಳ್ಳಿ? ಮಹಾರಾಷ್ಟ್ರದಲ್ಲಿ ಏನಾಯಿತು ಎಂಬುದನ್ನು ವಿವರಿಸಲು ಇದಕ್ಕಿಂತ ಸೂಕ್ತವಾದ ಮಾರ್ಗವನ್ನು ನೀವು ಯೋಚಿಸಬಹುದೇ? ಎಂದು ಬರೆದುಕೊಂಡಿದ್ದಾರೆ.

Trending News